Last Updated:
ಮಾನವು 37,000 ಅಡಿಗಳ ಕ್ರೂಸಿಂಗ್ ಎತ್ತರವನ್ನು ತಲುಪಿತ್ತು. ಆದ್ರೆ, ಕ್ಷಣಾರ್ಧದಲ್ಲಿ ವಿಮಾನದ ಎತ್ತರವು ಸುಮಾರು 9,000 ಅಡಿಗೆ ಇಳಿಕೆ ಕಂಡಿದೆ.
ಲಂಡನ್: ಫ್ಲೈದುಬೈ (Flydubai) ಘಟನೆ ಮಾಸುವ ಮುನ್ನವೇ ಮತ್ತೊಂದು ವಿಮಾನ ಎಮೆರ್ಜೆನ್ಸಿ ಘೋಷಣೆ ಮಾಡಿದೆ. ಬ್ರಿಟಿಷ್ ಏರ್‌ವೇಸ್‌ನ (British Airways) ವಿಮಾನದಲ್ಲಿ ಈ ಘಟನೆ ನಡೆದಿದೆ. ಲಂಡನ್‌ನಿಂದ (London) ಅಮೆರಿಕದ (America) ಚಿಕಾಗೋಗೆ ತೆರಳುತ್ತಿದ್ದ ಬ್ರಿಟಿಷ್ ಏರ್‌ವೇಸ್‌ನ ವಿಮಾನ BA295 ಹಾರಾಟದ ಮಧ್ಯೆ ತುರ್ತು ಪರಿಸ್ಥಿತಿ (Emergency) ಘೋಷಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ವಿಮಾನವನ್ನು ವಾಪಸ್ ಲಂಡನ್ ಹೀಥ್ರೂ ವಿಮಾನ ನಿಲ್ದಾಣದ ಕಡೆಗೆ ತಿರುಗಿಸಲಾಗಿದೆ.
7700 ಎಂಬುದು ವಿಮಾನದ ಸಾಮಾನ್ಯ ತುರ್ತು ಪರಿಸ್ಥಿತಿ ಕೋಡ್ ಆಗಿದೆ. ಪೈಲಟ್ ಟ್ರಾನ್ಸ್‌ಪಾಂಡರ್‌ನಲ್ಲಿ 7700 ಅನ್ನು ನಮೂದಿಸಿದಾಗ, ಏರ್ ಟ್ರಾಫಿಕ್ ಕಂಟ್ರೋಲ್ ಅಂದರೆ ಎಟಿಸಿಗೆ (ATC) ವಿಮಾನವು ಗಂಭೀರ ಸಮಸ್ಯೆಯಲ್ಲಿದೆ ಮತ್ತು ಅದಕ್ಕೆ ತಕ್ಷಣದ ಸಹಾಯದ ಅಗತ್ಯವಿರಬಹುದು ಎಂದು ತಿಳಿದುಬರುತ್ತದೆ. ಇದರರ್ಥ ವಿಮಾನ ಅಪಹರಣಕ್ಕೊಳಗಾಗಿದೆ ಎಂದಲ್ಲ. ಎಂಜಿನ್ ಸಮಸ್ಯೆ, ಬೆಂಕಿ, ಕ್ಯಾಬಿನ್ ಒತ್ತಡದಲ್ಲಿ ತೊಂದರೆ, ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಯಾವುದೇ ಇತರ ಗಂಭೀರ ಸಮಸ್ಯೆ ಎಂದು ಅರ್ಥೈಸುತ್ತದೆ. ಆದ್ರೆ ಈ ವಿಮಾನ ಯಾವ ಕಾರಣಕ್ಕಾಗಿ 7700 ಅನ್ನು ಸಕ್ರಿಯಗೊಳಿಸಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ವಿಮಾನಗಳಲ್ಲಿ ಮೂರು ಪ್ರಮುಖ ತುರ್ತು ಸ್ಮಾಕ್ ಕೋಡ್‌ಗಳಿವೆ
- 7700: ಸಾಮಾನ್ಯ ತುರ್ತು ಪರಿಸ್ಥಿತಿ.
- 7600: ರೇಡಿಯೋ ಸಂವಹನ ವೈಫಲ್ಯ (ಕಮ್ಯುನಿಕೇಷನ್ ಫೇಲ್).
- 7500: ವಿಮಾನ ಅಪಹರಣ
ಸೆಪ್ಟೆಂಬರ್ 30, 2026 ರಂದು ನಡೆದ ಫ್ಲೈದುಬೈನ FZ1073 ವಿಮಾನದ ಭಯಾನಕ ಘಟನೆ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಅಂದು ಆ ವಿಮಾನದಲ್ಲಿ ಮೊದಲು 7700 ಹಾಗೂ ನಂತರ ಹೈಜಾಕ್ ಶಂಕೆಯ ‘7500’ ಕೋಡ್ ಆಕ್ಟಿವ್ ಆಗಿತ್ತು. ಸಹ-ಪೈಲಟ್ ಭಾರತೀಯ ಪೈಲಟ್ ಮೇಲೆ ಹಲ್ಲೆ ನಡೆಸಿದ್ದನು. ತೀವ್ರವಾಗಿ ಹಲ್ಲೆಗೊಳಗಾಗಿದ್ದರು ಕೂಡ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್, ಪ್ರಯಾಣಿಕರ ಜೀವವನ್ನು ಕಾಪಾಡಿದ್ದರು. ಸದ್ಯ ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಈ ರೀತಿ ಎತ್ತರ ತಗ್ಗಲು ಅಸಲಿ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.














