Blue Drum Case: ಮೀರತ್ ಬ್ಲೂ ಡ್ರಮ್ ಕೇಸ್​​ನಲ್ಲಿ ಬಿಗ್ ಟ್ವಿಸ್ಟ್! ಕೋರ್ಟ್​ನಿಂದ ಮಹತ್ವದ ತೀರ್ಪು ಪ್ರಕಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮುಸ್ಕಾನ್​ - ಸಾಹಿಲ್​


Last Updated:

ಮೀರತ್ ನೀಲಿ ಡ್ರಮ್ ಕೇಸ್​ಗೆ ಸಂಬಂಧಪಟ್ಟಂತೆ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಸ್ಕಾನ್​ - ಸಾಹಿಲ್​
ಮುಸ್ಕಾನ್​ – ಸಾಹಿಲ್​

ಕಳೆದ ವರ್ಷ ಮೀರತ್‌ನಲ್ಲಿ (Meerut) ನಡೆದಿದ್ದ ನೀಲಿ ಡ್ರಮ್ (Blue Drum)​ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಮುಸ್ಕಾನ್ (Muskan) ಎಂಬ ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಬಳಿಕ ಸಿಮೆಂಟ್ ತುಂಬಿದ್ದ ನೀಲಿ ಬಣ್ಣದ ಡ್ರಮ್​ಗೆ ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಳು. ಸದ್ಯ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮೀರತ್​​ ಕೋರ್ಟ್ ಆರೋಪಿಗಳಾದ ಮುಸ್ಕಾನ್ ಮತ್ತು ಸಾಹಿಲ್ ಅವರನ್ನು ದೋಷಿಗಳೆಂದು ತೀರ್ಪು ನೀಡಿದೆ. ಹಾಗೆಯೇ, ಶಿಕ್ಷೆಯ ಪ್ರಕಟಣೆ 14 ದಿನಗಳ ನಂತರ ನಡೆಯಲಿದ್ದು, ಕೋರ್ಟ್ ಅಕ್ಟೋಬರ್ 14 ರ ದಿನಾಂಕವನ್ನು ನಿಗದಿಪಡಿಸಿದೆ.

126 ಬಾರಿ ವಿಚಾರಣೆ, 22 ಸಾಕ್ಷಿಗಳು ಮತ್ತು ಸುದೀರ್ಘ ವಿಚಾರಣೆ

ಸೌರಭ್ ರಜ್‌ಪೂತ್ ಹತ್ಯೆ ಪ್ರಕರಣದ ಆರೋಪಿಗಳಾದ ಮುಸ್ಕಾನ್ ಮತ್ತು ಸಾಹಿಲ್ ಅವರ ಬಂಧನದ ನಂತರ ಕೋರ್ಟ್‌ನಲ್ಲಿ 126 ಬಾರಿ ವಿಚಾರಣೆ ನಡೆಯಿತು. 22 ಜನರು ಈ ಹತ್ಯಾಕಾಂಡದ ಸಾಕ್ಷಿಗಳಾದರು ಮತ್ತು ಸುಮಾರು 19 ತಿಂಗಳ ಸುದೀರ್ಘ ವಿಚಾರಣೆಯ ನಂತರ ಇಬ್ಬರನ್ನೂ ದೋಷಿಗಳೆಂದು ಘೋಷಿಸಲಾಗಿದೆ.

ಶಿಕ್ಷೆಯ ಪ್ರಕಟಣೆ ಯಾವಾಗ?

ಮುಸ್ಕಾನ್ ಮತ್ತು ಸಾಹಿಲ್ ತಮ್ಮ ಕೃತ್ಯಕ್ಕೆ ತಕ್ಕ ಶಿಕ್ಷೆಯನ್ನು ಆದಷ್ಟು ಬೇಗ ಪಡೆಯಬೇಕು ಎಂದು ಸೌರಭ್ ರಜ್‌ಪೂತ್ ಅವರ ಕುಟುಂಬವು ಕಾಯುತ್ತಿದೆ. ಈ ಮಧ್ಯೆ, ಕೋರ್ಟ್ ಇನ್ನೂ ಶಿಕ್ಷೆಯನ್ನು ಪ್ರಕಟಿಸಿಲ್ಲ. ಆದ್ರೆ, ಇಬ್ಬರೂ ದೋಷಿಗಳಿಗೆ ಗಲ್ಲು ಶಿಕ್ಷೆಗಿಂತ ಕಡಿಮೆ ಶಿಕ್ಷೆಯಾಗಬಾರದು ಎಂದು ಮೃತ ಸೌರಭ್ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಒಂದು ವೇಳೆ ಗಲ್ಲು ಶಿಕ್ಷೆಯಾಗದಿದ್ದರೆ, ನ್ಯಾಯಕ್ಕಾಗಿ ಅವರು ಸುಪ್ರೀಂ ಕೋರ್ಟ್ ವರೆಗೆ ಹೋರಾಟದ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ಏನಿದು ಬ್ಲೂ ಡ್ರಮ್​ ಪ್ರಕರಣ?

2025ರ ಮಾರ್ಚ್ 4ರಂದು ಸೌರಭ್ ಭಾರದ್ವಾಜ್ ಅವರ ಹತ್ಯೆ ಮಾಡಲಾಗಿತ್ತು. ಸೌರಭ್ ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದು, ನಂತರ ವಿದೇಶದಲ್ಲಿ ಕೆಲಸ ಮಾಡಲು ಹೋಗಿದ್ದರು. ಆದ್ರೆ, ಭಾರತದಲ್ಲಿದ್ದ ಅವರ ಪತ್ನಿ ಮುಸ್ಕಾನ್‌ಗೆ ಸಾಹಿಲ್ ಎಂಬಾತನ ಮೇಲೆ ಪ್ರೀತಿ ಹುಟ್ಟಿತ್ತು, ಆದ್ರೆ, ತಮ್ಮ ಅಕ್ರಮ ಸಂಬಂಧಕ್ಕೆ ಪತಿ ಸೌರಭ್​ ಅಡ್ಡಿಯಾಗುತ್ತಿದ್ದಾನೆ ಎಂದು ಇಬ್ಬರು ಸೇರಿ ಆತನನ್ನು ಕೊಲ್ಲಲು ಪ್ಲಾನ್​ ಮಾಡಿದ್ದರು. ಬಳಿಕ ಆತ ಭಾರತಕ್ಕೆ ಬಂದಾಗ ನಿದ್ದೆ ಮಾತ್ರೆ ನೀಡಿ, ಕೊಲೆ ಮಾಡಿ ಬಳಿಕ ಶವವನ್ನು ಬ್ಲೂ ಡ್ರಮ್​ನಲ್ಲಿ ಮುಚ್ಚಿಟ್ಟಿದ್ದರು.
ಸೌರಭ್ ರಜ್‌ಪೂತ್ ಕೊಲೆಯ ಟೈಮ್‌ಲೈನ್

ಸೌರಭ್ ಮತ್ತು ಮುಸ್ಕಾನ್ ಪ್ರೇಮ ವಿವಾಹವಾಗಿದ್ದರು. ಇಬ್ಬರಿಗೂ ಒಂದು ಹೆಣ್ಣು ಮಗುವಿತ್ತು.

  • 2025ರ ಫೆಬ್ರವರಿ 24: ಸೌರಭ್ ರಜ್‌ಪೂತ್ ಲಂಡನ್‌ನಿಂದ ಮೀರತ್​ಗೆ ತಮ್ಮ ಮನೆಗೆ ವಾಪಸ್ ಬಂದಿದ್ದರು.
  • ಫೆಬ್ರವರಿ 25: ಮನೆಯಲ್ಲಿಯೇ ಪತ್ನಿ ಮುಸ್ಕಾನ್ ಹುಟ್ಟುಹಬ್ಬ ಆಚರಿಸಲಾಯಿತು.
  • ಫೆಬ್ರವರಿ 28: ಮಗಳು ಪಿಯೂ ಹುಟ್ಟುಹಬ್ಬ ಆಚರಿಸಲಾಯಿತು.
  • ಮಾರ್ಚ್ 3: ಮುಸ್ಕಾನ್ ಸೌರಭ್‌ಗೆ ನಿದ್ರೆ ಮಾತ್ರೆ ನೀಡಿದ. ಸಾಹಿಲ್ ಅವರನ್ನು ಕರೆಸಿ ಸೌರಭ್ ಹತ್ಯೆಯನ್ನು ಮಾಡಲಾಯಿತು.
  • ಮಾರ್ಚ್ 4: ಮುಸ್ಕಾನ್ ತನ್ನ ಮಗಳನ್ನು ತವರು ಮನೆಯಲ್ಲಿ ಬಿಟ್ಟು, ಪ್ರೇಮಿ ಸಾಹಿಲ್ ಜತೆ ಶಿಮ್ಲಾಕ್ಕೆ ಹೊರಟುಹೋದರು.
  • ಮಾರ್ಚ್ 17: ಶಿಮ್ಲಾದಿಂದ ವಾಪಸ್ ಬಂದು ಮುಸ್ಕಾನ್ ತನ್ನ ತವರು ಮನೆಗೆ ತೆರಳಿ ಮನೆಯವರಿಗೆ ಸೌರಭ್ ಬಗ್ಗೆ ತಿಳಿಸಿದರು.
  • ಮಾರ್ಚ್ 18: ಪೊಲೀಸರು ಸೌರಭ್ ಅವರ ಮನೆಗೆ ತಲುಪಿದರು. ಅಲ್ಲಿಂದ ಸೌರಭ್ ಅವರ ಶವವಿದ್ದ ನೀಲಿ ಡ್ರಮ್ ಅನ್ನು ವಶಪಡಿಸಿಕೊಳ್ಳಲಾಯಿತು.
  • ಮಾರ್ಚ್ 18: ಸಾಹಿಲ್ ಮತ್ತು ಮುಸ್ಕಾನ್ ಅವರನ್ನು ಪೊಲೀಸರು ಬಂಧಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed