Yash-Ramayana: ‘ರಾಮಾಯಣ’ ಭಾರತದ ಕನಸು ಎಂದ ಯಶ್; ಭಾರತ್ ಮಂಟಪ್‌ನಲ್ಲಿ ರಾಕಿಂಗ್ ಸ್ಟಾರ್ ಹವಾ! | | ACTPnews

ರಾಮಾಯಣ ಕಾರ್ಯಕ್ರಮದಲ್ಲಿ ಯಶ್


Last Updated:

Yash-Ramayana: ನವದೆಹಲಿಯ ಭಾರತ್ ಮಂಟಪ್‌ನಲ್ಲಿಂದು ರಾಮಾಯಣ ಚಿತ್ರದ ಪ್ರಥಮ ಸಂಕಲ್ಪ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ರಾಮಾಯಣ ಕಾರ್ಯಕ್ರಮದಲ್ಲಿ ಯಶ್
ರಾಮಾಯಣ ಕಾರ್ಯಕ್ರಮದಲ್ಲಿ ಯಶ್

ರಾಮಾಯಣ (Ramayana) ಸಿನಿಮಾವನ್ನು ಭಾರತದ ಕನಸು ಅಂತ ರಾಕಿಂಗ್ ಸ್ಟಾರ್ ಯಶ್ (Rocking star Yash) ಬಣ್ಣಿಸಿದ್ದಾರೆ. ನವದೆಹಲಿಯ ಭಾರತ್ ಮಂಟಪ್‌ನಲ್ಲಿಂದು (Bharat Mantap) ರಾಮಾಯಣ ಚಿತ್ರದ ಪ್ರಥಮ ಸಂಕಲ್ಪ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ಅರುಣ್ ಗೋವಿಲ್, ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಸೇರಿದಂತೆ ತಂಡದ ಸದಸ್ಯರು ಉಪಸ್ಥಿತರಿದ್ದರು.

ರಾಮಾಯಣ ಅಂದರೆ ಭಾರತದ ಕನಸು

ರಾಕಿಂಗ್ ಸ್ಟಾರ್ ಯಶ್ ರಾಮಾಯಣವನ್ನು ‘ಭಾರತದ ಕನಸು’ ಎಂದು ಕರೆದಿದ್ದಾರೆ. ರಣಬೀರ್ ಕಪೂರ್ ಲಾರ್ಡ್ ರಾಮನಿಗೆ ‘ಸಂಪೂರ್ಣ ಸಮರ್ಪಣೆ’ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ಮಾತನಾಡಿದ ಯಶ್, ರಣಬೀರ್ ಕಪೂರ್ ಅವರ ಶ್ರೀರಾಮನ ಪಾತ್ರವನ್ನು ಬಹಳ ಶ್ಲಾಘಿಸಿದ್ದಾರೆ. ಪ್ರೇಕ್ಷಕರು ರಣಬೀರ್ ಸೃಷ್ಟಿಸಿದ ಮ್ಯಾಜಿಕ್ ಅನ್ನು ನೋಡುತ್ತಾರೆ ಎಂದು ಹೇಳಿದ್ದಾರೆ.

ರಾಮನ ಕಥೆಯನ್ನು ಪ್ರಪಂಚಕ್ಕೆ ತಲುಪಿಸುವುದು

ನಾವೆಲ್ಲರೂ ಒಂದೇ ದೃಷ್ಟಿಕೋನ ಮತ್ತು ಒಂದೇ ನಂಬಿಕೆಯೊಂದಿಗೆ ಒಟ್ಟಾಗಿದ್ದೇವೆ: ಈ ಕಥೆಯನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವುದು. ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಆಸಕ್ತಿಗಳನ್ನು ಬದಿಗಿಟ್ಟಿದ್ದಾರೆ ಅಂತ ಯಶ್ ಹೇಳಿದ್ರು. ನಮ್ಮಲ್ಲಿ ಒಂದೇ ಸಾಮೂಹಿಕ ಆಸಕ್ತಿ ಇದೆ, ಅದೇನೆಂದರೆ ಪ್ರಭು ಶ್ರೀರಾಮನ ಕಥೆಯನ್ನು ವಿಶ್ವದಾದ್ಯಂತ ಪ್ರೇಕ್ಷಕರಿಗೆ ತಲುಪಿಸುವುದು ಮತ್ತು ನಮ್ಮ ದೇಶದಲ್ಲಿ ಅವರನ್ನು ಸಂಭ್ರಮಿಸಿವುದು ಅಂತ ಯಶ್ ಹೇಳಿದ್ದಾರೆ.

ನಮಿತ್ ಮಲ್ಹೋತ್ರಗೆ ಯಶ್ ಕೃತಜ್ಞತೆ

ಈ ಅದ್ಭುತ ಯೋಜನೆಯ ಭಾಗವಾಗಿರುವುದು ನನಗೆ ನಿಜವಾಗಿಯೂ ಸಂತೋಷವಾಗಿದೆ. ಇದನ್ನು ಈ ಹಂತಕ್ಕೆ ತಂದ ಕ್ರೆಡಿಟ್ ನಮಿತ್ ಮಲ್ಹೋತ್ರಾ ಅವರಿಗೆ ಸೇರಿದೆ. ಅವರು ನನಗೆ ಇಂತಹ ಮುಖ್ಯ ಪಾತ್ರವನ್ನು ನೀಡಿದ್ದಕ್ಕಾಗಿ ಕೃತಜ್ಞತೆ ಅರ್ಪಿಸುತ್ತೇನೆ ಅಂತ ಯಶ್ ಹೇಳಿದ್ರು. ಇನ್ನು ನಿತೇಶ್ ಸರ್, ನನ್ನನ್ನು ಮಾರ್ಗದರ್ಶನ ಮಾಡಿದ್ದಕ್ಕಾಗಿ, ಪಾತ್ರಕ್ಕೆ ಏನು ಬೇಕು ಎಂದು ಅರ್ಥಮಾಡಿಕೊಂಡು, ನನ್ನ ಪ್ರಶ್ನೆಗಳಿಗೆ ಉತ್ತರಿಸಿ ನನಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು ಅಂತ ಯಶ್ ಹೇಳಿದ್ರು.

ರಣಬೀರ್ ಬಗ್ಗೆ ಯಶ್ ಗುಣಗಾನ

ಈ ಸಿನಿಮಾದಲ್ಲಿ ರಣಬೀರ್ ಅದ್ಭುತವಾಗಿ ನಟಿಸಿದ್ದಾರೆ. ಇಡೀ ಭಾರತವೇ ಅರ್ಥಮಾಡಿಕೊಳ್ಳುತ್ತದೆ ಎಂದು ನನಗೆ ತೋರುತ್ತದೆ. ಅವರು ಈ ಪಾತ್ರಕ್ಕೆ ಎಷ್ಟು ಸಮರ್ಪಣೆ ಮಾಡಿಕೊಂಡಿದ್ದಾರೆ ಎಂಬುದನ್ನು ಮತ್ತು ಅವರು ಸೃಷ್ಟಿಸಿದ ಮ್ಯಾಜಿಕ್ ಅನ್ನು ಜನರು ನೋಡುತ್ತಾರೆ ಅಂತ ಯಶ್ ಭರವಸೆ ವ್ಯಕ್ತಪಡಿಸಿದ್ರು.

ಸಾಯಿ ಪಲ್ಲವಿ ಕಣ್ಣಿಗೆ ಯಶ್ ಫಿದಾ

ಯಶ್ ಅವರು ಸಾಯಿ ಪಲ್ಲವಿ ಅವರನ್ನು “ಫ್ಲಾವ್‌ಲೆಸ್ ಆಕ್ಟರ್” ಎಂದು ಹೊಗಳಿದ್ರು. ಅವರ ಕಣ್ಣುಗಳೇ ಸೀತಾ ಪಾತ್ರವನ್ನು ಸಂಪೂರ್ಣವಾಗಿ ತೋರಿಸುತ್ತವೆ ಎಂದು ಹೇಳಿದರು. ಶೋಭನಾ ಅವರ ಗ್ರೇಸ್ ಅನ್ನು ಪ್ರಶಂಸಿಸಿದರು. ಲಕ್ಷ್ಮಣ ಪಾತ್ರದ ನಟರು ಚಿತ್ರದ “ಸರ್ಪ್ರೈಸ್ ಪ್ಯಾಕೇಜ್” ಆಗುತ್ತಾರೆ ಎಂದು ಯಶ್ ಭವಿಷ್ಯ ನುಡಿದರು.

ಭಾರತ್ ಮಂಟಪ್‌ನಲ್ಲಿ ಅದ್ಧೂರಿ ಕಾರ್ಯಕ್ರಮ

ದೆಹಲಿಯ ಬಾರತ್ ಮಂಡಪಂನಲ್ಲಿ ನಡೆದ ರಾಮಾಯಣ ಚಿತ್ರದ ಪ್ರಥಮ ಸಂಕಲ್ಪ ಕಾರ್ಯಕ್ರಮದಲ್ಲಿ ಯಶ್ ಮಾತನಾಡುತ್ತಾ, ವೈಯಕ್ತಿಕ ಸ್ಟಾರ್‌ಡಮ್‌ಗಿಂತ ಚಿತ್ರದ ಹಿಂದಿರುವ ಸಾಮೂಹಿಕ ಗುರಿ ಬಗ್ಗೆ ಹೇಳಿದರು. ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ಅರುಣ್ ಗೋವಿಲ್, ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಸೇರಿದಂತೆ ತಂಡದ ಸದಸ್ಯರು ಉಪಸ್ಥಿತರಿದ್ದರು.

ಇನ್ನು ಈ ಚಿತ್ರವು ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬರಲಿದ್ದು, ರಾವಣನಾಗಿ ಯಶ್ ಘರ್ಜಿಸಲಿದ್ದಾರೆ. ಇನ್ನು ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಲಿದ್ದಾರೆ. ರಾಮಾಯಣ ಮೊದಲ ಭಾಗ ದೀಪಾವಳಿ 2026ಕ್ಕೆ ಬಿಡುಗಡೆಯಾಗಲಿದೆ, ಎರಡನೇ ಭಾಗ 2027ರಲ್ಲಿ ಬರಲಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed