CLT20: ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ! ಬಿಸಿಸಿಐ ಸೇರಿ 3 ಮಂಡಳಿಗಳ ವಿರೋಧದಿಂದ ಆ ರೋಚಕ ಟೂರ್ನಿಯನ್ನು ಶಾಶ್ವತವಾಗಿ ಕೈಬಿಟ್ಟ ಐಸಿಸಿ | ಕ್ರೀಡಾ ಸುದ್ದಿ | ACTPnews

ಚಾಂಪಿಯನ್ ಲೀಗ್ ಟಿ20 ಪ್ಲಾನ್ ಕೈಬಿಟ್ಟ ಐಸಿಸಿ


Last Updated:


ಈ ಹಿಂದೆ 2009 ರಿಂದ 2014 ರವರೆಗೆ ನಡೆದಿದ್ದ ಚಾಂಪಿಯನ್ಸ್ ಲೀಗ್ ಟ್ವೆಂಟಿ20 (CLT20) ಮಾದರಿಯಲ್ಲೇ ಈ ಹೊಸಡೆ ಜಾಗತಿಕ ಟೂರ್ನಿಯನ್ನು ನಸಲು ಐಸಿಸಿ ಯೋಜಿಸಿತ್ತು. ಈ ಹಿಂದೆ ನಡೆದಿದ್ದ ಸಿಎಲ್‌ಟಿ20 ಟೂರ್ನಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್, ಬಿಗ್ ಬ್ಯಾಶ್ ಲೀಗ್ ಮತ್ತು ಪಾಕಿಸ್ತಾನ್ ಸೂಪರ್ ಲೀಗ್ ಸೇರಿದಂತೆ ವಿಶ್ವದ ವಿವಿಧ ಲೀಗ್‌ಗಳ ಅತ್ಯುತ್ತಮ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿದ್ದವು.

ಚಾಂಪಿಯನ್ ಲೀಗ್ ಟಿ20 ಪ್ಲಾನ್ ಕೈಬಿಟ್ಟ ಐಸಿಸಿ
ಚಾಂಪಿಯನ್ ಲೀಗ್ ಟಿ20 ಪ್ಲಾನ್ ಕೈಬಿಟ್ಟ ಐಸಿಸಿ

ಐಸಿಸಿ (ICC) ಜಾಗತಿಕ ಫ್ರಾಂಚೈಸಿ ಟಿ20 ಟೂರ್ನಿಯನ್ನು ಮರುಪ್ರಾರಂಭಿಸಲು ರೂಪಿಸಿದ್ದ ಯೋಜನೆಗಳನ್ನು ಕೈಬಿಟ್ಟಿದೆ. ಕ್ರಿಕೆಟ್ ಜಗತ್ತಿನ ಮೂರು ಪ್ರಮುಖ ಶಕ್ತಿಗಳಾದ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರೋಧದಿಂದಾಗಿ ಕೈಬಿಟ್ಟಿದೆ. ದಿ ಗಾರ್ಡಿಯನ್ ವರದಿಯ ಪ್ರಕಾರ, ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ಮುಂಬರುವ 2031 ರವರೆಗೆ ಇಂತಹ ಯಾವುದೇ ಬಹುಪಕ್ಷೀಯ ಅಥವಾ ಜಾಗತಿಕ ಫ್ರಾಂಚೈಸಿ ಟೂರ್ನಿಯನ್ನು ಪರಿಚಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

2009 ರಿಂದ 2014 ರವರೆಗೆ ನಡೆದಿದ್ದ CLT20

ಈ ಹಿಂದೆ 2009 ರಿಂದ 2014 ರವರೆಗೆ ನಡೆದಿದ್ದ ಚಾಂಪಿಯನ್ಸ್ ಲೀಗ್ ಟ್ವೆಂಟಿ20 (CLT20) ಮಾದರಿಯಲ್ಲೇ ಈ ಹೊಸಡೆ ಜಾಗತಿಕ ಟೂರ್ನಿಯನ್ನು ನಸಲು ಐಸಿಸಿ ಯೋಜಿಸಿತ್ತು. ಈ ಹಿಂದೆ ನಡೆದಿದ್ದ ಸಿಎಲ್‌ಟಿ20 ಟೂರ್ನಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್, ಬಿಗ್ ಬ್ಯಾಶ್ ಲೀಗ್ ಮತ್ತು ಪಾಕಿಸ್ತಾನ್ ಸೂಪರ್ ಲೀಗ್ ಸೇರಿದಂತೆ ವಿಶ್ವದ ವಿವಿಧ ಲೀಗ್‌ಗಳ ಅತ್ಯುತ್ತಮ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿದ್ದವು. ಆದರೆ ಕಡಿಮೆ ವೀಕ್ಷಕರ ಸಂಖ್ಯೆ, ಕಳಪೆ ವಾಣಿಜ್ಯ ಆದಾಯ ಮತ್ತು ಭಾರಿ ಆರ್ಥಿಕ ನಷ್ಟದ ಕಾರಣದಿಂದಾಗಿ ಆ ಟೂರ್ನಿಯನ್ನು 2014 ರ ನಂತರ ಶಾಶ್ವತವಾಗಿ ರದ್ದುಗೊಳಿಸಲಾಗಿತ್ತು.

ಲಾಭ ಮಾಡಿಕೊಳ್ಳಲು ಬಯಸಿದ್ದ ಐಸಿಸಿ  

ಆದರೆ ಪ್ರಸ್ತುತ ಕ್ರಿಕೆಟ್ ವಿಶ್ಲೇಷಕರು ಆ ಟೂರ್ನಿಯು ತನ್ನ ಸಮಯಕ್ಕಿಂತ ಮುಂಚಿತವಾಗಿಯೇ ಬಂದು ನಿಂತುಹೋಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಗತ್ತಿನಾದ್ಯಂತ ಈಗ ಟಿ20 ಲೀಗ್‌ಗಳು ಹೆಚ್ಚು ಜನಪ್ರಿಯತೆ ಗಳಿಸಿ ಭದ್ರವಾಗಿ ನೆಲೆಯೂರಿರುವುದರಿಂದ, ಈ ಆಧುನಿಕ ಯುಗವು ಆ ಟೂರ್ನಿಯನ್ನು ಮರಳಿ ತರಲು ಸೂಕ್ತ ಸಮಯವೆಂದು ಭಾವಿಸಲಾಗಿತ್ತು. ಪ್ರಪಂಚದಾದ್ಯಂತ ನಡೆಯುವ ಖಾಸಗಿ ಟಿ20 ಫ್ರಾಂಚೈಸಿ ಲೀಗ್‌ಗಳಿಂದ ಐಸಿಸಿಗೆ ಯಾವುದೇ ನೇರ ಆದಾಯ ಸಿಗುವುದಿಲ್ಲ. ಹೀಗಾಗಿ ಇಂತಹದ್ದೊಂದು ಜಾಗತಿಕ ಟೂರ್ನಿಯನ್ನು ಆಯೋಜಿಸುವ ಮೂಲಕ ಕ್ರಿಕೆಟ್ ಮೇಲಿನ ತನ್ನ ಹಿಡಿತವನ್ನು ಬಲಪಡಿಸಿಕೊಳ್ಳಲು ಮತ್ತು ತನ್ನ ಆದಾಯವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲು ಐಸಿಸಿ ಇದನ್ನು ಒಂದು ಉತ್ತಮ ಅವಕಾಶವಾಗಿ ನೋಡಿತ್ತು.

ಫಿಫಾ ಕ್ಲಬ್ ವರ್ಲ್ಡ್ ಕಪ್ ಮಾದರಿಯ ಟೂರ್ನಿಗೆ ಒಪ್ಪದ ಬಿಗ್ ತ್ರಿ

ಐಸಿಸಿ ಈ ಟೂರ್ನಿಯನ್ನು ಫುಟ್‌ಬಾಲ್ ಜಗತ್ತಿನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುವ ಫಿಫಾ ಕ್ಲಬ್ ವರ್ಲ್ಡ್ ಕಪ್ ಮಾದರಿಯಲ್ಲೇ ತನ್ನದೇ ಆದ ಕ್ರಿಕೆಟ್ ಆವೃತ್ತಿಯನ್ನಾಗಿ ಮಾಡಲು ಬಯಸಿತ್ತು. ಇದರೊಂದಿಗೆ ದ್ವಿಪಕ್ಷೀಯ ಸರಣಿಗಳ ನಡುವೆ ನಾಲ್ಕು ತಂಡಗಳು ಭಾಗವಹಿಸುವ ಚತುಷ್ಕೋನ (Quadrangular) ಟಿ20 ಟೂರ್ನಿಗಳನ್ನು ಆಯೋಜಿಸಲು ಐಸಿಸಿ ಉತ್ಸುಕವಾಗಿತ್ತು ಎಂದು ವರದಿ ಹೇಳಿದೆ. ಆದರೆ ಕ್ರಿಕೆಟ್ ಜಗತ್ತಿನ ಬಹುಪಾಲು ಆದಾಯವನ್ನು ನಿಯಂತ್ರಿಸುವ ಭಾರತ (BCCI), ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಭವಿಷ್ಯದ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಇಂತಹ ಹೆಚ್ಚುವರಿ ಪಂದ್ಯಾವಳಿಗಳಿಗೆ ಯಾವುದೇ ಅವಕಾಶವಿಲ್ಲ ಎಂದು ಕಠಿಣ ನಿಲುವು ತಳೆದಿವೆ.

ವೇಳಾಪಟ್ಟಿ ಸಮಸ್ಯೆ

ಈ ಮೂರು ಪ್ರಮುಖ ಮಂಡಳಿಗಳ ಪ್ರಕಾರ, ಸಿಎಲ್‌ಟಿ20 ಮಾದರಿಯ ಟೂರ್ನಿಯನ್ನು ಮರಳಿ ತರಬೇಕಾದರೆ ಐಸಿಸಿ ಈಗ ನಡೆಸುತ್ತಿರುವ ವಿಶ್ವಕಪ್‌ಗಳು ಮತ್ತು ಚಾಂಪಿಯನ್ಸ್ ಟ್ರೋಫಿಯಂತಹ ತನ್ನದೇ ಆದ ಇತರ ಪ್ರಮುಖ ಟೂರ್ನಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗುತ್ತದೆ. ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಂಬರುವ 2027 ರಿಂದ 2031 ರ ಚಕ್ರದ ಭವಿಷ್ಯದ ಪ್ರವಾಸಗಳ ಕಾರ್ಯಕ್ರಮವು (FTP) ಪ್ರಸ್ತುತ ಇರುವ ವೇಳಾಪಟ್ಟಿಯಂತೆಯೇ ಇರಲಿದ್ದು, ಇದರಲ್ಲಿ ಆಗಬಹುದಾದ ಏಕೈಕ ಸಂಭವನೀಯ ಬದಲಾವಣೆಯೆಂದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅನ್ನು ಮತ್ತಷ್ಟು ವಿಸ್ತರಿಸುವುದು ಮಾತ್ರವಾಗಿದೆ ಎಂಬು ಬಿಗ್ ತ್ರಿ ರಾಷ್ಟ್ರಗಳು ಅಭಿಪ್ರಾಯಪಟ್ಟಿವೆ.

ಪವರ್ ಕಳೆದುಕೊಳ್ಳಲು ಬಯಸದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್

ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಂಡಳಿಗಳು ಕ್ರಿಕೆಟ್ ಮೇಲಿನ ತಮ್ಮ ಪವರ್​ ಬಿಟ್ಟುಕೊಡಲು ಸಿದ್ಧವಿಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಹೊಸ ಮಾಧ್ಯಮ ಹಕ್ಕುಗಳನ್ನು (Media Rights) ಪರಿಚಯಿಸಿದಾಗ ವಾಣಿಜ್ಯ ಆದಾಯದ ದೊಡ್ಡ ಪಾಲನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಐಸಿಸಿ, ತನ್ನ ಆದಾಯದ ಕೊರತೆಯನ್ನು ನೀಗಿಸಲು ಹೆಚ್ಚು ಟೂರ್ನಿಗಳನ್ನು ಆಯೋಜಿಸಲು ಮುಂದಾಗಿದೆ. ಐಸಿಸಿಗೆ ಭಾರಿ ಪ್ರಮಾಣದ ಆದಾಯವನ್ನು ತಂದುಕೊಡುವ ಭಾರತೀಯ ಪ್ರಸಾರಕರು (Indian Broadcasters) ಸಹ ಇತ್ತೀಚಿನ ದಿನಗಳಲ್ಲಿ ತಮ್ಮ ಹೂಡಿಕೆಯನ್ನು ಕಡಿತಗೊಳಿಸುತ್ತಿದ್ದಾರೆ.

ಹೀಗಾಗಿ ಐಸಿಸಿ ಇತರ ಆಯಾಮಗಳಲ್ಲಿ ಹೂಡಿಕೆ ಮಾಡಲು ಮತ್ತು ಕ್ರಿಕೆಟ್ ಅನ್ನು ಜಾಗತಿಕವಾಗಿ ಬೆಳೆಸಲು ಬಯಸುತ್ತಿದೆ. ಆದರೆ ಬಿಗ್ ತ್ರೀ ಮಂಡಳಿಗಳ ನಿರಾಕರಣೆಯು ಅವರು ಪ್ರಸ್ತುತ ಹೊಂದಿರುವ ಸಂಪೂರ್ಣ ನಿಯಂತ್ರಣವನ್ನು ಬಿಟ್ಟುಕೊಡಲು ಸಿದ್ಧರಿಲ್ಲ ಎಂಬುದನ್ನು ಸೂಚಿಸುತ್ತದೆ. ಪ್ರಸ್ತುತ ಇರುವ ಯಥಾಸ್ಥಿತಿಯು (Status quo) ಈ ಮೂರು ದೇಶಗಳಿಗೆ ತಮ್ಮದೇ ಆದ ಟಿ20 ಲೀಗ್‌ಗಳ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಕ್ರಿಕೆಟ್ ಕ್ರೀಡೆಯ ಭವಿಷ್ಯದ ದಿಕ್ಕನ್ನು ತಾವೇ ನಿರ್ಧರಿಸುವ ಸಂಪೂರ್ಣ ಶಕ್ತಿಯನ್ನು ಉಳಿಸಿಕೊಳ್ಳುವುದಕ್ಕೆ ಬಯಸುತ್ತಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed