Last Updated:
ಸಿಟಿ ಲೈಟ್ಸ್ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ವಿಭಿನ್ನವಾಗಿಯೇ ಅಭಿನಯಿಸಿದ್ದಾರೆ. ಈ ಭಾರೀ ಬದಲಾವಣೆ ಹಿಂದೆ ಇರೋ ಆ ಕಾರಣ ಏನು? ಮೋನಿಷಾ ವಿಜಯ್ ಕುಮಾರ್ ಮೊದಲ ಚಿತ್ರದಲ್ಲಿಯೇ ಭರವಸೆ ಮೂಡಿಸ್ತಿರೋದು ಯಾಕೆ? ಈ ಪ್ರಶ್ನೆಗಳಿಗೆ ಇಲ್ಲೊಂದಿಷ್ಟು ಮಾಹಿತಿ ಇದೆ ಓದಿ.
ಸಿಟಿ ಲೈಟ್ಸ್ ಚಿತ್ರದಲ್ಲಿ (City Lights Movie) ವಿನಯ್ ರಾಜ್‌ಕುಮಾರ್ (Vinay Rajkumar) ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ. ಅವರ ಪಾತ್ರದ ವರ್ತನೆ ಬೇರೆ ಇದೆ. ಅವರ ಮಾತಿನ ಶೈಲಿ ಬದಲಾದಂತೆ ಇದೆ. ಕಂದಮ್ಮ ಹಾಡು ನೋಡಿದ್ರೆ ಸಾಕು. ಇದು ಅರ್ಥ ಆಗುತ್ತದೆ. ಇದರ ಹಿಂದೆ ಇರೋ ಕಾರಣ ಏನು ಅನ್ನೋದು ಮೇಕಿಂಗ್ ಅಲ್ಲಿಯೇ ಗೊತ್ತಾಗುತ್ತದೆ. ಹಾಡಿನ ಪ್ರತಿ ವರ್ತನೆಯನ್ನ ವಿನಯ್ (Vinay) ಕಲಿತುಕೊಂಡಿದ್ದಾರೆ. ಹೇಗೆ ನಿಲ್ಲಬೇಕು? ಯಾವ ರೀತಿಯಾಗಿ ಪ್ರೀತಿಯನ್ನ ಎಕ್ಸ್‌ಪ್ರೆಸ್ ಮಾಡ್ಬೇಕು? ಹೀಗೆ ಸುಮಾರು ವಿಚಾರಗಳನ್ನ ಇಲ್ಲಿ ದುನಿಯಾ ವಿಜಯ್ (Duniya Vijay) ಅಭಿನಯಿಸಿ ತೋರಿಸಿದ್ದಾರೆ. ಅದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮಗಳಿಗೂ ಅಭಿನಯ ಹೇಳಿಕೊಟ್ಟ ವಿಜಯ್
(ಚಿತ್ರ ಕೃಪೆ: ಮೋನಿಷಾ ವಿಜಯ್ ಕುಮಾರ್ ಇನ್‌ಸ್ಟಾಗ್ರಾಮ್)
ಇವರ ಪಾತ್ರಗಳಲ್ಲಿ ಆಡಂಬರ ಇಲ್ವೇ ಇಲ್ಲ. ಸರಳವಾಗಿಯೇ ಇವರ ಪಾತ್ರಗಳಿವೆ. ಉಡುಗೆ ಮತ್ತು ತೊಡಿಗೆಯಲ್ಲೂ ಆ ಸರಳತೆ ಕಾಣಿಸುತ್ತದೆ.
ದುನಿಯಾ ವಿಜಯ್ ಅವರು ಈ ಚಿತ್ರ ಡೈರೆಕ್ಷನ್ ಮಾಡಿದ್ದಾರೆ. ಈ ಮೂಲಕ ಮಗಳು ಮೋನಿಷಾ ವಿಜಯ್ ಕುಮಾರ್ ಅವರನ್ನು ಡೈರೆಕ್ಷನ್ ಮಾಡಿದ್ದಾರೆ.
ಮೊದಲ ಚಿತ್ರದಲ್ಲಿ ಮೋನಿಷಾ ವಿಜಯ್ ಕುಮಾರ್ ಅದ್ಭುತವಾಗಿಯೇ ಎಕ್ಸ್‌ಪ್ರೆಷನ್ ಕೊಟ್ಟಿದ್ದಾರೆ. ಆದರೆ, ಈ ಎಲ್ಲ ಎಕ್ಸ್‌ಪ್ರೆಷನ್ ಹಿಂದೆನೂ ದುನಿಯಾ ವಿಜಯ್ ಅವರೇ ಇದ್ದಾರೆ.
ಸಿಟಿ ಲೈಟ್ಸ್ ಚಿತ್ರದಲ್ಲಿ ಕಂಪ್ಲೀಟ್ ಡಿಫರಂಟ್
(ಚಿತ್ರ ಕೃಪೆ: ಮೋನಿಷಾ ವಿಜಯ್ ಕುಮಾರ್ ಇನ್‌ಸ್ಟಾಗ್ರಾಮ್)
ದುನಿಯಾ ವಿಜಯ್ ಅವರು ತಮ್ಮ ಮಗಳು ಮೋನಿಷಾ ಅವರಿಗೂ ಅಭಿನಯ ಹೇಳಿಕೊಟ್ಟಿದ್ದಾರೆ. ಯಾವ ರೀತಿ ಮೆಟ್ಟಿಲಿನಿಂದ ಇಳಿದು ಬರಬೇಕು. ಹೇಗೆ ನಡೆದುಕೊಂಡು ಹೋಗ್ಬೇಕು ಅನ್ನೋದನ್ನು ಅಭಿನಯಿಸಿಯೇ ತೋರಿಸಿದ್ದಾರೆ.
ಸಿಟಿ ಲೈಟ್ಸ್ ಚಿತ್ರದ ಕಂದಮ್ಮ ಹಾಡು ಜನಕ್ಕೆ ಇಷ್ಟ ಆಗಿದೆ. ಸಂಜಿತ್ ಹೆಗ್ಡೆ ಹಾಡಿರೋ ಈ ಗೀತೆಯನ್ನ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ.
ಮಗಳಿಗೂ ಅಭಿನಯ ಹೇಳಿಕೊಟ್ಟ ವಿಜಯ್
(ಚಿತ್ರ ಕೃಪೆ: ಮೋನಿಷಾ ವಿಜಯ್ ಕುಮಾರ್ ಇನ್‌ಸ್ಟಾಗ್ರಾಮ್)
ನಾಗಾರ್ಜುನ್ ಶರ್ಮಾ ಅವರು ಈ ಒಂದು ಗೀತೆಯನ್ನ ಬರೆದಿದ್ದಾರೆ. ಚರಣ್ ರಾಜ್ ಸಂಗೀತದಲ್ಲಿ ಈ ಹಾಡು ಮೂಡಿ ಬಂದಿದೆ. ವಿಷ್ಯೂಲಿ ಈ ಹಾಡು ಇಂಟ್ರಸ್ಟಿಂಗ್ ಆಗಿದೆ.
ಈ ಹಾಡಿನಲ್ಲಿ ಮಕ್ಕಳೂ ಇದ್ದಾರೆ. ಅಕ್ಕಪಕ್ಕದ ಮಕ್ಕಳು ಜೊತೆಗೆ ನಾಯಕ ಮತ್ತು ನಾಯಕಿ ಹೇಗೆ ಇರ್ತಾರೆ. ಅವರ ಬಗ್ಗೆ ಇವರಿಗೆ ಅದೆಷ್ಟು ಕಾಳಜಿ ಇರುತ್ತದೆ ಅನ್ನೋದು ಇದರಲ್ಲಿ ರಿವೀಲ್ ಆಗಿದೆ.
ಜಂಕ್‌ಫುಡ್ ತಿನ್ನೋ ಮಕ್ಕಳಿಗೆ ಬುದ್ಧಿ ಹೇಳುವ ದೃಶ್ಯಗಳೂ ಇವೆ. ಜಂಕ್‌ಫುಡ್ ತಿನ್ನೋ ಬದಲು ಹಲಸಿನ ಹಣ್ಣು ತಿನ್ನಿ ಅಂತಲೇ ನಾಯಕ ಮತ್ತು ನಾಯಕಿ ಇಲ್ಲಿ ಹೇಳುವ ದೃಶ್ಯವೂ ಇದೆ. ಒಟ್ಟಾರೆ, ಸಿಟಿ ಲೈಟ್ಸ್ ಸಿನಿಮಾದ ಹಾಡು ಎಲ್ಲರ ಗಮ ಸೆಳೆಯುತ್ತದೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 28, 2026 10:48 AM IST














