Last Updated:
Srinidhi Shetty: ಸ್ಯಾಂಡಲ್ವುಡ್ನ ಖ್ಯಾತ ನಟಿ ಶ್ರೀನಿಧಿ ಶೆಟ್ಟಿ ಅವರು ಮತ್ತೊಂದು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರೋಕೆ ರೆಡಿಯಾಗಿದ್ದಾರೆ. ಯಾವ ಮೂವಿ? ಏನು ಪಾತ್ರ?
ಕೆಜಿಎಫ್ ಚೆಲುವೆ ಶ್ರೀನಿಧಿ ಶೆಟ್ಟಿ ಪ್ಯಾನ್ ಇಂಡಿಯಾ ಟ್ರೆಂಡ್ ಹಿಂದೆ ಬೀಳದೆ ಮನಸಿಗೆ ಇಷ್ಟವಾಗುವ ಪಾತ್ರಗಳನ್ನು ಮಾಡುತ್ತಾ ಸದ್ದಿಲ್ಲದೆ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀನಿಧಿ ಶೆಟ್ಟಿ ಸಿನಿಮಾ ಮಾಡುವಾಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲ್ಲ. ತಮಗೆ ಇಷ್ಟವಾಗುವ ಭಿನ್ನ, ವಿಭಿನ್ನವಾದ ಪಾತ್ರಗಳನ್ನು ಆರಿಸಿಕೊಳ್ಳುತ್ತಿದ್ದಾರೆ.
ಇನ್ನು ಅವರು ದಗ್ಗುಬಾಟಿ ವೆಂಕಟೇಶ್ ಅವರ ಜೊತೆ ಒಂದು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾದಲ್ಲಿ ಕಾಣಿಸಿಕೊಳ್ಳೋಕೆ ರೆಡಿಯಾಗಿದ್ದಾರೆ. ಅವರ ಸಿನಿಮಾದ ಪೊಸ್ಟರ್ ಈಗ ವೈರಲ್ ಆಗಿದೆ.
ವೆಂಕಟೇಶ್ ನಟಿಸಿರುವ ಮುಂಬರುವ ಚಿತ್ರ ‘ಆದರ್ಶಕುಟುಂಬಂ ಮನೆ ಸಂಖ್ಯೆ: 47’. ತ್ರಿವಿಕ್ರಮ್ ನಿರ್ದೇಶನದ ಈ ಚಿತ್ರವನ್ನು ಹರಿಕಾ ಮತ್ತು ಹಾಸಿನ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎಸ್. ರಾಧಾಕೃಷ್ಣ (ಚಿನಬಾಬು) ನಿರ್ಮಿಸುತ್ತಿದ್ದಾರೆ.
ಅಕ್ಟೋಬರ್ 2 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಇದರಲ್ಲಿ ನಾಯಕ ನಟರಾದ ವೆಂಕಟೇಶ್ ಮತ್ತು ಶ್ರೀನಿಧಿ ತಮ್ಮ ಫ್ಯಾಮಿಲಿ ಜೊತೆ ಕಾಣಿಸಿಕೊಂಡಿದ್ದಾರೆ.
ಮನರಂಜನೆ ಮತ್ತು ಹೃದಯಸ್ಪರ್ಶಿ ಭಾವನೆಗಳ ಮಿಶ್ರಣವಾಗಿ ಈ ಸಿನಿಮಾ ಬರಲಿದೆ. ಫ್ಯಾಮಿಲಿ ಎಂಟರ್ಟೈನಿಂಗ್ ಸಿನಿಮಾ ಇದಾಗಲಿದೆ. ತ್ರಿವಿಕ್ರಮ್ ಅವರ ಹಾಸ್ಯ ಶೈಲಿ ಮತ್ತು ಅರ್ಥಪೂರ್ಣ ಕಥೆ ಪ್ರೇಕ್ಷಕರನ್ನು ಮೆಚ್ಚಿಸುತ್ತದೆ ಎಂದು ಚಿತ್ರತಂಡ ಹೇಳಿದೆ.
ಈ ಚಿತ್ರಕ್ಕೆ ರವಿ ಕೆ ಚಂದ್ರನ್ ಕ್ಯಾಮೆರಾ ವರ್ಕ್ ಮಾಡಿದ್ದು ಥಮನ್ ಸಂಗೀತವಿದೆ. ಎಸ್. ರಾಧಾಕೃಷ್ಣ (ಚಿನಬಾಬು) ನಿರ್ಮಾಣ ಮಾಡಿದ್ದು, ತ್ರಿವಿಕ್ರಮ್ ಬರೆದು ನಿರ್ದೇಶಿಸಿದ್ದಾರೆ. ವಿಕ್ಟರಿ ವೆಂಕಟೇಶ್-ತ್ರಿವಿಕ್ರಮ್ ಕಾಂಬೊ 2001 ರಲ್ಲಿ ಬಂದ ‘ನುವ್ವು ನಾಕು ನಚ್ಚಾವ್’ ಮತ್ತು 2004 ರಲ್ಲಿ ಬಂದ ‘ಮಲ್ಲೇಶ್ವರಿ’ ಚಿತ್ರಗಳನ್ನು ನೆನಪಿಸುತ್ತದೆ.
ಈ ಎರಡೂ ಚಿತ್ರಗಳು ಕ್ಲೀನ್ ಫ್ಯಾಮಿಲಿ ಎಂಟರ್ಟೈನರ್ ಆಗಿದ್ದವು. ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ಬಸ್ಟರ್ ಯಶಸ್ಸನ್ನು ಗಳಿಸಿದವು. ಸುಮಾರು ಎರಡು ದಶಕಗಳ ನಂತರ, ಈ ಜೋಡಿ ‘ಆದರ್ಶ ಕುಟುಂಬಕಂ’ ಚಿತ್ರಕ್ಕಾಗಿ ಒಟ್ಟಿಗೆ ಬರುತ್ತಿದೆ.
ಈ ಚಿತ್ರದಲ್ಲಿ ವೆಂಕಟೇಶ್ ಗೆ ನಾಯಕಿಯಾಗಿ ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ತ್ರಿವಿಕ್ರಮ್ ನಿರ್ದೇಶನದ ಈ ಚಿತ್ರವನ್ನು ಹರಿಕಾ ಮತ್ತು ಹಾಸಿನ್ ಬ್ಯಾನರ್ ಅಡಿಯಲ್ಲಿ ಎಸ್. ರಾಧಾಕೃಷ್ಣ ನಿರ್ಮಿಸುತ್ತಿದ್ದಾರೆ. ಸ್ಟಾರ್ ಸಂಗೀತ ನಿರ್ದೇಶಕ ಥಮನ್ ಕೂಡ ಸಂಗೀತ ಸಂಯೋಜಿಸುತ್ತಿದ್ದಾರೆ.
ಅಕ್ಟೋಬರ್ 2ರಂದು, ಆ ದಿನದಂದು ಪ್ರಪಂಚದಾದ್ಯಂತ ಆದರ್ಶ ಕುಟುಂಬದ ಬಾಗಿಲು ತೆರೆಯುತ್ತದೆ. ಪ್ರತಿ ಕುಟುಂಬವೂ ಈ ದಿನಾಂಕವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
Bangalore,Karnataka
Jun 28, 2026 11:39 AM IST













