Vijay: ದೇವರಕೋಣೆಯಲ್ಲಿ ವಿಜಯ್ ದಳಪತಿ ಮೂರ್ತಿ! ಅಭಿಮಾನಿಯಿಂದ ನಿತ್ಯ ಪೂಜೆ; ವಿಡಿಯೋ ವೈರಲ್ | | ACTPnews

ವಿಜಯ್


Last Updated:

Vijay: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಹಾಗೂ ರಾಜಕಾರಣಿ ಜೋಸೆಫ್ ವಿಜಯ್ ಅವರ ಅಭಿಮಾನಿಯೊಬ್ಬರ ಭಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವಿಜಯ್
ವಿಜಯ್

ದಕ್ಷಿಣದ ಸೂಪರ್‌ಸ್ಟಾರ್ ದಳಪತಿ ವಿಜಯ್ (Vijay) ಅವರನ್ನು ಕಲಾವಿದರಾಗಿ ಮಾತ್ರವಲ್ಲ, ಕುಟುಂಬದ ಸದಸ್ಯರಂತೆ ಪ್ರೀತಿಸುವ ಮತ್ತು ಆರಾಧಿಸುವ ಅಭಿಮಾನಿಗಳ ಸಂಖ್ಯೆ ಅಪಾರವಾಗಿದೆ. ಇದೀಗ ಅಂತಹ ಒಂದು ಘಟನೆ ಮತ್ತೆ ಸುದ್ದಿಯಾಗಿದ್ದು, ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಹಾಗೂ ರಾಜಕಾರಣಿ ಜೋಸೆಫ್ ವಿಜಯ್ ಅವರ ಅಭಿಮಾನಿಯೊಬ್ಬರು ಮಾಡಿದ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ತಮಿಳು ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ಅಗ್ರ ನಾಯಕನಾಗಿ ಮಿಂಚಿದ ವಿಜಯ್, ತಮ್ಮ ವಿಶಿಷ್ಟ ಅಭಿನಯ, ಹಾಗೂ ಸಾಮಾಜಿಕ ಕಾಳಜಿಯಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದರು. ಸಿನಿಮಾ ಕ್ಷೇತ್ರದಲ್ಲಿ ಸಾಧಿಸಿದ ಜನಪ್ರಿಯತೆಯನ್ನು ರಾಜಕೀಯ ಕ್ಷೇತ್ರದಲ್ಲೂ ಯಶಸ್ವಿಯಾಗಿ ಬಳಸಿಕೊಂಡ ಅವರು, ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿದರು.

ಮೇ 10, 2026ರಂದು ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿಯೇ ಗಮನಾರ್ಹ ಯಶಸ್ಸು ಸಾಧಿಸಿದ ಅವರು, ಚಿತ್ರರಂಗದಿಂದ ಬಂದು ತಮಿಳುನಾಡಿನ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಪ್ರಮುಖ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದರು. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಐತಿಹಾಸಿಕ ಕ್ಷಣವೆಂದು ಪರಿಗಣಿಸಲಾಯಿತು.

ರಾಜಕೀಯ ಕ್ಷೇತ್ರದಲ್ಲಿ ವಿಜಯ್ ಅವರ ಯಶಸ್ಸು ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಸಿನಿಮಾ ಪರದೆಯ ಮೇಲೆ ಕಂಡ ನಾಯಕ ಇದೀಗ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವುದು ಅಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿದೆ.

ಅಷ್ಟೇ ಅಲ್ಲದೆ, ಪಕ್ಷದ ಚುನಾವಣಾ ವಿಜಯದ ಬಳಿಕ ಪ್ರತಿದಿನ ಆ ಪ್ರತಿಮೆಗೆ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ದೃಶ್ಯಗಳನ್ನು ಒಳಗೊಂಡ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ್ದು, ಸಾವಿರಾರು ಜನರ ಗಮನ ಸೆಳೆದಿವೆ.

ತಮಿಳುನಾಡಿನ ಮುಖ್ಯಮಂತ್ರಿ ಆಗಿರುವ ವಿಜಯ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಸಿನಿಮಾ ನಟನಾಗಿ ಆರಂಭವಾದ ಅವರ ಪಯಣ ಇಂದು ರಾಜಕೀಯ ನಾಯಕತ್ವದ ಹಂತ ತಲುಪಿದೆ. ಅವರ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ಮತ್ತು ಜನಪ್ರಿಯತೆಯನ್ನು ಮೀರಿದ ಮಟ್ಟದಲ್ಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed