City Lights Success Meet: ಮೊನಿಷಾ ಕಣ್ಣೀರಿಟ್ಟ ಕ್ಷಣ; ಮಗಳಿಗಾಗಿ ದುನಿಯಾ ವಿಜಯ್ ನಿರ್ದೇಶಕನಾದ ಕಥೆ ಇಲ್ಲಿದೆ! | | ACTPnews

City Lights Movie Success Meet Monisha Vijay Kumar Duniya Vijay Got Emotional


ಅಪ್ಪನ ಮಾತು ಕೇಳಿ…

ಮೊನಿಷಾ ವಿಜಯ್ ಕುಮಾರ್ ಎಮೋಷನಲ್ ಆಗಿದ್ದರು. ಕಣ್ಣಾಲೆಗಳು ತೇವಗೊಂಡಿದ್ದವು. ಅಪ್ಪನ ಮಾತು ಮತ್ತು ಕಷ್ಟ ನೋಡಿ ಮೊನಿಷಾ ಎಮೋಷನಲ್ ಆಗಿದ್ದರು.

ಕಣ್ಣೀರಾದ ಮಗಳು ಮೊನಿಷಾ

(ಚಿತ್ರ ಕೃಪೆ: ಮೊನಿಷಾ ವಿಜಯ್ ಕುಮಾರ್ ಇನ್​ಸ್ಟಾಗ್ರಾಮ್)

ಮೊನಿಷಾ ಅವರಿಗೆ ಸಿಟಿ ಲೈಟ್ಸ್ ಮೊದಲ ಚಿತ್ರವೇ ಆಗಿದೆ. ಈ ಮೊದಲ ಚಿತ್ರದ ಸಕ್ಸಸ್ ಮೀಟ್ ಅಲ್ಲಿಯೇ ಮೊನಿಷಾ ವಿಜಯ್ ಎಮೋಷನಲ್ ಆಗಿದ್ದರು.

ಅಪ್ಪ ನನಗಾಗಿ ಎರಡು ವರ್ಷ ಈ ಚಿತ್ರದ ಮೇಲೆ ಕೆಲಸ ಮಾಡಿದ್ದಾರೆ. ಇವರ ಕಷ್ಟ ನೋಡಿದ್ದೇನೆ. “ಸಲಗ ಮತ್ತು ಭೀಮ ಸಕ್ಸಸ್ ಕೊಟ್ಟಿದ್ದರು. ಆದರೆ ತಮ್ಮ ಕರಿಯರ್ ನೋಡದೇ ನನಗೆ ಚಿತ್ರ ಮಾಡಿದ್ದಾರೆ” ಅಂತಲೇ ಮೊನಿಷಾ ವಿಜಯ್ ಕುಮಾರ್ ಕಣ್ಣೀರಾಗಿದ್ದಾರೆ.

ಅಪ್ಪ ನನ್ನ ನಟನೆ…

ನಮ್ಮ ತಂದೆ ನನ್ನ ನಟನೆ ಚೆನ್ನಾಗಿದೆ ಅಂತ ಹೇಳಲೇ ಇಲ್ಲ. ಆದರೆ, ಎಲ್ಲವನ್ನೂ ಹೇಳಿಕೊಟ್ಟಿದ್ದಾರೆ. ಎಲ್ಲವನ್ನೂ ಕಲಿಸಿಕೊಟ್ಟಿದ್ದಾರೆ ಅಂತಲೂ ಮೊನಿಷಾ ವಿಜಯ್ ಕುಮಾರ್ ಹೇಳಿಕೊಂಡಿದ್ದಾರೆ.

ಮೊದಲ ಚಿತ್ರದಲ್ಲಿಯೇ

ಮೊನಿಷಾ ವಿಜಯ್ ಕುಮಾರ್ ಮೊದಲ ಚಿತ್ರದಲ್ಲಿಯೆ ಒಳ್ಳೆ ಸ್ಕೋರ್ ಮಾಡಿದ್ದಾರೆ. ಸಹಜ ನಟನೆ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ. ಒಳ್ಳೆ ಅಭಿನಯವನ್ನೆ ದುನಿಯಾ ವಿಜಯ್ ಇಲ್ಲಿ ತೆಗೆಸಿದ್ದಾರೆ.

ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಕೂಡ ಒಳ್ಳೆ ಕೆಲಸ ಮಾಡಿದ್ದಾರೆ. ಚಿತ್ರದ ಅಭಿನಯ ಮತ್ತು ಗೆಲುವು ಇವರಿಗೆ ಖುಷಿ ತಂದಿದೆ.

ಫ್ಯಾನ್ಸ್ ಕಣ್ಣುಗಳಲ್ಲಿ ಆ ಹೆಮ್ಮೆಯನ್ನ ಕಾಣುತ್ತಿದ್ದೇನೆ ಅಂತಲೇ ವಿನಯ್ ರಾಜ್‌ಕುಮಾರ್ ಹೇಳಿಕೊಂಡಿದ್ದಾರೆ.

City Lights Movie Success Meet Monisha Vijay Kumar Duniya Vijay Got Emotional

ಡೈರೆಕ್ಷನ್ ವಿಜಯ್ ಎಮೋಷನಲ್

(ಚಿತ್ರ ಕೃಪೆ: ಮೊನಿಷಾ ವಿಜಯ್ ಕುಮಾರ್ ಇನ್​ಸ್ಟಾಗ್ರಾಮ್)

ನಾನು ಯಾರು ಅಂತ…

ದುನಿಯಾ ವಿಜಯ್ ಕೂಡ ಇಲ್ಲಿ ಎಮೋಷನಲ್ ಆಗಿರೋದು ಇದೆ. ಈ ಕ್ಷಣದಲ್ಲಿಯೇ ದುನಿಯಾ ವಿಜಯ್ ಮಾತನಾಡಿದ್ದಾರೆ. ದುನಿಯಾ ಚಿತ್ರ ಬಂದಾಗ ನಾನು ಯಾರೂ ಅಂತ ಜನ ನೋಡಲಿಲ್ಲ. ಚಿತ್ರ ಗೆಲ್ಲಿಸಿದರು.

ಆದರೆ, ಚಿತ್ರವನ್ನ ಎಲ್ಲ ಹೀರೋಗಳು ನೋಡಿ ಸಪೋರ್ಟ್ ಮಾಡಿದ್ದಾರೆ. ವಿನಯ್ ಮತ್ತು ಮೊನಿಷಾಗೆ ಸಪೋರ್ಟ್ ಮಾಡಿದ್ದಾರೆ. ಇವರಿಗೆ ಧನ್ಯವಾದಗಳು ಅಂತಲೇ ದುನಿಯಾ ವಿಜಯ್ ಹೇಳಿದ್ದಾರೆ.

ಸಿಟಿ ಲೈಟ್ಸ್ ವಿಜಯ ಯಾತ್ರೆ

ಸಿಟಿ ಲೈಟ್ಸ್ ಚಿತ್ರ ವಿಜಯ ಯಾತ್ರೆ ಪ್ಲಾನ್ ಮಾಡಿದೆ. ರಾಜ್ಯದ ಪ್ರತಿ ಜಿಲ್ಲೆಗೂ ಭೇಟಿ ಕೊಡುವ ಪ್ಲಾನ್ ಮಾಡಿದ್ದಾರೆ. ತಮ್ಮ ಚಿತ್ರವನ್ನ ನೋಡಿ ಹರೆಸಿದ ಸಿನಿಮಾ ಪ್ರೇಮಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed