Last Updated:
ಗುಂಡ್ ಪ್ರದೇಶದ ಹರಿಗನಿವಾನ್‌ನ ಎಸ್-ಮೋಡ್ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿದ್ದು, AR11 D5655 ನೋಂದಣಿ ಸಂಖ್ಯೆಯನ್ನು ಹೊಂದಿರುವ ಬಸ್, ತಿರುವು ಮಾರ್ಗದಲ್ಲಿ ಸಾಗುತ್ತಿದ್ದಾಗ ಸ್ಕಿಡ್ ಆಗಿ ಮನೆಯ ಮೇಲೆ ಬಿದ್ದಿದೆ. ಮನೆ ತೀವ್ರವಾಗಿ ಹಾನಿಗೊಳಗಾಗಿದೆ
ಗಂಡೇರ್ಬಲ್: ಜಮ್ಮು ಮತ್ತು ಕಾಶ್ಮೀರದ (Jammu Kashmir Accident) ಗಂಡೇರ್ಬಲ್ ಜಿಲ್ಲೆಯ ಕಂಗನ್ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ವೇಗವಾಗಿ ಬಂದ ಬಸ್ ರಸ್ತೆಯಿಂದ ಜಾರಿ ಮನೆಯ ಮೇಲೆ ಬಿದ್ದ ಪರಿಣಾಮ ಕನಿಷ್ಠ 30 ಅಮರನಾಥ ಯಾತ್ರಿಕರು (Amaranath Yatra Accident) ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗುಂಡ್ ಪ್ರದೇಶದ ಹರಿಗನಿವಾನ್‌ನ ಎಸ್-ಮೋಡ್ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿದ್ದು, AR11 D5655 ನೋಂದಣಿ ಸಂಖ್ಯೆಯನ್ನು ಹೊಂದಿರುವ ಬಸ್, ತಿರುವು ಮಾರ್ಗದಲ್ಲಿ ಸಾಗುತ್ತಿದ್ದಾಗ ಸ್ಕಿಡ್ ಆಗಿ ಮನೆಯ ಮೇಲೆ ಬಿದ್ದಿದೆ. ಮನೆ ತೀವ್ರವಾಗಿ ಹಾನಿಗೊಳಗಾಗಿದೆ, ಆದರೆ ಮನೆಯ ಮೇಲೆ ಬಿದ್ದಿದ್ದರಿಂದ ಬಸ್ ಸಿಂಧ್ ನದಿಗೆ ಉರುಳುವುದು ತಪ್ಪಿದೆ ಎಂದು ವರದಿಯಾಗಿದೆ.
ಗಂಡೇರ್ಬಲ್ ಜಿಲ್ಲೆಯ ಗುಂಡ್‌ನ ಹರಿಗ್ನಿವಾನ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ಅಮರನಾಥ ಯಾತ್ರೆಗೆ ಹೋಗುತ್ತಿದ್ದ 50 ಯಾತ್ರಿಕರನ್ನು ಹೊತ್ತಿದ್ದ ಬಸ್ ಗಂಡೇರ್ಬಲ್ ಜಿಲ್ಲೆಯ ಗುಂಡ್ ನ ಹರಿಗ್ನಿವಾನ್ ಪ್ರದೇಶದ ‘ಎಸ್’ ತಿರುವು ಬಳಿ ಅಪಘಾತಕ್ಕೀಡಾಗಿ ಸಿಂಧ್ ನದಿಯ ದಡದಲ್ಲಿ 20 ಮೀಟರ್ ಆಳದ ಕಂದಕಕ್ಕೆ ಬಿದ್ದಿದೆ.
ಈ ಅಪಘಾತದಲ್ಲಿ 30 ಕ್ಕೂ ಹೆಚ್ಚು ಯಾತ್ರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಸಿಆರ್‌ಪಿಎಫ್ , ಐಟಿಬಿಪಿ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತಲುಪಿ, ಎಲ್ಲಾ ಗಾಯಗೊಂಡ ಪ್ರಯಾಣಿಕರನ್ನು ರಕ್ಷಿಸಿ ಚಿಕಿತ್ಸೆಗಾಗಿ ಕಂಗನ್ ಆಸ್ಪತ್ರೆಗೆ ಕರೆದೊಯ್ದರು.
ಐಟಿಬಿಪಿ ತನ್ನ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದೆ, ಅದು ‘ತ್ವರಿತ ಕ್ರಮ ಕೈಗೊಂಡು ಜೀವಗಳನ್ನು ಉಳಿಸಲಾಗಿದೆ! ಸುಮಾರು 50 ಅಮರನಾಥ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಾಲ್ಟಾಲ್‌ನಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದ ಬಸ್ , ಹರಿಗಣಿವಾನ್‌ನ ‘ಎಸ್’ ತಿರುವು ಬಳಿ ಅಪಘಾತಕ್ಕೀಡಾಯಿತು. ಸಿಂಧ್ ನದಿಯ ದಡದಲ್ಲಿ 20 ಮೀಟರ್ ಆಳದ ಕಂದಕಕ್ಕೆ ಬಿದ್ದಿತು. ಐಟಿಬಿಪಿ ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಎಲ್ಲಾ ಪ್ರಯಾಣಿಕರನ್ನು ತ್ವರಿತವಾಗಿ ರಕ್ಷಿಸಿದರು’ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಗಾಯಗೊಂಡ ಎಲ್ಲಾ ಯಾತ್ರಿಕರನ್ನು ಬಸ್ಸಿನಿಂದ ಸುರಕ್ಷಿತವಾಗಿ ಹೊರತೆಗೆದು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಬಸ್ಸಿನಲ್ಲಿದ್ದ ಹೆಚ್ಚಿನ ಯಾತ್ರಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Jammu and Kashmir














