Last Updated:
ದುಬೈನಲ್ಲಿ ನಡೆದ ಮಹಿಳಾ ಏಷ್ಯಾಕಪ್ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ಕ್ಯಾಪ್ಟನ್ ಚಾಮರಿ ಅಟಪಟ್ಟು ಕೇವಲ 5 ರನ್ ನೀಡುವ ಮೂಲಕ 7 ವಿಕೆಟ್ ಪಡೆದು ಚರಿತ್ರೆ ಸೃಷ್ಟಿಸಿದ್ದಾರೆ.
ಚಾಮರಿ ಅಟಪಟ್ಟು (Chamari Atapattu) ಅವರನ್ನು ಸ್ಫೋಟಕ ಮಹಿಳಾ ಬ್ಯಾಟ್ಸ್‌ಮನ್ ಎಂದು ಜಗತ್ತು ಗುರುತಿಸುತ್ತದೆ. ಅವರು ತಮ್ಮ ಪವರ್-ಹಿಟ್ಟಿಂಗ್ ಮೂಲಕ ಯಾವುದೇ ಎದುರಾಳಿ ಬೌಲಿಂಗ್ ದಾಳಿಯನ್ನು ಛಿದ್ರಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (UAE) ನಡೆಯುತ್ತಿರುವ ಮಹಿಳಾ ಏಷ್ಯಾ ಕಪ್‌ನ ಪಂದ್ಯದಲ್ಲಿ, ಯಾರೂ ಊಹಿಸಿರದ ಈ ಶ್ರೀಲಂಕಾದ ನಾಯಕಿಯ ಪ್ರದರ್ಶನವನ್ನು ಜಗತ್ತು ವೀಕ್ಷಿಸಿದೆ. ಏಕೆಂದರೆ ಈ ಬಾರಿ ಬ್ಯಾಟ್ನಿಂದಲ್ಲ, ಬೌಲಿಂಗ್ ಮೂಲಕ ಚಾಮರಿ ಎದುರಾಳಿ ತಂಡದ ಪ್ರತಿಯೊಬ್ಬ ಬ್ಯಾಟರ್ಗಳನ್ನ ತಮ್ಮ ಚಕ್ರವ್ಯೂಹದಲ್ಲಿ ಸಿಲುಕಿಸಿದರು. ಈ ಭರ್ಜರಿ ಪ್ರದರ್ಶನದೊಂದಿಗೆ, ಅಟಪಟ್ಟು ಏಷ್ಯಾ ಕಪ್ ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.














