Last Updated:
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಫಾದರ್ಸ್ ಡೇ ದಿನದಂದು ತಮ್ಮ ಅಪ್ಪನಿಗೆ ಸರ್‌ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಯಶಸ್ವಿ ಜೈಸ್ವಾಲ್ ಕೊಟ್ಟ ಸರ್‌ಪ್ರೈಸ್ ಗಿಫ್ಟ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಟೀಮ್ ಇಂಡಿಯಾ(Team India)ದ ಸ್ಟಾರ್ ಓಪನಿಂಗ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರನ್ನು ಇಂಗ್ಲೆಂಡ್ (England) ವಿರುದ್ಧದ ಏಕದಿನ (ODI) ಸರಣಿಗೆ ಆಯ್ಕೆ ಮಾಡಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಅವರು ಶತಕ (Century) ಗಳಿಸಿದ್ದರು. ಇದರ ಹೊರತಾಗಿಯೂ, ಆಯ್ಕೆದಾರರು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರಿಗೆ ಅವಕಾಶ ನೀಡಲಿಲ್ಲ. ಆದರೆ, ಈ ಎಲ್ಲಾ ಚರ್ಚೆಗಳಿಂದ ದೂರವಾಗಿ, ಯಶಸ್ವಿ ಜೈಸ್ವಾಲ್ ತಮ್ಮ ಕುಟುಂಬದೊಂದಿಗೆ ತಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ. ಫಾದರ್ಸ್ ಡೇ (Father’s Day) ದಿನದಂದು ಅವರ ಎಲ್ಲಾ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಗಳಿಸಿದ್ದಾರೆ.
ಹೌದು, ಫಾದರ್ಸ್ ಡೇ ದಿನದಂದು ಯಶಸ್ವಿ ಜೈಸ್ವಾಲ್ ಅವರು ತಮ್ಮ ಅಪ್ಪನಿಗೆ ಐಷಾರಾಮಿ ಕಾರನ್ನು ಸರ್‌ಪ್ರೈಸ್ ಗಿಫ್ಟ್ ಆಗಿ ನೀಡಿದ್ದಾರೆ. ಇದರೊಂದಿಗೆ ಜೈಸ್ವಾಲ್ ತಮ್ಮ ತಂದೆಯ ಬಹುದಿನದ ಕನಸನ್ನು ಈಡೇರಿಸಿದ್ದಾರೆ. ಈ ಕಾರಿನ ಬೆಲೆಯನ್ನು ಕೇಳಿದ್ರೆ ನೀವು ಬೆಚ್ಚಿ ಬೀಳುವುದು ಫಿಕ್ಸ್.
ಫಾದರ್ಸ್ ಡೇ ದಿನದಂದು ಯಶಸ್ವಿ ಜೈಸ್ವಾಲ್ ಅವರು ತಮ್ಮ ಅಪ್ಪನಿಗೆ ಮರ್ಸಿಡಿಸ್ ಕಾರನ್ನು ಸರ್‌ಪ್ರೈಸ್ ಗಿಫ್ಟ್ ಆಗಿ ನೀಡಿದ್ದಾರೆ. ಅವರ ಕಿರಿಯ ಸಹೋದರ ತೇಜಸ್ವಿ ಜೈಸ್ವಾಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕಾರಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಇಡೀ ಕುಟುಂಬವು ಕಾರಿನೊಂದಿಗೆ ಒಟ್ಟಿಗೆ ಇದ್ದಾರೆ.
ಯಶಸ್ವಿ ಜೈಸ್ವಾಲ್ ಟೀಮ್ ಇಂಡಿಯಾ ಪರ ನಿಯಮಿತವಾಗಿ ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದಾರೆ. ಆದರೆ ಅವರು ಏಕದಿನ ಮತ್ತು ಟಿ20ಗಳಲ್ಲಿ ತಂಡದ ಭಾಗವಾಗಿಲ್ಲ. ವಿರಾಟ್ ಕೊಹ್ಲಿ ಗಾಯಗೊಂಡ ನಂತರ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಅವರಿಗೆ ಅವಕಾಶ ನೀಡಲಾಯಿತು. ಸರಣಿಯ ಅಂತಿಮ ಏಕದಿನ ಪಂದ್ಯದಲ್ಲಿ, ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿ, ಅಜೇಯ 110 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅವರು ಇಲ್ಲಿಯವರೆಗೆ ಟೀಮ್ ಇಂಡಿಯಾ ಪರ ಆರು ಏಕದಿನ ಪಂದ್ಯಗಳನ್ನು ಆಡಿದ್ದು, ಎರಡು ಶತಕಗಳನ್ನು ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 71 ಆಗಿದೆ.
Yashasvi Jaiswal: ಫಾದರ್ಸ್ ಡೇ ದಿನ ಅಪ್ಪನಿಗೆ ಸರ್‌ಪ್ರೈಸ್ ಗಿಫ್ಟ್ ಕೊಟ್ಟ ಜೈಸ್ವಾಲ್! ತಂದೆಯ ಬಹುದಿನದ ಕನಸನ್ನು ಈಡೇರಿಸಿದ್ದು ಹೇಗೆ ಗೊತ್ತಾ?













