CJP Abhijit Deepke: ಸಿಜೆಪಿಗೆ 24 ಗಂಟೆಗಳ ಡೆಡ್‌ಲೈನ್! ಮಹಿಳೆಯ ಅಶ್ಲೀಲ ಡೀಪ್‌ಫೇಕ್ ಫೋಟೋ ತೆಗೆಯುವಂತೆ ಹೈಕೋರ್ಟ್ ತಾಕೀತು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಿಜೆಪಿಯ ಸೌರವ್ ದಾಸ್, ಅಭಿಜೀತ್ ದಿಪ್ಕೆ, ಆಶುತೋಷ್ ರಂಕಾ


Last Updated:

CJP Abhijit Deepke: ಕಾಕ್ರೋಚ್‌ ಜನತಾ ಪಾರ್ಟಿಯ ಮುಖ್ಯಸ್ಥ ಸೇರಿದಂತೆ ನಾಲ್ವರಿಗೆ ದೆಹಲಿ ಹೈಕೋರ್ಟ್ ನೋಟಿಸ್ ನೀಡಿದೆ. ಪ್ರಧಾನಿ ಮೋದಿಯವರೊಂದಿಗೆ ಮಹಿಳೆಯ ಡೀಫ್ ಫೇಕ್‌ ಫೋಟೋಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.

ಸಿಜೆಪಿಯ ಸೌರವ್ ದಾಸ್, ಅಭಿಜೀತ್ ದಿಪ್ಕೆ, ಆಶುತೋಷ್ ರಂಕಾ
ಸಿಜೆಪಿಯ ಸೌರವ್ ದಾಸ್, ಅಭಿಜೀತ್ ದಿಪ್ಕೆ, ಆಶುತೋಷ್ ರಂಕಾ

ದೆಹಲಿ: ಕಾಕ್ರೋಚ್‌ ಜನತಾ ಪಾರ್ಟಿಯ (Cockroach Janta Party) ಮುಖ್ಯಸ್ಥ ಸೇರಿದಂತೆ ನಾಲ್ವರಿಗೆ ದೆಹಲಿ ಹೈಕೋರ್ಟ್ (Delhi High Court) ನೋಟಿಸ್ ನೀಡಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಅಕ್ರಮದ (NEET Protest) ವಿರುದ್ಧ ನಡೆದ ಪ್ರತಿಭಟನೆ ಸಂಬಂಧ ಸಿಜೆಪಿಗೆ (CJP) ನೋಟಿಸ್ ನೀಡಲಾಗಿದೆ. ಓರ್ವ ಮಹಿಳೆಯ ಕ್ರಿಮಿನಲ್ ಅರ್ಜಿಯ ಆಧಾರದ ಮೇಲೆ ಸಿಜೆಪಿಯ ಸೌರವ್ ದಾಸ್ (Sourav Das), ಅಭಿಜೀತ್ ದಿಪ್ಕೆ (Abhijeet Dipke), ಆಶುತೋಷ್ ರಂಕಾ ಮತ್ತು ರತ್ನಾ ಸಿಂಗ್ ಎಂಬುವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಪ್ರಧಾನಿ ಮೋದಿಯವರೊಂದಿಗೆ (PM Narendar Modi) ಮಹಿಳೆಯ ಡೀಫ್ ಫೇಕ್‌ ಫೋಟೋಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.

ಪ್ರಧಾನಿ ಜೊತೆ ಮಹಿಳೆಯ ಡೀಪ್‌ಫೇಕ್ ಫೋಟೋ

ಈ ಮಹಿಳೆ ಆರೋಪಿಸಿರುವಂತೆ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತನ್ನನ್ನು ಅಶ್ಲೀಲ ರೀತಿಯಲ್ಲಿ ತೋರಿಸುವ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಡೀಪ್‌ಫೇಕ್ ಚಿತ್ರಗಳನ್ನು ಸಿಜೆಪಿ ಪ್ರತಿಭಟನೆ ವೇಳೆ ಸಾರ್ವಜನಿಕ ಪ್ರದರ್ಶನಗಳಲ್ಲಿ ಪ್ರಸಾರ ಮಾಡಲಾಗಿದೆ.

ಪ್ರತಿಭಟನೆ ವೇಳೆ ಡೀಪ್‌ಫೇಕ್ ಫೋಟೋ ಪ್ರದರ್ಶನ

ಅರ್ಜಿಯ ಪ್ರಕಾರ, ಈ ಕಾರ್ಯಕರ್ತರು ಆ ಮಹಿಳೆಯ ವೈಯಕ್ತಿಕ ಛಾಯಾಚಿತ್ರವನ್ನು ಅನಧಿಕೃತವಾಗಿ ಪಡೆದು, ಮುಖ ಬದಲಾಯಿಸುವ ಎಐ ತಂತ್ರಜ್ಞಾನ ಬಳಸಿ ಅವಳ ಮುಖವನ್ನು ಪ್ರಧಾನಿಯೊಂದಿಗಿನ ಅಶ್ಲೀಲ ಚಿತ್ರಗಳ ಮೇಲೆ ಹಚ್ಚಿದ್ದಾರೆ. ಈ ಮಾರ್ಫ್ ಮಾಡಿದ ಚಿತ್ರಗಳ ಬ್ಯಾನರ್‌ಗಳನ್ನು ಮುದ್ರಿಸಿ ಜಂತರ್ ಮಂತರ್‌ನಲ್ಲಿ ನಡೆದ ದೊಡ್ಡ ಸಾರ್ವಜನಿಕ ಸಭೆಗಳಲ್ಲಿ ತೋರಿಸಲಾಗಿದೆ. ಅಲ್ಲದೆ ಲೈಂಗಿಕ ಸೂಚನೆಗಳಿರುವ ಘೋಷಣೆಗಳನ್ನು ಕೂಗಲಾಗಿದೆ ಅಂತ ಮಹಿಳೆ ಆರೋಪಿಸಿದ್ದರು.

ಅಶ್ಲೀಲ ವೆಬ್‌ಸೈಟ್‌ಗಳಲ್ಲೂ ಅಪ್ಲೋಡ್ ಮಾಡಿರೋ ಆರೋಪ

ಇದೇ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ವ್ಯವಸ್ಥಿತವಾಗಿ ಅಪ್‌ಲೋಡ್ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತು.

ಮಹಿಳೆ ಮತ್ತು ಪ್ರಧಾನಿ ಗೌರವಕ್ಕೆ ಧಕ್ಕೆ

ಇದು ಕೇವಲ ಒಬ್ಬ ಮಹಿಳೆಯ ವಿಷಯವಲ್ಲ, ಪ್ರಧಾನಿಯನ್ನು ಒಳಗೊಂಡಿರುವುದರಿಂದ ರಾಷ್ಟ್ರದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯ ಗೌರವಕ್ಕೂ ಸಂಬಂಧಿಸಿದೆ ಎಂದು ಡಿವಿಷನ್ ಬೆಂಚ್ ಹೇಳಿತು. ಅನುಮತಿಯಿಲ್ಲದೆ ಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳುವುದು ವ್ಯಕ್ತಿಯ ಗೌರವ ಮತ್ತು ಸಂವಿಧಾನಿಕ ಕಚೇರಿಯ ಘನತೆ ಎರಡನ್ನೂ ಹಾನಿಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಪೊಲೀಸರು ಈ ತನಿಖೆಯನ್ನು ಸಂಪೂರ್ಣ ಸಂವೇದನೆಯಿಂದ ನಡೆಸುತ್ತಾರೆ ಎಂದು ಭರವಸೆ ನೀಡಲಾಯಿತು.

ಮಹಿಳೆಗೆ ಸೂಕ್ತ ರಕ್ಷಣೆ ನೀಡುವಂತೆ ಆದೇಶ

ಅರ್ಜಿದಾರಳಿಗೆ ಸಾವು ಮತ್ತು ಅತ್ಯಾಚಾರದ ಬೆದರಿಕೆಗಳು ಬಂದಿರುವುದರಿಂದ ನ್ಯಾಯಾಲಯ ತಕ್ಷಣದ ಪೊಲೀಸ್ ರಕ್ಷಣೆ ನೀಡಿತು. ದೆಹಲಿ ಪೊಲೀಸರಿಗೆ ಅವರ ಸಂಪೂರ್ಣ ಭದ್ರತೆ ಖಾತ್ರಿಪಡಿಸಿ, ಮತ್ತಷ್ಟು ಕಿರುಕುಳ ತಡೆಯಲು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುವಂತೆ ಆದೇಶಿಸಿತು.

24 ಗಂಟೆಗಳ ಒಳಗೆ ಫೋಟೋ ತೆಗೆದು ಹಾಕಿ

ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ ಎಲ್ಲ ಡಿಜಿಟಲ್ ವೇದಿಕೆಗಳಿಂದ ಈ ಆಕ್ಷೇಪಾರ್ಹ ಪೋಸ್ಟ್‌ಗಳನ್ನು 24 ಗಂಟೆಗಳೊಳಗೆ ತೆಗೆದುಹಾಕುವಂತೆ ನಿರ್ದೇಶನ ನೀಡಲಾಯಿತು. ಡಿಜಿಟಲ್ ವೇದಿಕೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ಈ ಮಾರ್ಫ್ ಚಿತ್ರಗಳನ್ನು ಎಲ್ಲ ಸಾರ್ವಜನಿಕ ಜಾಗಗಳಲ್ಲಿ ಹುಡುಕಿ, ನಿರ್ಬಂಧಿಸಿ, ಅಳಿಸಬೇಕು ಎಂದು ಆದೇಶಿಸಲಾಯಿತು.

ಸಿಜೆಪಿಯ ನಾಲ್ವರಿಗೆ ನೋಟಿಸ್

ಡೀಪ್‌ಫೇಕ್ ತಂತ್ರಜ್ಞಾನ ವೇಗವಾಗಿ ಹರಡುತ್ತಿರುವುದನ್ನು ನ್ಯಾಯಾಲಯ ಆತಂಕದಿಂದ ನೋಡಿತು. ರಾಜಕೀಯ ಪ್ರತಿಭಟನೆಗಳಲ್ಲಿ ಅನುಮತಿಯಿಲ್ಲದ ಡೀಪ್‌ಫೇಕ್ ವಿಷಯವನ್ನು ಆಯುಧವಾಗಿ ಬಳಸುವುದಕ್ಕೆ ವಿರುದ್ಧವಾಗಿ ಈ ತೀರ್ಪು ಬಲವಾದ ಕಾನೂನು ಪೂರ್ವನಿದರ್ಶನ ಸೃಷ್ಟಿಸುತ್ತದೆ. ವ್ಯಕ್ತಿಗಳು ಮತ್ತು ಸಾರ್ವಜನಿಕ ವ್ಯಕ್ತಿಗಳನ್ನು ಗುರಿಯಾಗಿಸುವ ವೈರಲ್ ತಪ್ಪು ಮಾಹಿತಿಗೆ ನ್ಯಾಯಾಲಯ ತ್ವರಿತವಾಗಿ ಮಧ್ಯಪ್ರವೇಶಿಸುತ್ತದೆ ಎಂಬುದನ್ನು ಇದು ದೃಢಪಡಿಸುತ್ತದೆ. ಇನ್ನು ಈ ಸಂಬಂಧ ಸಿಜೆಪಿಯ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ ಎಂದು ನ್ಯೂಸ್ 18 ಇಂಗ್ಲಿಷ್ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports