Wrestler Meenakshi Goyat Journey: ತಾಯಿಗೆ ಕ್ಯಾನ್ಸರ್, ಗಾಯಗೊಂಡು 6 ತಿಂಗಳು ಹಾಸಿಗೆ ಹಿಡಿದ್ರು ಫಿನಿಕ್ಸ್‌ನಂತೆ ಎದ್ದು ಬಂದ ಕುಸ್ತಿಪಟು! | ಕ್ರೀಡಾ ಸುದ್ದಿ | ACTPnews

ಕುಸ್ತಿಪಟು ಮೀನಾಕ್ಷಿ ಗೋಯತ್


Last Updated:

53 ಕೆಜಿ ವಿಭಾಗದಲ್ಲಿ ವಿನೇಶ್ ಫೋಗಟ್ ವಿರುದ್ಧ ಗೆಲುವು ಪಡೆದಿರುವ ಮೀನಾಕ್ಷಿ. ಸುಪ್ರೀಂ ಕೋರ್ಟ್ ಅನುಮತಿಯೊಂದಿಗೆ ನಡೆದಿದ್ದ ಟ್ರಯಲ್ಸ್‌ನಲ್ಲಿ ವಿನೇಶ್‌ಗೆ ಶಾಕ್ ನೀಡಿದ್ದ ಮೀನಾಕ್ಷಿ. ಸದ್ಯ ಕುಟುಂಬದ ಕಷ್ಟಗಳು, ಗಾಯದ ಸಮಸ್ಯೆ ಸೇರಿದಂತೆ ತಾವು ಎದುರಿಸಿದ್ದ ಸವಾಲುಗಳನ್ನು ಎದುರಿಸಿ ಸ್ಟಾರ್ ಕುಸ್ತಿಪಟು ಆಗಿ ಹೊರಹೊಮ್ಮಿದ್ದು ಹೇಗೆ? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.

ಕುಸ್ತಿಪಟು ಮೀನಾಕ್ಷಿ ಗೋಯತ್
ಕುಸ್ತಿಪಟು ಮೀನಾಕ್ಷಿ ಗೋಯತ್

Wrestler Meenakshi Goyat: ಏಷ್ಯನ್ ಗೇಮ್ಸ್ 2026ಕ್ಕಾಗಿ (Asian Games) ನಡೆದ ಕುಸ್ತಿಪಟುಗಳ ಟ್ರಯಲ್ಸ್ ಪಂದ್ಯದಲ್ಲಿ ಭಾರತದ ಸ್ಟಾರ್ ಕುಸ್ತಿಪಟು, ಒಲಂಪಿಕ್ಸ್ ಪದಕ ವಿಜೇತ ವಿನೇಶ್ ಫೋಗಟ್ (Vinesh Phogat) ಅವರಿಗೆ ಬಿಗ್ ಶಾಕ್ ಎದುರಾಗಿತ್ತು. ಶನಿವಾರ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮಹಿಳಾ 53 ಕೆಜಿ ಫ್ರೀಸ್ಟೈಲ್ ವಿಭಾಗದ ಸೆಮಿಫೈನಲ್‌ನಲ್ಲಿ ಹರಿಯಾಣದ (Haryana) ಜಿಂದ್ ಜಿಲ್ಲೆಯ ಯುವ ಕುಸ್ತಿಪಟು ಮೀನಾಕ್ಷಿ ಗೋಯತ್ 6-4 ಅಂತರದೊಂದಿಗೆ ವಿನೇಶ್ ಫೋಗಟ್ ಅವರಿಗೆ ಸೋಲುಣಿಸಿದ್ದರು. ಈ ಗೆಲುವಿನೊಂದಿಗೆ ಒಂದೇ ದಿನದಲ್ಲಿ ರಾಷ್ಟ್ರಮಟ್ಟದಲ್ಲಿ ಮೀನಾಕ್ಷಿ ಖ್ಯಾತಿಯನ್ನು ಪಡೆದುಕೊಂಡರು.

ಮೀನಾಕ್ಷಿ ಗೋಯತ್ ಜಿಂದ್ ಜಿಲ್ಲಾ ಚಾಬ್ರಿ ಗ್ರಾಮಕ್ಕೆ ಸೇರಿದ ಕುಸ್ತಿಪಟು ಆಗಿದ್ದರು. ಸದ್ಯ ಆಕೆಯ ಕುಟುಂಬ ಸೋನಿಪತ್‌ನಲ್ಲಿ ವಾಸಿಸುತ್ತಿದೆ. ವಿನೇಶ್ ಫೋಗಟ್ ಅವರ ವಿವಾಹ ಜಿಂದ್ ಜಿಲ್ಲೆಯ ಬಖ್ತಾ ಖೇರಾ ಗ್ರಾಮದಲ್ಲಿ ನಡೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಆದ್ದರಿಂದಲೇ ಇಬ್ಬರ ನಡುವಿನ ಫೈಟ್ ಸ್ಥಳೀಯರಿಗೆ ಭಾರೀ ಕುತೂಹಲ ಮೂಡಿಸಿತ್ತು. ಚಾಬ್ರಿ ಗ್ರಾಮದ ಜನರು ಮೀನಾಕ್ಷಿ ಗೆಲುವು ಪಡೆಯುತ್ತಾಳೆ ಎಂಬ ನಂಬಿಕೆಯೊಂದಿಗೆ ಕಾದು ಕುಳಿತಿದ್ದರು. ಕೊನೆಗೂ ಅವರ ನಂಬಿಕೆ ಉಳಿಸುವಂತೆ ಮೀನಾಕ್ಷಿ ಪ್ರದರ್ಶನ ನೀಡಿದ್ದರು.

ಶಿಕ್ಷಣ ಹಾಗೂ ಆಹಾರ ಬಗ್ಗೆ ಪ್ರತ್ಯೇಕ ವ್ಯವಸ್ಥೆ

ಮೀನಾಕ್ಷಿ ಅವರ ಗೆಲುವಿನ ಬಳಿಕ ಚಾಬ್ರಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಗ್ರಾಮ ಪಂಚಾಯತ್ ಅಧ್ಯಕ್ಷ ರಾಕೇಶ್ ಮಾತನಾಡಿ, ಚಿಕ್ಕ ವಯಸ್ಸಿನಿಂದಲೂ ಮೀನಾಕ್ಷಿ ಅತ್ಯುತ್ತಮ ಕ್ರೀಡಾಪಟು. ಏಷ್ಯನ್ ಗೇಮ್ಸ್‌ನಲ್ಲಿ ಖಂಡಿತ ದೇಶಕ್ಕಾಗಿ ಪದಕ ಗೆಲ್ಲುತ್ತಾರೆ. ಮೀನಾಕ್ಷಿ ಮನೆಯ ಹಿರಿಯ ಮಗಳು, ಆಕೆಯ ಆಸಕ್ತಿಯನ್ನು ಗಮನಿಸಿ ಕುಟುಂಬಸ್ಥರು ಕುಸ್ತಿಯಲ್ಲಿ ಪ್ರೇರಣೆ ನೀಡಿದ್ದರು. ಆಕೆಗೆ ತರಬೇತಿ ನೀಡಲು ಜಿಂದ್‌ನಿಂದ ಸೋನಿಪತ್‌ಗೆ ಶಿಫ್ಟ್ ಆಗಿದ್ದರು. ಮೀನಾಕ್ಷಿ ಅವರ ತಂದೆ ಪ್ರೇಮ್ ಗೋಹತ್ ಅಲ್ಲಿ ಡೈರಿ ತೆಗೆದು ಜೀವನ ನಡೆಸಲು ಆರಂಭಿಸಿದ್ದರು. ಮಗಳ ಶಿಕ್ಷಣ ಹಾಗೂ ಆಹಾರ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಕುಸ್ತಿಯೊಂದಿಗೆ ಶಿಕ್ಷಣಕ್ಕೂ ಪ್ರಾಮುಖ್ಯತೆ ನೀಡಿದ್ದರು. ಇದರ ಪರಿಣಾಮ ಮೀನಾಕ್ಷಿ ಕುರುಕ್ಷೇತ್ರ ವಿವಿಯಿಂದ ಬಿಎ ಪದವಿ ಕೂಡ ಪಡೆದುಕೊಂಡಿದ್ದಾರೆ.

ಮೀನಾಕ್ಷಿ ಅವರಿಗೆ ಚಿಕ್ಕಂದಿನಿಂದಲೇ ಕುಸ್ತಿ ಬಗ್ಗೆ ಆಸಕ್ತಿ ಇರೋದನ್ನು ಗಮನಿಸಿದ್ದರಂತೆ. ಅಲ್ಲದೇ ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾ ಎಂದರೇ ಆಕೆಗೆ ಬಹಳ ಇಷ್ಟವಂತೆ. ಟಿವಿಯಲ್ಲಿ ಆತ ಆಡುತ್ತಿದ್ದ ಕುಸ್ತಿಗಳನ್ನು ನೋಡಿ ಸ್ಫೂರ್ತಿ ಪಡೆದುಕೊಂಡು ತಾವು ಕುಸ್ತಿ ತರಬೇತಿ ಪಡೆಯಲು ಆರಂಭಿಸಿದ್ದರಂತೆ. ಕುಟುಂಬ ಬೆಂಬಲ ಇದ್ದರೂ ಕುಸ್ತಿಯಲ್ಲಿ ಆಕೆಯ ಜರ್ನಿ ಸುಲಭವಾಗಿ ಇರಲಿಲ್ಲ, ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು. ತಾಯಿ ಕ್ಯಾನ್ಸರ್ ಇರುವುದು ಗೊತ್ತಾಗುತ್ತಿದ್ದಂತೆ ಕುಟುಂಬ ಆರ್ಥಿಕ ಸಂಕಷ್ಟ ಎದುರಾಗಿತ್ತು. ಇಷ್ಟಾದರೂ ಆಕೆ ಕುಸ್ತಿಯನ್ನು ಬಿಡಲಿಲ್ಲ.

ಗಾಯದ ಸಮಸ್ಯೆ!

ಕಠಿಣ ಪರಿಶ್ರಮ ಹಾಕಿದ ಪರಿಣಾಮ 2016ರಲ್ಲಿ ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದರು. 2019ರಲ್ಲಿ ಅಂಡರ್ 23 ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಆದರೆ ಈ ವೇಳೆ ಜಾರಿಬಿದ್ದ ಪರಿಣಾಮ ಕಾಲಿಗೆ ತೀವ್ರವಾದ ಗಾಯವಾಗಿ ಹಾಸಿಗೆ ಸೀಮಿತವಾಗಿದ್ದರು. ಈ ಗಾಯದ ಕಾರಣಕ್ಕೆ ಆಕೆ ನಡೆಯುವುದು ಕೂಡ ಕಷ್ಟವಾಗಿತ್ತು. ಸುಮಾರು 6 ತಿಂಗಳ ಕಾಲ ಹಾಸಿಗೆ ಹಿಡಿದಿದ್ದ ಮೀನಾಕ್ಷಿ, ಧೈರ್ಯ ಕಳೆದುಕೊಳ್ಳಲಿಲ್ಲ.

ಮೀನಾಕ್ಷಿ/ ವಿನೇಶ್ ಫೋಗಟ್

ಗಾಯದಿಂದ ಚೇತರಿಕೆ ಕಂಡ ಬಳಿಕ ಮತ್ತೆ ಕುಸ್ತಿ ತರಬೇತಿ ಆರಂಭಿಸಿದ್ದರು. ದೇಹದ ತೂಕ ಕಡಿಮೆ ಮಾಡಿ ಕಠಿಣ ತರಬೇತಿ ಆರಂಭಿಸಿದ್ದರು. ಕಮ್ ಬ್ಯಾಕ್ ಮಾಡಿದ ಒಂದು ವರ್ಷದ ಅವಧಿಯಲ್ಲಿಯೇ ರಾಷ್ಟ್ರೀಯ ಚಾಂಪಿಯನ್‌ಶಿಪ್ ಟೈಟಲ್ ಗೆದ್ದು ಬೀಗಿದ್ದರು. ಆ ಬಳಿಕ 53 ಕೆಜಿ ವಿಭಾಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದರು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಲು ಸಾಲು ಗೆಲುವು ಸಾಧಿಸಿದ್ದರು. ಕಳೆದ ತಿಂಗಳು ನಡೆದ ಸೀನಿಯರ್ ಏಷ್ಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಮೀನಾಕ್ಷಿ ಬೆಳ್ಳಿ ಪದಕ ಪಡೆದಿದ್ದರು. ಈಗಾಗಲೇ ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಗೆದ್ದಿರುವ ಮೀನಾಕ್ಷಿ, ಭಾರತದ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ನಡೆದ ಟ್ರಯಲ್ಸ್‌ನಲ್ಲಿ ಸ್ಟಾರ್ ಕುಸ್ತಿಪಟು, ವಿಶ್ವ ಚಾಂಪಿಯನ್ ರನ್ನು ಸೋಲಿಸಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದಾರೆ.

ಇದನ್ನೂ ಓದಿ: Poori Tips: ಹಿಟ್ಟಿಗೆ 2 ಸ್ಪೂನ್ ಈ ಪದಾರ್ಥವನ್ನು ಮಿಕ್ಸ್ ಮಾಡಿ; ಹೋಟೆಲ್ ಸ್ಟೈಲ್ ಪೂರಿಗಳು ಸಿದ್ಧ!

ಇನ್ನು, ವಿನೇಶ್ ಫೋಗಟ್ ಎರಡು ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್ ತಲುಪಿದ್ದರು. ಮೊದಲ ಪಂದ್ಯದಲ್ಲಿ ಜ್ಯೋತಿ ಸಿಹಾಗ್, ಎರಡನೇ ಪಂದ್ಯದಲ್ಲಿ ನಿಶು ವಿರುದ್ಧ ಗೆದ್ದು ಬೀಗಿದ್ದರು. ಆದರೆ ಮೀನಾಕ್ಷಿ ಅವರ ಎದುರು ವಿನೇಶ್ ನಿಲ್ಲಲು ಸಾಧ್ಯವಾಗಲಿಲ್ಲ. ವಿನೇಶ್ ವಿರುದ್ಧ ಗೆದ್ದು ಮೀನಾಕ್ಷಿ ಭಾರತದ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಏಷ್ಯನ ಗೇಮ್ಸ್‌ನಲ್ಲಿ ಪದಕ ಆಸೆಯನ್ನು ಮೂಡಿಸಿದ್ದಾರೆ. ಗ್ರಾಮೀಣ ಭಾಗದಿಂದ ಬಂದು ಅಂತರಾಷ್ಟ್ರೀಯ ವೇದಿಕೆ ವರೆಗೂ ಹೋರಾಟದಿಂದಲೇ ತಲುಪಿರುವ ಮೀನಾಕ್ಷಿ, ಭಾರತಕ್ಕೆ ಚಿನ್ನದ ಪದಕ ತರುವ ಗುರಿಯನ್ನು ಹೊಂದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed