Team India: ಗಂಭೀರ್ ಆಪ್ತ ಮಿತ್ರನಿಂದ ಮಹತ್ವದ ನಿರ್ಧಾರ! ಇಂಗ್ಲೆಂಡ್ ಪ್ರವಾಸದ ಬಳಿಕ ಟೀಮ್ ಇಂಡಿಯಾದಿಂದ ಔಟ್? | ಕ್ರೀಡಾ ಸುದ್ದಿ | ACTPnews

ಗೌತಮ್ ಗಂಭೀರ್


Last Updated:

ಟೀಮ್ ಇಂಡಿಯಾ ಪ್ರಸ್ತುತ ಕಠಿಣ ಹಂತವನ್ನು ಎದುರಿಸುತ್ತಿದೆ. ಇದರಿಂದಾಗಿ ಆಟಗಾರರು ಮತ್ತು ಕೋಚಿಂಗ್ ಸ್ಟಾಫ್ ಇಬ್ಬರೂ ಒತ್ತಡದಲ್ಲಿದ್ದಾರೆ. ಒಂದು ಅಥವಾ ಎರಡು ಸರಣಿಗಳನ್ನು ಭಾರತ ಸೋತರೆ ಈ ಒತ್ತಡ ಇನ್ನಷ್ಟು ಹೆಚ್ಚಾಗಬಹುದು.

ಗೌತಮ್ ಗಂಭೀರ್
ಗೌತಮ್ ಗಂಭೀರ್

ಭಾರತ (India) ಕ್ರಿಕೆಟ್ (Cricket) ತಂಡ ಈಗ ಬದಲಾವಣೆಗಳ ಸಮಯವನ್ನು ಎದುರಿಸುತ್ತಿದೆ. ಆಟಗಾರರಲ್ಲಿ ಆಗುತ್ತಿರುವ ಬದಲಾವಣೆಗಳು ಈಗ ಕೋಚಿಂಗ್ (Coaching) ಸ್ಟಾಫ್​ಗೂ ತಲುಪಿವೆ. ಇದರಿಂದ ಗೌತಮ್ ಗಂಭೀರ್ (Gautam Gambhir) ನೇತೃತ್ವದ ಭಾರತ ತಂಡದಲ್ಲಿ ಬದಲಾವಣೆಗಳ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ. ಇದು ಶೀಘ್ರದಲ್ಲೇ ಭಾರತ ತಂಡದ ಮ್ಯಾನೇಜ್ಮೆಂಟ್ ಮೇಲೆ ಪರಿಣಾಮ ಬೀರಬಹುದು. ಇಂಗ್ಲೆಂಡ್ (England) ಪ್ರವಾಸ ಮುಗಿದ ನಂತರ ಟೀಮ್ ಇಂಡಿಯಾದ ಮ್ಯಾನೇಜೆಂಟ್​​ನಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಆಪ್ತ ಸಹಾಯಕರಲ್ಲಿ ಒಬ್ಬರು ಟೀಮ್ ಇಂಡಿಯಾವನ್ನು ಬಿಡಲು ನಿರ್ಧರಿಸಿದ್ದಾರೆ.

ಕ್ರಿಕ್‌ಬಜ್‌ನ ಹೊಸ ವರದಿಯ ಪ್ರಕಾರ, ಟೀಮ್ ಇಂಡಿಯಾದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ತಂಡವನ್ನು ಬಿಡಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್ ಪ್ರವಾಸ ಮುಗಿದ ನಂತರ ತಂಡ ಬಿಡುವುದಾಗಿ ಅವರು ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಬಿಸಿಸಿಐಗೆ ತಿಳಿಸಿದ್ದಾರೆ. ಆದರೆ ಬಿಸಿಸಿಐ ಮತ್ತು ಗಂಭೀರ್ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ರಯಾನ್ ಟೆನ್ ಡೋಸ್ಚೇಟ್ ಹಿಂದೆ ಕೆಕೆಆರ್‌ನಲ್ಲಿ ಗಂಭೀರ್ ಅವರೊಂದಿಗೆ ಕೆಲಸ ಮಾಡಿದ್ದರು. 2024ರಲ್ಲಿ ಗಂಭೀರ್ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಬಂದಾಗ ಅವರನ್ನು ತಂಡಕ್ಕೆ ಸೇರಿಸಿಕೊಂಡರು. ಅಂದಿನಿಂದ ಅವರು ತಂಡದೊಂದಿಗೆ ಕೆಲಸ ಮಾಡುತ್ತಿದ್ದರು. ಆದರೆ ಗಂಭೀರ್ ನೇತೃತ್ವದ ಭಾರತ ತಂಡದಲ್ಲಿ ಈಗ ನಿರಂತರ ಬದಲಾವಣೆಗಳಾಗುತ್ತಿವೆ. ಇದಕ್ಕೂ ಮುಂಚೆ ಅಭಿಷೇಕ್ ನಾಯರ್ ಕೂಡ ತಂಡವನ್ನು ಬಿಟ್ಟಿದ್ದರು.

ಗಂಭೀರ್ ಕೋಚಿಂಗ್ ಸ್ಟಾಫ್ ಬದಲಾವಣೆ? 

ರಯಾನ್ ಟೆನ್ ಡೋಸ್ಚೇಟ್ ಜೊತೆಗೆ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಕೂಡ ತಂಡ ಬಿಡುವ ವದಂತಿಗಳಿವೆ. ಆದರೆ ಈ ವಿಷಯದ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಇತ್ತೀಚೆಗೆ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಕೂಡ ತಂಡವನ್ನು ತೊರೆಯುವ ಸುದ್ದಿ ಹರಡಿತ್ತು.

ಈ ಪರಿಸ್ಥಿತಿಯಲ್ಲಿ ಗೌತಮ್ ಗಂಭೀರ್ ಅವರ ಎಲ್ಲಾ ಕೋಚಿಂಗ್ ಸ್ಟಾಫ್ ಅನ್ನು ಶೀಘ್ರದಲ್ಲೇ ಬದಲಾಯಿಸಬಹುದು ಎಂದು ಕಾಣುತ್ತಿದೆ. ಬಿಸಿಸಿಐ ಒತ್ತಡದಿಂದಾಗಿ 2026ರಲ್ಲಿ ಬ್ಯಾಟಿಂಗ್ ಕೋಚ್ ಆಗಿ ಸೀತಾಂಶು ಕೊಟಕ್ ಮತ್ತು ಸ್ಪಿನ್ ಬೌಲಿಂಗ್ ಕೋಚ್ ಆಗಿ ಸಾಯಿರಾಜ್ ಬಹುತುಲೆ ಅವರನ್ನು ಸೇರಿಸಲಾಗಿದೆ. ಈ ಇಬ್ಬರೂ ಹಿಂದೆ ಗಂಭೀರ್ ಅವರ ಮುಖ್ಯ ತಂಡದಲ್ಲಿ ಇರಲಿಲ್ಲ.

ಈ ನಿರ್ಧಾರ ತೆಗೆದುಕೊಂಡಿದ್ದೇಕೆ?

ರಯಾನ್ ಟೆನ್ ಡೋಸ್ಚೇಟ್ ಅವರಿಗೆ ತಮ್ಮ ಕೆಲಸದ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಕುಟುಂಬ ಕಾರಣಗಳಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಹೆಂಡತಿ ಮತ್ತು ಮೂರು ಮಕ್ಕಳು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಅವರು ಬಯಸುತ್ತಾರೆ. ಈ ಕಾರಣದಿಂದ ಅವರು ತಂಡವನ್ನು ಬಿಡಲಿದ್ದಾರೆ ಎಂದು ತಿಳಿದುಬಂದಿದೆ. ತಂಡದ ಹೆಡ್ ಕೋಚ್ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ ಅವರು ಉಳಿಯುವ ಸಾಧ್ಯತೆ ಬಹಳ ಕಡಿಮೆಯಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed