Sai Pallavi: ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ! ರಗಡ್ ಲುಕ್​ನಲ್ಲಿ ನ್ಯಾಚುರಲ್ ಬ್ಯೂಟಿ ಮಿಂಚಿಂಗ್‌! | | ACTPnews

News18


Last Updated:

ಯಾವುದೇ ಗ್ಲಾಮರ್ ಪ್ರದರ್ಶನವಿಲ್ಲದೆ ಕೇವಲ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಈ ನಟಿ ಸಾಯಿಪಲ್ಲವಿ , ಇದೀಗ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.

News18
News18

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮ ನ್ಯಾಚುರಲ್ ಬ್ಯೂಟಿ ಹಾಗು ಅದ್ಭುತ ನಟನೆಯ ಮೂಲಕ ಎಲ್ಲರ ಮನಸ್ಸನ್ನುಗೆದ್ದಿರುವ ನಟಿ ಸಾಯಿ ಪಲ್ಲವಿ (Sai Pallavi) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಯಾವುದೇ ಗ್ಲಾಮರ್ ಪ್ರದರ್ಶನವಿಲ್ಲದೆ ಕೇವಲ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಈ ನಟಿ, ಇದೀಗ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.

ಹೆಚ್ಚಾಗಿ ಸಾಫ್ಟ್ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದ ನಟಿ ಸಾಯಿ ಪಲ್ಲವಿ, ಇದೀಗ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.

ನಟ ಧನುಷ್ ನಟನೆಯ ಬಹುನಿರೀಕ್ಷಿತ D55 ಚಿತ್ರದ ಕುರಿತು ಅಭಿಮಾನಿಗಳಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದೆ. ಹೀಗಾಗಿ ಈ ಚಿತ್ರದ ಬಗ್ಗೆ ಹೊರಬರುತ್ತಿರುವ ಪ್ರತಿಯೊಂದು ಮಾಹಿತಿಯೂ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇದೀಗ ತಿಳಿದುಬಂದಿರುವ ವರದಿಗಳ ಪ್ರಕಾರ, ಸಾಯಿ ಪಲ್ಲವಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಮಲಯಾಳಂ ಚಿತ್ರರಂಗದ ಹಿರಿಯ ನಟ ಮಮ್ಮುಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಅವರ ಉಪಸ್ಥಿತಿಯಿಂದ ಚಿತ್ರದ ಮಹತ್ವ ಮತ್ತಷ್ಟು ಹೆಚ್ಚಾಗಿದೆ.

ಸೀತೆಯಾಗಿ ನ್ಯಾಚುರಲ್ ಬ್ಯೂಟಿ

D55 ಚಿತ್ರದ ಜೊತೆಗೆ ಸಾಯಿ ಪಲ್ಲವಿ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಅದು ರಾಮಾಯಣ. ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಚಿತ್ರದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರ ನಿರ್ವಹಿಸುತ್ತಿದ್ದಾರೆ.

ನಿತೀಶ್ ತಿವಾರಿ ನಿರ್ದೇಶನದ ಪ್ರತಿಷ್ಠಿತ ಚಿತ್ರ ‘ರಾಮಾಯಣ’ದಲ್ಲಿಯೂ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ದೊಡ್ಡ ಬಜೆಟ್ ಚಿತ್ರದಲ್ಲಿ ಅವರು ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣಬೀರ್ ಕಪೂರ್ ರಾಮನಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ನಟಿಸಿರುವ ಈ ಚಿತ್ರದ ಮೇಲೆ ದೇಶಾದ್ಯಂತ ಭಾರಿ ನಿರೀಕ್ಷೆಗಳಿವೆ.

ಇದರ ಜೊತೆಗೆ, ಮಣಿರತ್ನಂ ಅವರ ಮುಂದಿನ ಚಿತ್ರದಲ್ಲಿ ಕೂಡ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಕೈಯಲ್ಲಿ ಇಂತಹ ಕ್ರೇಜಿ ಪ್ರಾಜೆಕ್ಟ್‌ಗಳೊಂದಿಗೆ, ಮುಂದಿನ ಎರಡು ಮೂರು ವರ್ಷಗಳ ಕಾಲ ಅವರ ದಿನಚರಿ ತುಂಬಿದೆ ಎಂದು ಹೇಳಬಹುದು.

ಇನ್ನು  ‘ಅಮರನ್’ ಚಿತ್ರದ ನಂತರ, ಸಾಯಿ ಪಲ್ಲವಿ ತೆಲುಗು ಚಿತ್ರ ‘ಥಂಡೆಲ್’ ನಲ್ಲಿ ಕಾಣಿಸಿಕೊಂಡರು. ಜೊತೆಗೆ ಈ ಚಿತ್ರವು ಸೂಪರ್ ಡೂಪರ್ ಹಿಟ್ ಆಗಿತ್ತು.  2026 ರಲ್ಲಿ, ಅವರು ಅಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್ ಅವರೊಂದಿಗೆ ‘ಏಕ್ ದಿನ್’ ಚಿತ್ರದಲ್ಲಿ ಮೀರಾ ಪಾತ್ರದಲ್ಲಿ ಹಿಂದಿಗೆ ಪಾದಾರ್ಪಣೆ ಮಾಡಿದರು.

ಒಟ್ಟಿನಲ್ಲಿ ಸಾಯಿ ಪಲ್ಲವಿ ತಮ್ಮ ವೃತ್ತಿಜೀವನದಲ್ಲಿ ಸದಾ ವಿಭಿನ್ನ ಪಾತ್ರಗಳಿಗೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಇದೀಗ ಪೊಲೀಸ್ ಅಧಿಕಾರಿಯ ಪಾತ್ರದ ಮೂಲಕ ಮಿಂಚಲು ರೆಡಿಯಾಗಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports