Vijayalakshmi: ‘ಹಾವು ಕಂಡ್ರೆ ಭಯ ಆಗ್ತಾ ಇರಲಿಲ್ಲ; ನಾಗಾಭರಣರನ್ನ ಕಂಡ್ರೆ ಭಯ ಆಗೋದು’! ವಿಜಯಲಕ್ಷ್ಮಿ ಹೇಳಿದ್ದೇನು? | | ACTPnews

ನನಗೆ ಹಾವು ಕಂಡ್ರೆ ಭಯ ಆಗ್ತಾ ಇರಲಿಲ್ಲ; ನಾಗಾಭರಣರನ್ನ ಕಂಡ್ರೆ ಭಯ ಆಗೋದು!


Last Updated:

ನಾಗಮಂಡಲ ಕನ್ನಡದ ಕಲ್ಟ್ ಕ್ಲಾಸಿಕ್ ಚಿತ್ರವೇ ಆಗಿದೆ. ಈ ಚಿತ್ರದಲ್ಲಿ ನಟಿಸಿದ ವಿಜಯಲಕ್ಷ್ಮಿಅವರಿಗೆ ಇದು ಮೊದಲ ಚಿತ್ರವೂ ಆಗಿತ್ತು. ಉತ್ತರ ಕರ್ನಾಟಕದ ವಾಡೆಯಲ್ಲಿ ಚಿತ್ರೀಕರಿಸಿದ ಈ ಸಿನಿಮಾದಿಂದ ಇವರಿಗೆ ಹಲವು ವಿಶೇಷ ಅನುಭವಗಳು ಆಗಿವೆ. ಅವುಗಳಲ್ಲಿ ಕೆಲವನ್ನ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ನನಗೆ ಹಾವು ಕಂಡ್ರೆ ಭಯ ಆಗ್ತಾ ಇರಲಿಲ್ಲ; ನಾಗಾಭರಣರನ್ನ ಕಂಡ್ರೆ ಭಯ ಆಗೋದು!
ನನಗೆ ಹಾವು ಕಂಡ್ರೆ ಭಯ ಆಗ್ತಾ ಇರಲಿಲ್ಲ; ನಾಗಾಭರಣರನ್ನ ಕಂಡ್ರೆ ಭಯ ಆಗೋದು!

ನಾಗಮಂಡಲ ಚಿತ್ರಕ್ಕೆ (Nagamandala Movie) ವಿಜಯಲಕ್ಷ್ಮಿ (Vijayalakshmi) ಆಯ್ಕೆ ಆದಾಗ ಆಗಿನ್ನು SSLC ಮುಗಿಸಿದ್ದರು. ಆದರೆ, ಈ ಚಿತ್ರಕ್ಕೆ ಸೆಲೆಕ್ಟ್ ಆಗೋ ಮೊದಲೇ ರವಿಚಂದ್ರನ್ ಅವರು ವಿಜಯಲಕ್ಷ್ಮಿ ಅವರನ್ನ ಲಾಂಚ್ ಮಾಡ್ಬೇಕು ಅಂತ ಪ್ಲಾನ್ ಮಾಡಿದ್ದರು. ಕಾಲೇಜ್ ಅನ್ನುವ ಚಿತ್ರವನ್ನು ಶುರು ಮಾಡಿದ್ದರು. ಈ ಒಂದು ಚಿತ್ರದ ಪೂಜೆ ಚಿರಂಜೀವಿ ಕೂಡ ಬಂದಿದ್ದರು. ಬಾಲಾಜಿ ಈ ಚಿತ್ರದ ನಾಯಕರಾಗಿದ್ದರು. ಆದರೆ, ಈ ಸಿನಿಮಾ ತಡವಾಯಿತು. ಆಗಲೇ ಟಿ.ಎಸ್.ನಾಗಾಭರಣ (T. S.Nagabharana) ಅವರು ತಮ್ಮ ನಾಗಮಂಡಲ ಚಿತ್ರಕ್ಕೆ (Nagamandala Movie) ವಿಜಯಲಕ್ಷ್ಮಿ ಅವರನ್ನ ಸೆಲೆಕ್ಟ್ ಮಾಡಿದರು. ರವಿಚಂದ್ರನ್ ಓಕೆ ಅಂದ್ಮೇಲೆ ವಿಜಯಲಕ್ಷ್ಮಿ ಈ ಚಿತ್ರಕ್ಕೆ ಬಂದ್ರು. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.

ಶಿರಸಿಯಲ್ಲಿ ಶೂಟಿಂಗ್..

ನಾಗಮಂಡಲ ಚಿತ್ರದ ಶೂಟಿಂಗ್ ಶಿರಸಿಯಲ್ಲಿಯೂ ನಡೆದಿದೆ. ಹಸಿರು ಬೇಕಿರೋ ದೃಶ್ಯಗಳಿಗೆ ನಾಗಾಭರಣ ಅವರು ಶಿರಸಿಯಲ್ಲಿಯೇ ಶೂಟಿಂಗ್ ಮಾಡಿದ್ದಾರೆ.

Vijayalakshmi Share Nagamandala Movie Shooting Experience

ಶಿರಸಿಯಲ್ಲಿ ಶೂಟಿಂಗ್..

ಆದರೆ, ಮನೆಯ ದೃಶ್ಯಗಳನ್ನ ಬಾಗಲಕೋಟೆಯ ವಾಡೆ ಒಂದರಲ್ಲಿ ಮಾಡಿದ್ದಾರೆ. ಈ ಒಂದು ಹಳೆ ಮನೆಯಲ್ಲಿ ನಿಜವಾದ ಹಾವುಗಳು ಓಡಾಡುತ್ತಿದ್ದವು. ರಾತ್ರಿ ಆದ್ರೆ ಹಾವುಗಳ ಕಾಟವೂ ಇಲ್ಲಿ ಇರ್ತಾ ಇತ್ತು.

ಆ ದಿನ ಹಾವು…

ಆ ಒಂದು ದಿನ ಒಂದು ಘಟನೆ ನಡೆಯಿತು. ನಾಗಾಭರಣ ಅವರು ಹೇಳಿದಂತೆ ನಾನು ಹಾವಿನ ಜೊತೆಗೆ ದೃಶ್ಯ ತೆಗೆಯಬೇಕಿತ್ತು. ಅದಕ್ಕೇನೆ ಹಾವಿನ ಜೊತೆಗೆ ಅದೆಷ್ಟು ಫ್ರೆಂಡ್ಲಿ ಆಗಿರ್ತಿನಿ ಅಂತ ನೋಡೋಕೆ ನಾಗಾಭರಣ ಒಂದು ಐಡಿಯಾ ಮಾಡಿದ್ದರು. ವಿಜಯಲಕ್ಷ್ಮಿ ಅವರ ಕೈಗೆ ಸಾಕಿದ ಹಾವನ್ನ ಕೊಡುವದೇ ಆ ಪ್ಲಾನ್ ಆಗಿತ್ತು.

ದೇವಸ್ಥಾನ ಒಂದರಲ್ಲಿ ನಾನು ಕಣ್ಣು ಮುಂಚಿಕೊಂಡು ಕುಳಿತಿದ್ದೆ. ಆಗಲೇ ಕಣ್ಣು ಬಿಡ್ತೀನಿ ನನ್ನ ಮುಂದೆ ಒಂದು ಹಾವು ಹೆಡೆ ಎತ್ತಿಕೊಂಡು ನಿಂತಿತ್ತು. ಆದರೆ, ಅದು ಸಾಕಿದ ಹಾವು. ಅದನ್ನ ಹೀಗೆ ಹಿಡಿಯಬೇಕು. ಈ ರೀತಿ ಪ್ರೀತಿಯಿಂದ ನೋಡಿಕೊಳ್ಳಬೇಕು ಅಂತೆಲ್ಲ ಕಲಿಸಿಕೊಟ್ಟರು. ಇದರಿಂದ ರಿಯಲ್ ಹಾವಿನ ಜೊತೆಗೆ ನಟಿಸೋಕೆ ಸಾಧ್ಯವಾಯಿತು.

Vijayalakshmi Share Nagamandala Movie Shooting Experience

ನಾಗಾಭರಣ ಸರ್‌ ಕಂಡ್ರೆ ಭಯ
ನಾಗಾಭರಣ ಸರ್‌ ಕಂಡ್ರೆ ಭಯ

ನನಗೆ ಹಾವುಗಳ ಬಗ್ಗೆ ಆಗ ಭಯವೇ ಇರಲಿಲ್ಲ. ಆದರೆ, ನಾಗಾಭರಣ ಅವರನ್ನ ಕಂಡರೆ ಭಯ ಆಗುತ್ತಿತ್ತು. ರೀಟೇಕ್ ಆದರೆ ಮುಗಿತು. ಬೈಸಿಕೊಳ್ಳುತ್ತಿದ್ದೆ ನೋಡಿ.

ಪ್ರಕಾಶ್ ರಾಜ್ ಆ ಸೀನ್

ಪ್ರಕಾಶ್ ರಾಜ್ ಅವರು ಅದ್ಭುತ ನಟರೇ ಆಗಿದ್ದರು. ಅವರು ಅಪ್ಪಣ್ಣನ ಪಾತ್ರದಲ್ಲಿ ಇದ್ದರೆ ಆಯಿತು. ಭಯಂಕರ ಕೋಪದಲ್ಲಿಯೇ ಇರ್ತಾ ಇದ್ದರು.

Vijayalakshmi Share Nagamandala Movie Shooting Experience

ಆ ದಿನ ಹಾವು…

ನಾನು ಬಸುರಿ ಅಂತ ಹೇಳುವ ದೃಶ್ಯದಲ್ಲಿ ನನ್ನ ಎಳೆದು ನಿಜಕ್ಕೂ ಬಿಸಾಕಿ ಬಿಟ್ಟಿದ್ದರು. ಆ ಒಂದು ಪಾತ್ರದಲ್ಲಿ ಅಷ್ಟೊಂದು ಇನ್ವಾಲ್ವ್ ಆಗಿದ್ದರು. ಚಿತ್ರದಲ್ಲಿ ದೊಡ್ಡ ಕಲಾವಿದರೇ ಇದ್ದರು. ಆದರೂ, ನಾನು ನನ್ನ ಕೆಲಸದ ಮೇಲೆ ಹೆಚ್ಚು ಫೋಕಸ್ ಮಾಡ್ತಾನೇ ಇದ್ದೆ.

ನಮ್ಮ ತಂದೆ ಒಂದು ಮಾತು ಹೇಳಿದ್ರು. ಸದಾ ನಿನ್ನ ಕೆಲಸದ ಮೇಲೆ ಫೋಕಸ್ ಮಾಡು, ದಿ ಬೆಸ್ಟ್ ಕೊಡು ಅಂತ ಹೇಳ್ತಾ ಇದ್ದರು. ಅದಕ್ಕೇನೆ ನಾನು ನನ್ನ ಕೆಲಸದ ಮೇಲೆ ಹೆಚ್ಚು ಫೋಕಸ್ ಆಗ್ತಿರ್ತಾ ಇದ್ದೆ ಅಂತಲೇ ಹೇಳಿಕೊಂಡಿದ್ದಾರೆ. ಆರ್.ಜೆ.ರಾಜೇಶ್ ಅವರ Rajesh Reveals ಪಾಡ್‌ಕಾಸ್ಟ್ ಅಲ್ಲಿಯೇ ವಿಜಯಲಕ್ಷ್ಮಿ ಅವರು ಈ ಎಲ್ಲ ವಿಷಯಗಳನ್ನ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed