Yash-Ramayana Movie: ನವರಾತ್ರಿಗೆ ‘ರಾಮಾಯಣ’ ಹೊಸ ಪೋಸ್ಟರ್, ದೀಪಾವಳಿ ಹಬ್ಬಕ್ಕೆ ರಿಲೀಸ್ ಪಕ್ಕಾ! | | ACTPnews

ದೀಪಾವಳಿ ಹಬ್ಬಕ್ಕೆ ರಾಕಿ ಭಾಯ್ ರಾಮಾಯಣ!(ಚಿತ್ರ ಕೃಪೆ: ರಾಮಾಯಣ ಸಿನಿಮಾ ಟೀಮ್)


Last Updated:

ರಾಮಾಯಣ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ನವರಾತ್ರಿಯ ಮೊದಲ ದಿನವೇ ಚಿತ್ರದ ಹೊಸ ಪೋಸ್ಟರ್ ಕೂಡ ಹೊರ ಬಂದಿದೆ. ಇದರ ಇನ್ನಷ್ಟು ಅಧಿಕೃತ ವಿವರ ಇಲ್ಲಿದೆ ಓದಿ…

ದೀಪಾವಳಿ ಹಬ್ಬಕ್ಕೆ ರಾಕಿ ಭಾಯ್ ರಾಮಾಯಣ!(ಚಿತ್ರ ಕೃಪೆ: ರಾಮಾಯಣ ಸಿನಿಮಾ ಟೀಮ್)
ದೀಪಾವಳಿ ಹಬ್ಬಕ್ಕೆ ರಾಕಿ ಭಾಯ್ ರಾಮಾಯಣ!(ಚಿತ್ರ ಕೃಪೆ: ರಾಮಾಯಣ ಸಿನಿಮಾ ಟೀಮ್)

ರಾಮಾಯಣ ಸಿನಿಮಾದ (Ramayana Movie) ರಿಲೀಸ್ ಡೇಟ್ ಅನೌನ್ಸ್ (Date Announce) ಆಗಿದೆ. ಮುಂದಿನ ತಿಂಗಳು ಈ ಚಿತ್ರ ತೆರೆ ಕಾಣುತ್ತಿದೆ. ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಬಹು ಭಾಷೆಯಲ್ಲಿ ಇದು ಬಿಡುಗಡೆ ಆಗುತ್ತದೆ. ನವರಾತ್ರಿಯ ಮೊದಲ ದಿನವೇ ಈ ಚಿತ್ರದ ಹೊಸ ಪೋಸ್ಟರ್ (New Poster) ಹೊರ ಬಂದಿದೆ. “ರಾಮನ ಯುಗದ ಆರಂಭ” ಅನ್ನುವ ಸಂದೇಶದ ಜೊತೆಗೆ ಈ ಪೋಸ್ಟರ್ ರಿಲೀಸ್ ಆಗಿದೆ. ಈ ಸಿನಿಮಾದ ಇನ್ನಷ್ಟು ಮಾಹಿತಿಯನ್ನು ಸಿನಿಮಾ ತಂಡ (Movie Team) ಅಧಿಕೃತವಾಗಿ ಹಂಚಿಕೊಂಡಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ರಾಮಾಯಣ

ರಾಮಾಯಣ ಮುಂದಿನ ತಿಂಗಳು ನವೆಂಬರ್-5 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅಭಿನಯಿಸಿದ್ದಾರೆ. ಸೀತೆಯ ರೋಲ್ ಅನ್ನ ಸಾಯಿ ಪಲ್ಲವಿ ಮಾಡಿದ್ದಾರೆ.

yash ranbir kapor sai pallavi ramayana movie latest updates

ನವರಾತ್ರಿಯ ಮೊದಲ ದಿನ ಹೊಸ ಪೋಸ್ಟರ್ ರಿಲೀಸ್
(ಚಿತ್ರ ಕೃಪೆ: ರಾಮಾಯಣ ಸಿನಿಮಾ ಟೀಮ್)

ರಾಕಿಂಗ್ ಸ್ಟಾರ್ ಯಶ್ ಇಲ್ಲಿ ರಾವಣನಾಗಿದ್ದಾರೆ. ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ಅಭಿನಯಿಸಿದ್ದಾರೆ. ಡೈರೆಕ್ಟರ್ ನಿತೇಶ್ ತಿವಾರಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.

ಎರಡು ಭಾಗದಲ್ಲಿ..

ರಾಮಾಯಣ ಚಿತ್ರ ಎರಡು ಭಾಗದಲ್ಲಿ ರಿಲೀಸ್ ಆಗುತ್ತದೆ. ಮೊದಲ ಭಾಗ ಈ ವರ್ಷ ತೆರೆ ಕಾಣುತ್ತಿದೆ. ಎರಡನೇ ಭಾಗ ಮುಂದಿನ ವರ್ಷ 2027 ರ ದೀಪಾವಳಿಗೆ ಬರ್ತಿದೆ.

ಇದನ್ನ ದೆಹಲಿಯಲ್ಲಿ ದೊಡ್ಡ ಇವೆಂಟ್ ಅಲ್ಲಿಯೇ ರಿಲೀಸ್ ಮಾಡಿದ್ದಾರೆ. ಇಡೀ ಚಿತ್ರ ತಂಡ ಇಲ್ಲಿ ಭಾಗಿ ಆಗಿತ್ತು. ಈ ಮೂಲಕ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿತ್ತು.

ನಮಿತ್ ಮಲ್ಹೋತ್ರಾ

ಈ ಚಿತ್ರವನ್ನ ನಮಿತ್ ಮಲ್ಹೋತ್ರಾ ಅವರು ತಮ್ಮ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮೂಲಕ ನಿರ್ಮಿಸಿದ್ದಾರೆ. ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಕೂಡ ಸಾಥ್ ಕೊಟ್ಟಿದೆ. ಎಂಟು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿರುವ ಡಿಎನ್‌ಇಜಿ ಸಂಸ್ಥೆಯ ಕೂಡ ಜೊತೆಗಿದೆ.

yash ranbir kapor sai pallavi ramayana movie latest updates

ದೀಪಾವಳಿ ಹಬ್ಬಕ್ಕೆ ರಾಕಿ ಭಾಯ್ ರಾಮಾಯಣ!
(ಚಿತ್ರ ಕೃಪೆ: ರಾಮಾಯಣ ಸಿನಿಮಾ ಟೀಮ್)

ಇವರೆಲ್ಲ ಸೇರಿಯೇ ರಾಮಾಯಣ ಚಿತ್ರವನ್ನ ನಿರ್ಮಿಸಿದ್ದಾರೆ. ಈ ಚಿತ್ರದ ಹೊಸ ಪೋಸ್ಟರ್ ನವರಾತ್ರಿಯ ಮೊದಲ ದಿನವೇ ರಿಲೀಸ್ ಆಗಿದೆ.

ರಾಮನ ಯುಗ ಆರಂಭ

ಚಿತ್ರದ ಈ ಒಂದು ಪೋಸ್ಟರ್ ಜೊತೆಗೆ ಇನ್ನೂ ಒಂದು ಮಾತನ್ನು ಚಿತ್ರ ತಂಡ ಹೇಳಿಕೊಂಡಿದೆ. ರಾಮನ ಯುಗದ ಆರಂಭ ಅನ್ನೋದೇ ಈ ಸಂದೇಶವಾಗಿದೆ.

ಇದನ್ನೂ ಓದಿ: Lord Gaaga: ವಿಭಿನ್ನ ಪೋಸ್ಟರ್‌ನಿಂದ ಗಮನ ಸೆಳೆದ ‘ಲಾರ್ಡ್ ಗಾಗ’; ನಾಯಕ ಶೂನ್ಯ ಹೇಳಿದ್ದೇನು?

ಚಿತ್ರದಲ್ಲಿ ರಾವಣನಾಗಿಯೇ ಯಶ್ ಅಬ್ಬರಿಸಿದ್ದಾರೆ. ರಾಮನಿಗಿಂತಲೂ ರಾವಣನೇ ಹೆಚ್ಚೇನೋ ಅನ್ನುವ ಮಟ್ಟಿಗೆ ಅಬ್ಬರಿಸಿದ್ದಾರೆ. ಚಿತ್ರದ ಈ ಹೊಸ ಪೋಸ್ಟರ್ ನೋಡಿದ್ರೆ ಆ ಅನುಭವ ಆಗುತ್ತದೆ. ರಾಮ ಮತ್ತು ಸೀತೆ ಹಾಗೂ ಲಕ್ಷ್ಮಣನ ಪಾತ್ರವು ಇಲ್ಲಿವೆ. ಆದರೆ, ರಾವಣನ ಅಬ್ಬರ ಇಲ್ಲಿ ಜಾಸ್ತಿ ಕಾಣುತ್ತದೆ. ಒಟ್ಟಾರೆ, ರಾಮಾಯಣ ಒಂದು ಹೊಸ ಭರವಸೆಯ ಚಿತ್ರವೇ ಆಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed