Last Updated:
ಸದ್ಯಕ್ಕೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡುವುದು ಕಷ್ಟ. ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂಬುದು ನಿಜವಾದರೂ, ಅವರನ್ನು ತಂಡದಲ್ಲಿ ಏಕೆ ಸೇರಿಸಿಕೊಳ್ಳುತ್ತಿಲ್ಲ ಎಂಬುದನ್ನು ನಾನು ಅವರಿಗೆ ವಿವರಿಸಿದ್ದೇನೆ. ಕೆಲವೊಮ್ಮೆ, ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರ ಕೂಡ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಎಂದು ಗಂಭೀರ್ ತಿಳಿಸಿದ್ದಾರೆ.
ಪ್ರತಿ ಟಿ20 ಸರಣಿ (T20 Series) ಆರಂಭವಾಗುವ ಮುನ್ನ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ (Team India XI) ಬಗ್ಗೆ ಆಗುವ ಚರ್ಚೆ ಎಂದರೆ ಯುವ ಆಟಗಾರ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಆಡುವ ಹನ್ನೊಂದರಲ್ಲಿ ಸೇರಿಸಲಾಗುತ್ತದೆಯೇ ಎಂಬುದು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟಿ20ಗೆ ಪದಾರ್ಪಣೆ ಮಾಡಿದಾಗಿನಿಂತ ಇಲ್ಲಿಯವರೆಗೆ ಇದೇ ಮಾತುಗಳು ಕೇಳಿಬರುತ್ತಿವೆ. ಆದರೆ ಸಾಮಾಜಿಕ ಜಾಲತಾಣದ ಅಥವಾ ಹೊರಗಿನ ಅಭಿಪ್ರಾಯಗಳಿಂದ ಪ್ಲೇಯಿಂಗ್ ಇಲೆವೆನ್ ನಿರ್ಧರಿಸಲ್ಪಡುವುದಿಲ್ಲ ಎಂದು ಭಾರತ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ (Gautam Gambhir) ತಿಳಿಸಿದ್ದಾರೆ.
ಸಂಜು ಸ್ಯಾಮ್ಸನ್ ವಿಫಲವಾದ ನಂತರ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಪ್ರವೇಶ ಮಾಡಿದರು. ತರುವಾಯ, ಜಿಂಬಾಬ್ವೆ ಪ್ರವಾಸಕ್ಕೆ ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿಲ್ಲ, ಅಲ್ಲಿ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಅವರೊಂದಿಗೆ ಭರ್ಜರಿ ಪ್ರದರ್ಶನ ನೀಡಿದರು ಮತ್ತು ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಸಹ ಗೆದ್ದಿದ್ದರು. ಆದರೆ, ಇದರ ಹೊರತಾಗಿಯೂ, ಅವರಿಗೆ ಅಫ್ಘಾನಿಸ್ತಾನ ವಿರುದ್ಧ ಆಡಲು ಅವಕಾಶ ಸಿಗಲಿಲ್ಲ. ಸಂಜು ಸ್ಯಾಮ್ಸನ್ ತಂಡಕ್ಕೆ ಮರಳಿದ ನಂತರ, ಸೂರ್ಯವಂಶಿ ಬೆಂಚ್‌ನಲ್ಲಿಯೇ ಇದ್ದರು. ವೈಭವ್ ಮತ್ತು ಸ್ಯಾಮ್ಸನ್ ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟಿಗೆ ಆಡಲು ಪರಿಸ್ಥಿತಿಗಳು ಅವಕಾಶ ಮಾಡಿಕೊಟ್ಟವು, ಆದರೆ ಈಗ, ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ, ಇಬ್ಬರು ಆಟಗಾರರಲ್ಲಿ ಒಬ್ಬರ ಭವಿಷ್ಯ ಮತ್ತೊಮ್ಮೆ ಸಂದೇಹದಲ್ಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೂ ಮುನ್ನ ಅಧಿಕೃತ ಪ್ರಸಾರಕರಾದ ಜಿಯೋಹಾಟ್‌ಸ್ಟಾರ್ ‘ಫಾಲೋ ದಿ ಬ್ಲೂಸ್ ಗೌತಮ್ ಗಂಭೀರ್ ಅನ್‌ಫಿಲ್ಟಡ್’ ಕಾರ್ಯಕ್ರಮದಲ್ಲಿ ಮಾತನಾಡಿದ ಗಂಭೀರ್, ವೈಭವ್ ಕುರಿತು ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದರು. ಆ ಯುವ ಆಟಗಾರ ಇನ್ನೂ ಸ್ವಲ್ಪ ಕಾಲ ತಂಡಕ್ಕೆ ಡ್ರಿಂಕ್ಸ್ ನೀಡುವ ಕೆಲಸವನ್ನೇ ಮುಂದುವರಿಸಬೇಕಾಗುತ್ತದೆ ಎಂದು ಅವರು ಪರೋಕ್ಷವಾಗಿ ಟೀಮ್ ಇಂಡಿಯಾದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ತಮ್ಮ ಅವಕಾಶಕ್ಕಾಗಿ ಇನ್ನೂ ಕಾಯಬೇಕಾಗುತ್ತದೆ ಎಂದು ಮುಖ್ಯ ಕೋಚ್ ಗೌತಮ್ ಗಂಭೀರ್ ಪುನರುಚ್ಚರಿಸಿದ್ದಾರೆ. ಈ ಪರಿಸ್ಥಿತಿಯನ್ನು ತಾವು ವೈಭವ್‌ಗೆ ಸ್ಪಷ್ಟವಾಗಿ ವಿವರಿಸಿರುವುದಾಗಿ ಅವರು ತಿಳಿಸಿದರು.
ಸದ್ಯಕ್ಕೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡುವುದು ಕಷ್ಟ. ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂಬುದು ನಿಜವಾದರೂ, ಅವರನ್ನು ತಂಡದಲ್ಲಿ ಏಕೆ ಸೇರಿಸಿಕೊಳ್ಳುತ್ತಿಲ್ಲ ಎಂಬುದನ್ನು ನಾನು ಅವರಿಗೆ ವಿವರಿಸಿದ್ದೇನೆ. ಕೆಲವೊಮ್ಮೆ, ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರ ಕೂಡ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ. ಅಂತಿಮವಾಗಿ, ಆಡುವ ಹನ್ನೊಂದರ ಬಳಗದ ರಚನೆಯು ಸಾಮಾಜಿಕ ಜಾಲತಾಣದ ಚರ್ಚೆಗಳು ಅಥವಾ ಇತರರ ಅಭಿಪ್ರಾಯಗಳಿಂದ ನಿರ್ಧಾರವಾಗುವುದಿಲ್ಲ. ಇದು ಡ್ರೆಸ್ಸಿಂಗ್ ರೂಮ್‌ನಲ್ಲಿ ಯಾರಿದ್ದಾರೆ, ಪರಿಸ್ಥಿತಿ ಹೇಗಿದೆ ಮತ್ತು ಪಂದ್ಯವನ್ನು ಯಾರು ಗೆಲ್ಲಿಸಿಕೊಡಬಲ್ಲರು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.” ಈ ಅಂಶಗಳನ್ನು ಪರಿಗಣಿಸಿದ ನಂತರ ನಾಯಕ ಮತ್ತು ಕೋಚ್ ಅಂತಿಮ ಆಡುವ ಬಳಗದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ನಾವು ವೈಭವ್‌ಗೆ ಆಡುವ ಅವಕಾಶ ನೀಡಬೇಕೆಂದರೆ, ಅಭಿಷೇಕ್ ಅಥವಾ ಸಂಜು ಸ್ಯಾಮ್ಸನ್ ಅವರಲ್ಲಿ ಯಾರನ್ನು ಕೈಬಿಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಸ್ವಲ್ಪ ಸಮಯದಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಜೋಡಿಯನ್ನ ನಾವು ಹಠಾತ್ತನೆ ಬದಲಾಯಿಸಲು ಸಾಧ್ಯವಿಲ್ಲ. ಕೇವಲ ಎರಡು ಅಥವಾ ಮೂರು ವೈಫಲ್ಯಗಳ ನಂತರ ಯುವ ಆಟಗಾರರಿಗಾಗಿ ಹಿರಿಯ ಆಟಗಾರರನ್ನು ಪಕ್ಕಕ್ಕಿಡುವುದು ಸರಿಯಲ್ಲ. ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಂದು ವಿಷಯವಾದರೆ, ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಹೆಚ್ಚು ಕಷ್ಟಕರವಾದ ಕೆಲಸ. ಸಂಜು-ಅಭಷೇಕ್ ಜೋಡಿಯನ್ನು ಮುಂದುವರಿಸುವ ಮೂಲಕ ನಾವು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದೇವೆ ಎಂದು ನನಗೆ ಅನ್ನಿಸುತ್ತದೆ ” ಎಂದು ಗಂಭೀರ್ ಹೇಳಿದರು.
ಇಂಗ್ಲೆಂಡ್ ಪ್ರವಾಸದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವೈಭವ್, ಜಿಂಬಾಬ್ವೆ ಪ್ರವಾಸದ ವೇಳೆ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಆದರೆ, ಅಫ್ಘಾನಿಸ್ತಾನದ ವಿರುದ್ಧದ ತವರು ಸರಣಿಯಲ್ಲಿ ಅವರಿಗೆ ಒಂದೇ ಒಂದು ಅವಕಾಶವೂ ಸಿಗಲಿಲ್ಲ. ಏಷ್ಯನ್ ಗೇಮ್ಸ್‌ನಲ್ಲಿ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯುವ ಅವಕಾಶ ಸಿಕ್ಕಾಗ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಶ್ರೀಲಂಕಾ ವಿರುದ್ಧದ ಸೆಮಿಫೈನಲ್‌ನಲ್ಲಿ 21 ಎಸೆತಗಳಲ್ಲಿ 38 ರನ್ ಮತ್ತು ಪಾಕಿಸ್ತಾನದ ವಿರುದ್ಧದ ಫೈನಲ್‌ನಲ್ಲಿ 15 ರನ್ ಗಳಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಆರಂಭಿಕ ಹಂತದಲ್ಲೂ ಅವರಿಗೆ ಅವಕಾಶಗಳು ಸಿಗುವ ಸಾಧ್ಯತೆ ಕಡಿಮೆ ಎಂದು ತೋರುತ್ತದೆ.














