Last Updated:
ಬೆಂಗಳೂರು ಯಶವಂತಪುರದಿಂದ ಧರ್ಮಸ್ಥಳ, ಸೌತಡ್ಕ, ಕುಕ್ಕೆ ಸುಬ್ರಹ್ಮಣ್ಯಕ್ಕೆ 2 ದಿನದ ಎಸಿ ಬಸ್ ಟ್ರಿಪ್, ಬಜೆಟ್ ಮತ್ತು ಪ್ರೀಮಿಯಂ ಪ್ಯಾಕೇಜ್‌ಗಳೂ ಲಭ್ಯವಿವೆ. ನಿಮ್ಮ ವಾಸ್ತವ್ಯ ಹಾಗೂ ತಿಂಡಿಯ ವ್ಯವಸ್ಥೆಯನ್ನು ಕೆಎಸ್‌ಟಿಡಿಸಿಯೇ ನಿರ್ವಹಿಸಲಿದೆ. ವೀಕೆಂಡ್ ಸಮಯದಲ್ಲಿ ಓಡಾಟಕ್ಕೆ ಈ ಬಸ್ ಅನುಕೂಲವಾಗಲಿದೆ
ಬೆಂಗಳೂರು: ವೀಕೆಂಡ್ (Weekend) ಬಂತು ಅಂದ್ರೆ ಸಾಕು, ದೇವರ ದರ್ಶನಕ್ಕೆ ಹೋಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಆದರೆ ಬೆಂಗಳೂರಿನ (Bengaluru) ಟ್ರಾಫಿಕ್, ನೂರಾರು ಕಿಲೋಮೀಟರ್ ಡ್ರೈವಿಂಗ್, ಹೋಟೆಲ್ ರೂಮ್ ಬುಕಿಂಗ್ ಟೆನ್ಷನ್, ದೇವಸ್ಥಾನದಲ್ಲಿ (Temple) ಗಂಟೆಗಟ್ಟಲೆ ಕ್ಯೂ ಇದೆಲ್ಲಾ ನೆನಪಾದ್ರೆ ಸಾಕು ಟ್ರಿಪ್ (Trip) ಕ್ಯಾನ್ಸಲ್ ಮಾಡ್ತೀರಾ?
ಇನ್ಮುಂದೆ ಆ ಟೆನ್ಷನ್ ಬಿಡಿ! ಪ್ರವಾಸಿಗರಿಗಾಗಿಯೇ ಬಂಪರ್ ಆಫರ್ ಒಂದನ್ನು ತರಲಾಗಿದೆ. ಬರೀ ₹3,350 ಕ್ಕೆ ಐಷಾರಾಮಿ ಎಸಿ ಬಸ್‌ನಲ್ಲಿ ಪ್ರಯಾಣ, ಉಳಿದುಕೊಳ್ಳಲು ಹೋಟೆಲ್, ಜೊತೆಗೆ VIP ದರ್ಶನದ ವ್ಯವಸ್ಥೆ! ಇದು ನಂಬಲು ಅಸಾಧ್ಯವಾದರೂ ನೂರಕ್ಕೆ ನೂರು ಸತ್ಯ. ಸಂಪೂರ್ಣ ಡೀಟೇಲ್ಸ್ ಇಲ್ಲಿದೆ, ಮಿಸ್ ಮಾಡ್ದೆ ಓದಿ!
ಬೆಂಗಳೂರಿನಿಂದ ಹೊರಡುವ ಈ 2 ದಿನ ಹಾಗೂ 1 ರಾತ್ರಿಯ ಟ್ರಿಪ್‌ನಲ್ಲಿ, ನೀವು ಈ ಕೆಳಗಿನ ಪುಣ್ಯಕ್ಷೇತ್ರಗಳನ್ನು ಕಣ್ತುಂಬಿಕೊಳ್ಳಬಹುದು
- ಶ್ರೀ ಕ್ಷೇತ್ರ ಧರ್ಮಸ್ಥಳ: ಮಂಜುನಾಥ ಸ್ವಾಮಿಯ ‘ವಿಐಪಿ ದರ್ಶನ’ (ಕ್ಯೂನಲ್ಲಿ ನಿಲ್ಲುವ ಟೆನ್ಷನ್ ಇಲ್ಲವೇ ಇಲ್ಲ!)
- ಸೌತಡ್ಕ: ಪ್ರಸಿದ್ಧ ಬಯಲು ಮಹಾಗಣಪತಿ ದೇವಸ್ಥಾನ.
- ಕುಕ್ಕೆ ಸುಬ್ರಹ್ಮಣ್ಯ: ಇಷ್ಟಾರ್ಥ ಸಿದ್ಧಿಸುವ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪ್ರಮುಖ ಸೂಚನೆ
- ಪ್ರೀಮಿಯಂ ಪ್ಯಾಕೇಜ್ ಆಯ್ದುಕೊಂಡರೆ ‘ರಾಮಕ್ಷೇತ್ರ’ದ ಶ್ರೀ ರಾಮ ಮಂದಿರಕ್ಕೂ ಭೇಟಿ ನೀಡಬಹುದು! ಬಜೆಟ್ ಪ್ಯಾಕೇಜ್ ನಲ್ಲಿ ರಾಮಕ್ಷೇತ್ರ ದರ್ಶನ ಹಾಗೂ ಬ್ರೇಕ್ ಫಾಸ್ಟ್ ಸೌಲಭ್ಯ ಇರೋದಿಲ್ಲ
ನಿಮ್ಮ ಜೇಬಿಗೆ ತಕ್ಕಂತೆ 2 ಭರ್ಜರಿ ಪ್ಯಾಕೇಜ್‌ಗಳು!
- ಬಜೆಟ್ ಪ್ಯಾಕೇಜ್
ಇದರಲ್ಲಿ ನಿಮಗೆ ಎಸಿ ಡಿಲಕ್ಸ್ ಬಸ್ ಪ್ರಯಾಣ, ಕನ್ಯಾಡಿಯಲ್ಲಿ ವಾಸ್ತವ್ಯ ಮತ್ತು ಸ್ಪೆಷಲ್ ದರ್ಶನ ಟಿಕೆಟ್ ಸಿಗಲಿದೆ.
- ಸಿಂಗಲ್ (ಒಬ್ಬರಿಗೆ): ₹4,150/-
- ಡಬಲ್ (ಇಬ್ಬರಿಗೆ): ತಲಾ ₹3,450/-
- ಟ್ರಿಪಲ್ (ಮೂವರಿಗೆ): ತಲಾ ₹3,350/-
2. ಪ್ರೀಮಿಯಂ ಪ್ಯಾಕೇಜ್
ಇದರಲ್ಲಿ ನಿಮಗೆ ಎಸಿ ಬಸ್, ನಿಡ್ಲೆಯಲ್ಲಿ ಭರ್ಜರಿ ವಾಸ್ತವ್ಯ, ಮಂಜುನಾಥ ಸ್ವಾಮಿಯ VIP ದರ್ಶನ ಮತ್ತು ಬೆಳಗಿನ ಬ್ರೇಕ್‌ಫಾಸ್ಟ್ ಉಚಿತವಾಗಿ ಸಿಗಲಿದೆ!
- ಸಿಂಗಲ್ (ಒಬ್ಬರಿಗೆ): ₹6,150/-
- ಡಬಲ್ (ಇಬ್ಬರಿಗೆ): ತಲಾ ₹4,450/-
- ಟ್ರಿಪಲ್ (ಮೂವರಿಗೆ): ತಲಾ ₹4,150/-
ಬುಕ್ ಮಾಡುವ ಮುನ್ನ ಈ ‘ಷರತ್ತುಗಳನ್ನು’ ಮರೆಯಬೇಡಿ!
Bangalore [Bangalore],Bangalore,Karnataka













