Asian Games 2026: 2ನೇ ಸ್ವರ್ಣ ಪದಕ ಗೆದ್ದ ನೀರೂ ಧಾಂಡಾ! ಟ್ರ್ಯಾಪ್ ಮಿಶ್ರ ತಂಡ ವಿಭಾಗದಲ್ಲಿ ಐತಿಹಾಸಿಕ ಚಿನ್ನ | ಕ್ರೀಡಾ ಸುದ್ದಿ | ACTPnews

ನೀರೂ ಧಾಂಡಾ


Last Updated:

ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದು ಫೈನಲ್ ತಲುಪಿದ್ದ ಧಾಂಡಾ ಮತ್ತು ಕಿನಾನ್ ಚೆನೈ ಜೋಡಿಯು, ಪ್ರಶಸ್ತಿ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿ 34 ಅಂಕಗಳನ್ನು ಗಳಿಸಿತು. ಈ ಮೂಲಕ ಇದೇ ವರ್ಷದ ಜನವರಿಯಲ್ಲಿ ಕತಾರ್ ದೇಶವು ನಿರ್ಮಿಸಿದ್ದ 30 ಅಂಕಗಳ ಹಳೆಯ ಏಷ್ಯನ್ ದಾಖಲೆಯನ್ನು ಭಾರತೀಯ ಶೂಟರ್‌ಗಳು ಧೂಳೀಪಟ ಮಾಡಿದರು.

ನೀರೂ ಧಾಂಡಾ
ನೀರೂ ಧಾಂಡಾ

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾರತದ ಸ್ಟಾರ್ ಶೂಟರ್ ನೀರೂ ಧಾಂಡಾ ಅವರ (Neeru Dhanda And Kynan Chenai) ಸುವರ್ಣ ಬೇಟೆ ಮುಂದುವರಿದಿದೆ. ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ವಿಭಾಗದಲ್ಲಿ ಐತಿಹಾಸಿಕ ಚಿನ್ನ ಗೆದ್ದ ಮರುದಿನವೇ (ಬುಧವಾರ), ಅವರು ಕಿನಾನ್ ಚೆನೈ ಜೊತೆಗೂಡಿ ಟ್ರ್ಯಾಪ್ ಮಿಶ್ರ ತಂಡ ವಿಭಾಗದಲ್ಲೂ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಅದ್ಭುತ ಗೆಲುವಿನೊಂದಿಗೆ ಭಾರತೀಯ ಜೋಡಿಯು ಹೊಸ ಏಷ್ಯನ್ ದಾಖಲೆಯನ್ನು ಬ್ರೇಕ್ ಮಾಡಿದೆ.

ಇದು ಪ್ರಸಕ್ತ ಏಷ್ಯನ್ ಗೇಮ್ಸ್‌ನ ಬುಧವಾರದ ದಿನದಾಟದಲ್ಲಿ ಭಾರತಕ್ಕೆ ಸಿಕ್ಕ ಮೂರನೇ ಚಿನ್ನದ ಪದಕವಾಗಿದ್ದು, ಒಟ್ಟಾರೆ ಪದಕ ಪಟ್ಟಿಯಲ್ಲಿ ಭಾರತದ ಚಿನ್ನದ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕ

ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದು ಫೈನಲ್ ತಲುಪಿದ್ದ ಧಾಂಡಾ ಮತ್ತು ಕಿನಾನ್ ಚೆನೈ ಜೋಡಿಯು, ಪ್ರಶಸ್ತಿ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿ 34 ಅಂಕಗಳನ್ನು ಗಳಿಸಿತು. ಈ ಮೂಲಕ ಇದೇ ವರ್ಷದ ಜನವರಿಯಲ್ಲಿ ಕತಾರ್ ದೇಶವು ನಿರ್ಮಿಸಿದ್ದ 30 ಅಂಕಗಳ ಹಳೆಯ ಏಷ್ಯನ್ ದಾಖಲೆಯನ್ನು ಭಾರತೀಯ ಶೂಟರ್‌ಗಳು ಧೂಳೀಪಟ ಮಾಡಿದರು. ಪಂದ್ಯದಲ್ಲಿ ಕತಾರ್‌ನ ಮೊಹಮ್ಮದ್ ಅಲ್-ರುಮೈಹಿ ಮತ್ತು ರೇ ಬಾಸಿಲ್ ಜೋಡಿಯು 32 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಚೀನಾದ ಕಿ ಯಿಂಗ್ ಮತ್ತು ಸುನ್ ಯುನೊಂಗ್ ಜೋಡಿ (23 ಅಂಕ) ಕಂಚಿನ ಪದಕ ಪಡೆಯಿತು.

ರೋಚಕ ಫೈನಲ್ ಜಯ ಮತ್ತು ಆಟಗಾರರ ಪ್ರತಿಕ್ರಿಯೆ

ಅರ್ಹತಾ ಸುತ್ತಿನಲ್ಲಿ ಕಿನಾನ್ 73 ಅಂಕಗಳನ್ನು ಗಳಿಸಿ ಭಾರತಕ್ಕೆ ಆಸರೆಯಾಗಿದ್ದರು. ಫೈನಲ್‌ನಲ್ಲೂ ತಮ್ಮ ಅತ್ಯುತ್ತಮ ಫಾರ್ಮ್ ಮುಂದುವರಿಸಿ ನಿಖರ ಗುರಿ ಇಟ್ಟರು. ಇವರ ತಂದೆ ಡೇರಿಯಸ್ ಕೂಡ ರಾಷ್ಟ್ರ ಮಟ್ಟದ ಶೂಟರ್ ಆಗಿದ್ದರು. ಗೆಲುವಿನ ಬಳಿಕ ಮಾತನಾಡಿದ ಕಿನಾನ್, “ನನ್ನ ಮತ್ತು ನೀರೂ ಅವರ ಜೋಡಿ ತುಂಬಾ ಲಕ್ಕಿ. ಈ ವರ್ಷದ ಆರಂಭದಲ್ಲೂ ನಾವು ವಿಶ್ವಕಪ್​ನಲ್ಲಿ ಕಂಚು ಗೆದ್ದಿದ್ದೆವು. ನಾವಿಬ್ಬರು ಹೀಗೆ ಮಿಶ್ರ ಡಬಲ್ಸ್​ನಲ್ಲಿ ಮುಂದುವರಿಯಬೇಕೆಂದು ಬಯಸುತ್ತೇನೆ, ಆದರೆ ಅದೆಲ್ಲವೂ ಫೆಡೆರೇಷನ್​​ ಮೇಲೆ ಅವಲಂಬಿತವಾಗಲಿದೆ ಎಂದಿದ್ದಾರೆ.

ಚೇತರಿಸಿಕೊಂಡು ಚಿನ್ನ ಗೆದ್ದಿದ್ದಕ್ಕೆ ಸಂತಸವಿದೆ

ಸತತ 2ನೇ ಚಿನ್ನದ ಪದಕ ಗೆದ್ದು ಮಾತನಾಡಿದ ನೀರೂ, ಅರ್ಹತಾ ಸುತ್ತಿನಲ್ಲಿ (Qualification) ನನ್ನ ಸ್ಕೋರ್ ಅಷ್ಟೊಂದು ಉತ್ತಮವಾಗಿರಲಿಲ್ಲ. ಅದಕ್ಕೆ ಪ್ರಮುಖ ಕಾರಣ, ನಿನ್ನೆ ನಡೆದ ಕಠಿಣ ವೈಯಕ್ತಿಕ ಪಂದ್ಯದ ಒತ್ತಡದಿಂದಾಗಿ ನನ್ನ ದೇಹದಲ್ಲಿ ತೀವ್ರ ಬಿಗಿತ ಉಂಟಾಗಿತ್ತು. ಇದರ ಜೊತೆಗೆ, ಜಪಾನ್‌ನಲ್ಲಿ ಸುರಿಯುತ್ತಿರುವ ಮಳೆ ಮತ್ತು ಅಲ್ಲಿನ ವಿಪರೀತ ಚಳಿಯ ವಾತಾವರಣವು ನನ್ನ ದೇಹದ ಮೇಲೆ ಸಾಕಷ್ಟು ಪರಿಣಾಮ ಬೀರಿತು. ಆದರೂ ಫೈನಲ್‌ನಲ್ಲಿ ಕಂಬ್ಯಾಕ್ ಮಾಡಿ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದು ಸಂತಸ ತಂದಿದೆ ಎಂದಿದ್ದಾರೆ.

3ನೇ ಪದಕ ಗೆದ್ದ ಧಾಂಡಾ

26 ವರ್ಷದ ಹರಿಯಾಣದ ಶೂಟರ್ ನೀರೂ ಧಾಂಡಾ ಪಾಲಿಗೆ ಈ ಬಾರಿಯ ಏಷ್ಯನ್ ಗೇಮ್ಸ್ ಅತ್ಯಂತ ಸ್ಮರಣೀಯವಾಗಿ ಮೂಡಿಬಂದಿದೆ. ಅವರು ವೈಯಕ್ತಿಕ ಚಿನ್ನ, ಮಹಿಳಾ ತಂಡ ವಿಭಾಗದಲ್ಲಿ ಬೆಳ್ಳಿ ಹಾಗೂ ಈಗ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಗೆದ್ದು ಒಟ್ಟು 3 ಪದಕಗಳೊಂದಿಗೆ (2 ಚಿನ್ನ, 1 ಬೆಳ್ಳಿ) ಭಾರತದ ಹೆಮ್ಮೆಯ ತಾರೆಯಾಗಿ ಮಿಂಚಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed