Prithvi Shaw- Akriti: ಅವರ ಮಾತು ಕೇಳಿ ತಪ್ಪು ಮಾಡಿದ್ದೆ! ನಿಶ್ಚಿತಾರ್ಥ ಮುರಿದುಕೊಂಡ 26 ದಿನಗಳಲ್ಲಿ ಮತ್ತೆ ಒಂದಾದ ಕ್ರಿಕೆಟರ್ ಪೃಥ್ವಿ ಶಾ- ಆಕೃತಿ ಅಗರ್ವಾಲ್! | ಕ್ರೀಡಾ ಸುದ್ದಿ | ACTPnews

ಪೃಥ್ವಿ ಶಾ- ಆಕೃತಿ ಅಗರ್ವಾಲ್


Last Updated:

ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸದಾಗಿ ಜಂಟಿ ಹೇಳಿಕೆ ಹಂಚಿಕೊಂಡಿರುವ ಆಕೃತಿ, “ನಾವಿಬ್ಬರೂ ನಮ್ಮ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ನಮ್ಮ ಸಂಬಂಧಕ್ಕೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದ್ದಾರೆ.

 ಪೃಥ್ವಿ ಶಾ- ಆಕೃತಿ ಅಗರ್ವಾಲ್
ಪೃಥ್ವಿ ಶಾ- ಆಕೃತಿ ಅಗರ್ವಾಲ್

ಭಾರತದ ಕ್ರಿಕೆಟಿಗ ಪೃಥ್ವಿ ಶಾ (Prithvi Shaw) ಮತ್ತು ನಟಿ ಆಕೃತಿ ಅಗರ್ವಾಲ್ (Akriti Agarwal) ನಡುವಿನ ಮುರಿದುಬಿದ್ದಿದ್ದ ನಿಶ್ಚಿತಾರ್ಥ (Engagement) ಮತ್ತೆ ಒಂದಾಗಿದ್ದು, ಇಬ್ಬರೂ ತಮ್ಮ ಪ್ರೀತಿಯ ಜೀವನಕ್ಕೆ ಹೊಸ ಆರಂಭ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ಇಬ್ಬರೂ ಜಂಟಿ ಹೇಳಿಕೆ ಹಂಚಿಕೊಳ್ಳುವ ಮೂಲಕ ತಾವು ಮತ್ತೆ ಒಂದಾಗಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹೊಸದಾಗಿ ಜಂಟಿ ಹೇಳಿಕೆ ಹಂಚಿಕೊಂಡಿರುವ ಆಕೃತಿ, “ನಾವಿಬ್ಬರೂ ನಮ್ಮ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ನಮ್ಮ ಸಂಬಂಧಕ್ಕೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಬೇರೆಯವರ ಮಾತಿಗೆ ಮರುಳಾಗಿದ್ದೆವು

ಈ ವರ್ಷದ ಆರಂಭದಲ್ಲಿ ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಕೇವಲ 6 ತಿಂಗಳಲ್ಲೇ ಮನಸ್ತಾಪ ಮಾಡಿಕೊಂಡು ಕಳೆದ ತಿಂಗಳು ಸೆಪ್ಟೆಂಬರ್ 17 ರಂದು ನಿಶ್ಚಿತಾರ್ಥ ಮುರಿದುಬಿದ್ದಿರುವುದಾಗಿ ಘೋಷಿಸಿದ್ದರು. ಈ ಬಗ್ಗೆ ಮೌನ ಮುರಿದಿರುವ ಪೃಥ್ವಿ ಶಾ, “ನಾವು ನಿಶ್ಚಿತಾರ್ಥ ಮುರಿದುಕೊಂಡಾಗ, ನಮ್ಮ ಆಪ್ತರು ಮತ್ತು ಇತರರ ಮಾತುಗಳು ನನ್ನ ಮೇಲೆ ಭಾರಿ ಪ್ರಭಾವ ಬೀರಿದ್ದವು. ನಮ್ಮ ಸಂಬಂಧವನ್ನು ನಮಗಿಂತ ಚೆನ್ನಾಗಿ ಅರ್ಥಮಾಡಿಕೊಂಡಂತೆ ನಟಿಸುವ ಜನರ ಮಾತನ್ನು ಕೇಳಿ ನಾನು ದಾರಿ ತಪ್ಪಿದ್ದೆ. ಆಕೃತಿ ಜೊತೆ ಮುಕ್ತವಾಗಿ ಚರ್ಚಿಸದೆ ನಾನು ಆತುರದ ನಿರ್ಧಾರ ಕೈಗೊಂಡಿದ್ದೆ” ಎಂದು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ.

26 ದಿನಗಳಲ್ಲೇ ತಪ್ಪಿನ ಅರಿವು; ಮತ್ತೆ ಒಂದಾದ ಜೋಡಿ

ನಿಶ್ಚಿತಾರ್ಥ ಮುರಿದುಬಿದ್ದ ಕೇವಲ 26 ದಿನಗಳಲ್ಲೇ ಇಬ್ಬರೂ ಒಟ್ಟಿಗೆ ಕುಳಿತು ಮಾತನಾಡಿ, ಪರಸ್ಪರರ ತಪ್ಪುಗಳನ್ನು ಕ್ಷಮಿಸಿ ಮತ್ತೆ ಒಂದಾಗಲು ನಿರ್ಧರಿಸಿದ್ದಾರೆ. “ನನ್ನ ಆ ನಿರ್ಧಾರದಿಂದ ಉಂಟಾದ ನೋವಿನ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಈಗ ನಾವು ಮುಕ್ತವಾಗಿ ಮಾತನಾಡಿದ್ದೇವೆ. ಪರಸ್ಪರರನ್ನು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಜೀವನಕ್ಕೆ ನಾವಿಬ್ಬರೇ ಸಾಕು, ಯಾವುದೇ ಮೂರನೇ ವ್ಯಕ್ತಿಯ ಅಗತ್ಯ ನಮಗಿಲ್ಲ. ನಮ್ಮ ಈ ಹೊಸ ಪ್ರಯಾಣವನ್ನು ಎಲ್ಲರೂ ಗೌರವಿಸಬೇಕು” ಎಂದು ಪೃಥ್ವಿ ಮತ್ತು ಆಕೃತಿ ಜಂಟಿ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳು ಪ್ರತ್ಯಕ್ಷ!

ಬ್ರೇಕಪ್ ಆದ ತಕ್ಷಣ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಪೃಥ್ವಿ ಶಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ನಿಶ್ಚಿತಾರ್ಥದ ಎಲ್ಲಾ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿದ್ದರು. ಆದರೆ ಈಗ ಪ್ಯಾಚ್-ಅಪ್ ಆದ ಬೆನ್ನಲ್ಲೇ ಪೃಥ್ವಿ ತಮ್ಮ ಖಾತೆಯನ್ನು ಹಳೆಯ ರೂಪಕ್ಕೆ ತಂದಿದ್ದು, ಆಕೃತಿ ಜೊತೆಗಿನ ನಿಶ್ಚಿತಾರ್ಥದ ಫೋಟೋಗಳು ಮತ್ತೆ ಅವರ ಪ್ರೊಫೈಲ್‌ನಲ್ಲಿ ಕಾಣಿಸಿಕೊಂಡಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed