Last Updated:
Yasin Malik: ತನ್ನ ಪತ್ನಿ ತನ್ನ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವಂತೆ ಕೇಳಿಕೊಂಡ ಆತ, ದಂಪತಿ ಬೇರ್ಪಡುವ ನಿರ್ಧಾರವು ಅಸಮಾಧಾನದಿಂದ ಅಲ್ಲ ಅಂತಲೂ ಹೇಳಿದ್ದಾನೆ. ತಾನು ಆಕೆಯನ್ನು ಗೌರವದಿಂದ ಕಾಣುತ್ತಿರುವುದಾಗಿ, ಈ ಗೌರವದಿಂದಲೇ ಆಕೆಗೆ ಡಿವೋರ್ಸ್ ನೀಡಲು ಮುಂದಾಗುತ್ತಿರೋದಾಗಿ ಹೇಳಿದ್ದಾನೆ.
ದೆಹಲಿ: ಜೀವಾವಧಿ ಶಿಕ್ಷೆಗೆ ಒಳಗಾಗಿ ತಿಹಾರ್ ಜೈಲಿನಲ್ಲಿ (Tihar Jail) ಇರುವ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ (Kashmiri separatist leader) ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF – Jammu and Kashmir Liberation Front) ಮುಖ್ಯಸ್ಥ, ಉಗ್ರ ಯಾಸಿನ್ ಮಲಿಕ್ (terrorist Yasin Malik) ತನ್ನ ಪಾಕಿಸ್ತಾನಿ ಪತ್ನಿಗೆ (Pakistani Wife) ತಲಾಖ್ (Talaq) ನೀಡಲು ಮುಂದಾಗಿದ್ದಾನೆ. ಜೈಲಿನಿಂದಲೇ ಪಾಕಿಸ್ತಾನದಲ್ಲಿರೋ ಪತ್ನಿ ಮುಷಾಲ್ ಹುಸೇನ್ಗೆ (Mushal Hussain) ಡಿವೋರ್ಸ್ ಕೊಡೋದಾಗಿ ಯಾಸಿನ್ ಮಲ್ಲಿಕ್ ನಿರ್ಧರಿಸಿದ್ದಾನೆ.














