Upendra: ನಾನು ಒಂಟಿ ಆಗಿ ಇರೋಕೆ ಆಗಲ್ಲ; ಪ್ಯಾರಿಸ್‌ಗೆ ಹೋದಾಗ ಏನ್ ಆಯ್ತು ಗೊತ್ತಾ? ಉಪ್ಪಿ ರಿವೀಲ್ ಮಾಡಿದ ಸಂಗತಿ ಏನು? | | ACTPnews

ನಾನು ಒಂಟಿ ಆಗಿ ಇರೋಕೆ ಆಗಲ್ಲ; ಪ್ಯಾರಿಸ್‌ಗೆ ಹೋದಾಗ ಏನ್ ಆಯ್ತು ಗೊತ್ತಾ?


Last Updated:

ರಿಯಲ್ ಸ್ಟಾರ್ ಉಪೇಂದ್ರ ಅವರ ಸೋಲೋ ಟ್ರಿಪ್ ಕತೆ ಇಂಟ್ರಸ್ಟಿಂಗ್ ಆಗಿದೆ. ಒಬ್ಬರೇ ಹೋದಾಗ ಏನೆಲ್ಲ ಆಯಿತು ಅಂತಲೂ ಹೇಳಿಕೊಂಡಿದ್ದಾರೆ. ಐಫಿಲ್ ಟವರ್ ಮುಂದೆ ನಿಂತಾಗ ಏನೆಲ್ಲ ಆಯಿತು ಅನ್ನೋದನ್ನು ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ನಾನು ಒಂಟಿ ಆಗಿ ಇರೋಕೆ ಆಗಲ್ಲ; ಪ್ಯಾರಿಸ್‌ಗೆ ಹೋದಾಗ ಏನ್ ಆಯ್ತು ಗೊತ್ತಾ?
ನಾನು ಒಂಟಿ ಆಗಿ ಇರೋಕೆ ಆಗಲ್ಲ; ಪ್ಯಾರಿಸ್‌ಗೆ ಹೋದಾಗ ಏನ್ ಆಯ್ತು ಗೊತ್ತಾ?

ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರಿಗೆ ಒಮ್ಮೆ ಒಂದು ಐಡಿಯಾ ಬಂತು. ಅದನ್ನ ಟ್ರೈ ಕೂಡ ಮಾಡಿದರು. ಸ್ಲೋವೇನಿಯಾಗೆ (Slovenia) ಹೋಗಿದ್ದರು. ಅಲ್ಲಿಂದ ಇವರು ಪ್ಯಾರಿಸ್‌ಗೆ (Paris) ಹೋದರು. ಆಗ ಇವರಿಗೆ ಸಾಕಷ್ಟು ಅನುಭವ ಆಯಿತು. ಆದರೆ, ಇದರಿಂದ ಇವರಿಗೆ ಒಂದು ಅರ್ಥ ಆಯಿತು. ಅದೇನು ಅನ್ನೋದನ್ನ ಸ್ವತಃ ಉಪೇಂದ್ರ (Upendra) ಹೇಳಿಕೊಂಡಿದ್ದಾರೆ. ಅದು ನಿಜಕ್ಕೂ ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.

ಡಿಫರಂಟ್ ಆಗಿ ಏನಾದ್ರೂ ಮಾಡ್ಬೇಕು

ಉಪೇಂದ್ರ ಅವರು ಡಿಫರಂಟ್ ಆಗಿಯೇ ಯೋಚನೆ ಮಾಡ್ತಾರೆ. ಸಿನಿಮಾ ಕೂಡ ಹಾಗೆ ಮಾಡ್ತಾರೆ. A ಚಿತ್ರದ ಸಮಯದಲ್ಲಿ ಒಂದು ಕಿಚ್ಚು ಇತ್ತು. ವಿಭಿನ್ನವಾಗಿ ಏನಾದರೂ ಹೇಳ್ಬೇಕು ಅನ್ನುವ ಐಡಿಯಾ ಇತ್ತು.
real star Upendra Paris solo trip interesting facts

ಸೋಲೋ ಟ್ರಿಪ್ ಪಾಠ

(ಚಿತ್ರ ಕೃಪೆ: ಉಪೇಂದ್ರ ಇನ್‌ಸ್ಟಾಗ್ರಾಮ್)

ಯಾರೂ ಮಾಡದೇ ಇರೋ ರೀತಿನೇ ನಾನು ಹೊಸದಾಗಿಯೇ ಹೇಳ್ಬೇಕು ಅಂತ ಇತ್ತು. ಆದರೆ, ನನ್ನ ಈ ಮಾತುಗಳನ್ನ ಕೇಳಿ ಅನೇಕರು ಏನ್ ಹೊಸದನ್ನ ಮಾಡ್ತೀರಾ? ಅದೇ ಕ್ಯಾಮರಾ, ಅದೇ ದೃಶ್ಯ ಅಂತಲೇ ಹೇಳಿದ್ದರು. ಇದರಿಂದ ಉಪ್ಪಿ ಅವರಿಗೆ ಸಿಟ್ಟು ಕೂಡ ಬಂತು ನೋಡಿ.

ಉಲ್ಟಾ ತೋರಿಸಿದೆ ನೋಡಿ

A ಚಿತ್ರದ ಮೊದಲ ದೃಶ್ಯವನ್ನ ಉಲ್ಟಾ ತೋರಿಸಿದೆ. ಚಿತ್ರ ವಿಚಿತ್ರವಾಗಿಯೇ ದೃಶ್ಯ ಹಾಕಿದೆ. ಆಗ ಬಂದವರು ಥೀಯೇಟರ್‌ನಿಂದ ಹೇಗೆ ಎದ್ದು ಹೋಗ್ತಾರೆ. ಮುಂದೆ ಚಿತ್ರ ನೋಡ್ತಾರೆ ಅಂತಲೇ A ಚಿತ್ರವನ್ನ ಹಾಗೆ ತೋರಿಸಿರೋದು ಅಂತಲೇ ಉಪೇಂದ್ರ ಹೇಳಿದ್ದಾರೆ.

ಆದರೆ, ಇದಕ್ಕೆ ಲಾಜಿಕ್ ಎಲ್ಲಿ ಅನ್ನೋರಿಗೆ ಈ ಚಿತ್ರದ ವಿಚಿತ್ರ ದೃಶ್ಯಗಳಿಗೆ ಕೊನೆಗೆ ಎಂಡ್‌ ಕಾರ್ಡ್ ಹಾಕ್ತಿನಿ. ಅಲ್ಲಿಂದ ಕಥೆ ಶುರು ಮಾಡ್ತೀನಿ ಅಂತಲೂ ಹೇಳಿದೆ. ಹೀಗೆ ವಿಭಿನ್ನವಾಗಿಯೇ ಯೋಚನೆ ಮಾಡಿ A ಚಿತ್ರ ಮಾಡಿದೆ ಅಂತಲೂ ಉಪೇಂದ್ರ ವಿವರಿಸಿದ್ದಾರೆ.

ಒಂಟಿ ಆಗಿ ಪ್ಯಾರಿಸ್‌ಗೆ ಹೋದೆ

ನನಗೆ ಒಂಟಿ ಆಗಿಯೇ ಟ್ರಿಪ್ ಮಾಡ್ಬೇಕು ಅಂತ ಅನಿಸಿತು. ಸರಿ ಹೋದರಾಯಿತು ಅಂತ ಪ್ಲಾನ್ ಮಾಡಿದೆ. ಸ್ಲೋವೇನಿಯಾಗೆ ಹೋಗಿದ್ದೆ. ಅಲ್ಲಿಂದಲೇ ಪ್ಯಾರಿಸ್‌ಗೆ ಹೋದೆ.

real star Upendra Paris solo trip interesting facts

ಒಂಟಿ ಆಗಿರೋದು ಅಷ್ಟು ಸುಲಭವಲ್ಲ

(ಚಿತ್ರ ಕೃಪೆ: ಉಪೇಂದ್ರ ಇನ್‌ಸ್ಟಾಗ್ರಾಮ್)

ಆದರೆ, ನಾನು ಸದಾ ಜನರ ನಡುವೆ ಇದ್ದವನು. ಅದು ಅಭ್ಯಾಸ ಆಗಿದೆ. ಆದರೆ, ಪ್ಯಾರಿಸ್‌ಗೆ ಹೋದಾಗ ಒಂಟಿ ಆಗಿ ಬಿಟ್ಟೆ. ಐಫಿಲ್ ಟವರ್ ಮುಂದೆನಿಂತಿದ್ದೇನೆ. ಆದರೆ, ಚೆನ್ನಾಗಿದೆ ಚೆನ್ನಾಗಿಲ್ಲ ಅಂತ ಹೇಳೋಕೂ ಜೊತೆಗೆ ಯಾರೂ ಇಲ್ಲ. ಆ ರೀತಿಯ ಸ್ಥಿತಿಯಲ್ಲಿಯೇ ನಾನು ಇದ್ದೆ ನೋಡಿ.

ಸೋಲೋ ಟ್ರಿಪ್ ಪಾಠ

ಆದರೆ, ಈ ಒಂದು ಸೋಲೋ ಟ್ರಿಪ್ ಅನುಭವ ಕೆಟ್ಟದಾಗಿಯೇ ಇತ್ತು. ಒಂಟಿ ಆಗಿ ಹೋಗಿ ಬೇಡ್ವ ಬೇಡ ಅನಿಸಿ ಬಿಡ್ತು. ಒಂಟಿ ಆಗಿ ಇರೋಕೆ ನನಗೆ ಆಗೋದಿಲ್ಲ. ಇದು ನನಗೆ ಸಾಧ್ಯ ಆಗೊದೇ ಇಲ್ಲ.

ಒಂಟಿ ಆಗಿರೋದು ಅಷ್ಟು ಸುಲಭವಲ್ಲ

ನನಗೆ ಒಂಟಿ ಆಗಿ ಇರೋಕೆ ಆಗೋದಿಲ್ಲ. ಆದರೆ, ಒಂಟಿಯಾಗಿ ಇರೋದು ಅತಿ ದೊಡ್ಡ ಸಾಧನೆನೇ ಆಗಿದೆ. ರಜನಿಕಾಂತ್ ಅವರು ಇದನ್ನ ಸಾಧಿಸಿದ್ದಾರೆ.ಇವರು ಒಂಟಿಯಾಗಿಯೇ ಇರ್ತಾರೆ.

ಇವರ ರೀತಿ ಇರೋಕೆ ಆಗೋದಿಲ್ಲ. ಅಂತಹ ರಜನಿಕಾಂತ್ ಅವರು ಒಂದು ಮಾತು ಹೇಳ್ತಾ ಇದ್ದರು. ಶೋಧನೆ ಇಲ್ಲದೆ ಸಾಧನೆ ಇಲ್ಲ ಅಂತಲೇ ಹೇಳ್ತಾ ಇದ್ದರು. ಆ ಮಾತು ನಿಜ ಅನ್ನೋದನ್ನು ಉಪೇಂದ್ರ ಇದೇ ಪಾಡ್‌ಕಾಸ್ಟ್ ಅಲ್ಲಿಯೇ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed