ಸಂಚಿತ್ ಸಂಜೀವ್ ಬಗ್ಗೆ ಶೆಟ್ರು ಒಳ್ಳೆ ಮಾತುಗಳನ್ನೆ ಬರೆದಿದ್ದಾರೆ. ಸಂಚಿತ್ ಸಂಜೀವ್ ಚೆನ್ನಾಗಿಯೇ ಕಾಣಿಸುತ್ತಾರೆ. ಅಷ್ಟೆ ಉತ್ತಮವಾಗಿಯೇ ಅಭಿನಯಿಸಿದ್ದಾರೆ.
ಸಂಚಿತ್ ಬಗ್ಗೆ ಶೆಟ್ರು ಹೇಳಿದ್ದೇನು
(ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್)
ಮ್ಯಾಂಗೋ ಪಚ್ಚ ಚಿತ್ರದ ಟ್ರೈಲರ್ ಇವರಿಗೆ ಬಹುವಾಗಿಯೇ ಇಷ್ಟ ಆಗಿದೆ. ಅದನ್ನ ಅಷ್ಟೆ ಚೆನ್ನಾಗೆ ಹೇಳಿಕೊಂಡಿದ್ದಾರೆ. ಮ್ಯಾಂಗೋ ಪಚ್ಚ ಚಿತ್ರದ ಟ್ರೈಲರ್ ಫೆನ್ಟಾಸ್ಟಿಕ್ ಆಗಿಯೇ ಇದೆ ಅಂತಲೇ ಹೇಳಿದ್ದಾರೆ.
ಇಷ್ಟು ಇಷ್ಟ ಆದ ಟ್ರೈಲರ್ ಮತ್ತು ಸಂಚಿತ್ ಸಂಜೀವ್ ಬಗ್ಗೆ ಮಾತ್ರ ರಿಷಬ್ ಶೆಟ್ರ ಹೇಳಿಲ್ಲ. ಬದಲಾಗಿ ಚಿತ್ರದ ಡೈರೆಕ್ಟರ್ ವಿವೇಕ್, ಚಿತ್ರ ನಿರ್ಮಾಣ ಸಂಸ್ಥೆ ಸುಪ್ರಿಯಾನ್ವಿ, ಕೆಆರ್ಜಿ ಹಾಗೂ ಪ್ರಿಯಾ ಸುದೀಪ್ ಅವರಿಗೂ ವಿಶ್ ಮಾಡಿದ್ದಾರೆ. ಇಡೀ ತಂಡಕ್ಕೂ ಶುಭವಾಗಲಿ ಅಂತಲೂ ವಿಶ್ ಮಾಡಿದ್ದಾರೆ.
ರಿಷಬ್ ಶೆಟ್ರು ಈ ಒಂದು ಅಭಿಪ್ರಾಯವನ್ನ ಇನ್ಸ್ಟಾಗ್ರಾಮ್ ಅಲ್ಲೂ ಹಂಚಿಕೊಂಡಿದ್ದಾರೆ. ಎಕ್ಸ್ ಖಾತೆಯ ತಮ್ಮ ಪೇಜ್ ಅಲ್ಲೂ ಹಂಚಿಕೊಂಡಿದ್ದಾರೆ. ಈ ಮೂಲಕ ನವ ನಟ ಸಂಚಿತ್ ಸಂಜೀವ್ ಅವರಿಗೆ ಗುಡ್ ಲಕ್ ಹೇಳಿದ್ದಾರೆ.
ಅಂದ್ಹಾಗೆ ಈ ಮ್ಯಾಂಗೋ ಪಚ್ಚ ಚಿತ್ರದ ಜೂನ್-5 ರಂದು ರಿಲೀಸ್ ಆಗುತ್ತಿದೆ. ಸುಪ್ರಿಯಾನ್ವಿ ಹಾಗೂ ಕೆಆರ್ಜಿ ಸಂಸ್ಥೆ ಈ ಚಿತ್ರವನ್ನ ಜಂಟಿ ಆಗಿಯೇ ನಿರ್ಮಿಸಿವೆ.
ಸಂಚಿತ್ ಕಂಡು ಅಮೆಜಿಂಗ್ ಎಂದ ರಿಷಬ್ ಶೆಟ್ಟಿ
(ಚಿತ್ರ ಕೃಪೆ: ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್)
ಮ್ಯಾಂಗೋ ಪಚ್ಚ ಚಿತ್ರದ ಡೈರೆಕ್ಟರ್ ವಿವೇಕ್ ಅವರಿಗೆ ಇದು ಮೊದಲ ಚಿತ್ರವೇ ಆಗಿದೆ. ಮ್ಯಾಂಗೋ ಪಚ್ಚ ಮೂಲಕವೇ ಸ್ವತಂತ್ರ ನಿರ್ದೇಶಕರೂ ಆಗಿದ್ದಾರೆ.
ಈ ಚಿತ್ರಕ್ಕೆ ಸ್ವಾಮಿ ಹಾಗೂ ಶೇಖರ್ ಚಂದ್ರ ಕ್ಯಾಮರಾವರ್ಕ್ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ. ಕಾಜಲ್ ಕುಂದರ್, ಹರಿಣಿ, ಮ್ಯಾಕ್ಸ್ ಮಂಜು , ಮಯೂರ್ ಪಟೇಲ್, ವಿಜಯ್ ರಾಘವೇಂದ್ರ ಅಳಿಯ ಜೈ ಸೇರಿದಂತೆ ಇನ್ನು ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಮ್ಯಾಂಗೋ ಪಚ್ಚ ಚಿತ್ರದಲ್ಲಿ ಭಾವನಾ ರಾಮಣ್ಣ ಅಭಿನಯಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರವನ್ನ ಮಾಡಿದ್ದಾರೆ. ಚಿತ್ರದ ಕಥೆ ಮೈಸೂರಿನ ಹುಡುಗ ಮ್ಯಾಂಗೋ ಪಚ್ಚನ ಬಗ್ಗೇನೆ ಇದೆ.
2002 ರಲ್ಲಿ ಮೈಸೂರು ಹೇಗೆ ಇತ್ತು. ಅದೆಷ್ಟು ಬದಲಾಗುತ್ತಿತ್ತು. ಗಾಂಜಾ ದಂಧೆ ಇಲ್ಲಿ ಯಾವ ಹಂತಕ್ಕೆ ಆವರಿಸಿತ್ತು ಅನ್ನೋದು ಕೂಡ ಇದರಲ್ಲಿ ತೋರಲಾಗಿದೆ.
ಇದರೊಟ್ಟಿಗೆ ಮ್ಯಾಂಗೋ ಪಚ್ಚ ಕತೆಯನ್ನ ಅಷ್ಟೆ ಪರಿಣಾಮಕಾರಿ ತೋರಿಸಿದಂತೆ ಇದೆ. ಪ್ರಶಾಂತ್ ಹೇಗೆ ಪಚ್ಚ ಆದ, ಆ ಮೇಲೆ ಇದೇ ಪ್ರಶಾಂತ್ ಮುಂದೆ ಅದು ಹೇಗೆಲ್ಲ ಮ್ಯಾಂಗೋ ಪಚ್ಚ ಆದ ಅನ್ನೋದು ಚಿತ್ರದಲ್ಲಿದೆ. ಅದರ ಝಲಕ್ ಮಾತ್ರ ಸದ್ಯದ ಟ್ರೈಲರ್ ಅಲ್ಲಿ ರಿವೀಲ್ ಆಗಿದೆ ಅಂತ ಹೇಳಬಹುದು.












