Vijay: ವಿಜಯ್ ಸರ್ಕಾರಕ್ಕೆ ಮಧ್ಯಂತರ ರಿಲೀಫ್, ಗೋಹತ್ಯೆ ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ | Supreme Court Stays Madras High court s Ban On Cow | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

Vijay: ವಿಜಯ್ ಸರ್ಕಾರಕ್ಕೆ ಮಧ್ಯಂತರ ರಿಲೀಫ್, ಗೋಹತ್ಯೆ ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ | Supreme Court Stays Madras High court s Ban On Cow | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ


ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಸ್ಪೆಷಲ್ ಲೀವ್ ಪಿಟಿಷನ್​ (ಎಸ್‌ಎಲ್‌ಪಿ)ಗೆ ನೋಟಿಸ್ ಜಾರಿ ಮಾಡುವಾಗ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠವು ಮಧ್ಯಂತರ ಆದೇಶವನ್ನು ಹೊರಡಿಸಿದೆ.

ರಾಜ್ಯಾದ್ಯಂತ ಗೋಹತ್ಯೆಗೆ ನಿಷೇಧ ಹೇರುವ ಹೈಕೋರ್ಟ್ ಆದೇಶದ ಕೊನೆಯ ಪ್ಯಾರಾಗ್ರಾಫ್‌ನಲ್ಲಿ “ತಿದ್ದುಪಡಿ” ಅಗತ್ಯವಿದೆ ಎಂದು ಪೀಠವು ತಿಳಿಸಿದೆ. ಈ ಆದೇಶವು ಅಸ್ತಿತ್ವದಲ್ಲಿರುವ ಕಾನೂನಿಗೆ ವಿರುದ್ಧವಾಗಿದೆ ಎಂದು ರಾಜ್ಯ ಹೇಳಿದೆ.

ಹೈಕೋರ್ಟ್‌ನ ಆದೇಶವು ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ, 1958ಕ್ಕೆ ವಿರುದ್ಧವಾಗಿದೆ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ವಾದಿಸಿತು.

ರಾಜ್ಯದ ಪ್ರಕಾರ, ಕೆಲಸ ಮಾಡಲು ಅಥವಾ ಸಂತಾನೋತ್ಪತ್ತಿಗೆ ಮಾಡಲಾಗದ 10 ವರ್ಷಕ್ಕಿಂತ ಮೇಲ್ಪಟ್ಟ ಹಸುಗಳನ್ನು ಸಕ್ಷಮ ಪ್ರಾಧಿಕಾರದಿಂದ ಪ್ರಮಾಣೀಕರಿಸಿದರೆ, ಕೊಲ್ಲುವುದಕ್ಕೆ ಕಾನೂನು ಅನುಮತಿಸುತ್ತದೆ.

ಪ್ರಾಣಿ ಹಿಂಸೆ ತಡೆ ಕಾಯ್ದೆ, 1960, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಕಸಾಯಿಖಾನೆ) ನಿಯಮಗಳು, 2001, ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಕಾಯ್ದೆ, 1998 ಮತ್ತು ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ನಿಯಮಗಳು, 2023 ಸೇರಿದಂತೆ ಇತರ ಕಾನೂನುಗಳು ಪ್ರಾಣಿಗಳನ್ನು ವಧೆ ಮಾಡಬಹುದಾದ ಷರತ್ತುಗಳನ್ನು ನಿಯಂತ್ರಿಸುತ್ತವೆ. ಆದರೆ ಸಂಪೂರ್ಣ ನಿಷೇಧವನ್ನು ವಿಧಿಸುವುದಿಲ್ಲ ಎಂದು ಸರ್ಕಾರ ವಾದಿಸಿದೆ.

ಸಂಪೂರ್ಣ ನಿಷೇಧ ಹೇರುವ ಮೂಲಕ, ಹೈಕೋರ್ಟ್ ಶಾಸನಬದ್ಧ ಕಾನೂನಿಗೆ ನ್ಯಾಯಾಂಗ ಕಾನೂನನ್ನು ಬದಲಿಸಿದೆ ಎಂದು ರಾಜ್ಯವು ವಾದಿಸಿತು.

ವಿವಾದ ಶುರುವಾಗಿದ್ದು ಹೇಗೆ?

ಬಕ್ರೀದ್‌ಗೆ ಒಂದು ದಿನ ಮೊದಲು, ಮೇ 27 ರಂದು, ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ವಿ. ಲಕ್ಷ್ಮಿನಾರಾಯಣ್ ಅವರಿದ್ದ ಪೀಠವು ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಅಂಗೀಕರಿಸಿತು.

ಹಿಂದೂ ಮಕ್ಕಳ್ ಕಚ್ಚಿಯ ಪ್ರಧಾನ ಕಾರ್ಯದರ್ಶಿ ಕೆ. ಸೂರ್ಯ ಪ್ರಶಾಂತ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಆದೇಶ ಬಂದಿತ್ತು. ಅರ್ಜಿದಾರರು ಗೋಹತ್ಯೆಯನ್ನು ಗೊತ್ತುಪಡಿಸಿದ ಸ್ಥಳಗಳಲ್ಲಿ ಮಾತ್ರ ನಡೆಸುವಂತೆ ಆದೇಶಿಸಬೇಕಾಗಿ ಕೋರಿದ್ದರೂ, ಬಕ್ರೀದ್ ಅಥವಾ ಇನ್ನಾವುದೇ ದಿನದಂದು ತಮಿಳುನಾಡಿನಲ್ಲಿ ಎಲ್ಲಿಯೂ ಹಸುಗಳು ಮತ್ತು ಕರುಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಹೈಕೋರ್ಟ್ ಆದೇಶಿಸಿತ್ತು.

ಗೋಹತ್ಯೆ ನಿಷೇಧಿಸುವುದರಿಂದ ಹಾಲು ಉತ್ಪಾದನೆ ಸುಧಾರಿಸುತ್ತದೆ. ಗ್ರಾಮೀಣ ಆರ್ಥಿಕತೆ ಬಲಗೊಳ್ಳುತ್ತದೆ ಎಂಬ ಸರ್ಕಾರಿ ಆದೇಶವನ್ನು ಹೈಕೋರ್ಟ್ ತನ್ನ ತೀರ್ಪು ನೀಡುವಾಗ ಅವಲಂಬಿಸಿತ್ತು. ಬಕ್ರೀದ್ ಹಬ್ಬದಂದು ಗೋಹತ್ಯೆ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಸಹ ಅದು ಉಲ್ಲೇಖಿಸಿತು ತೀರ್ಪು ನೀಡಿತ್ತು.

ಹೈಕೋರ್ಟ್ ಆದೇಶ ಪ್ರಶ್ನಿಸಿ ತಮಿಳುನಾಡು  ಸರ್ಕಾರ ಅರ್ಜಿ ಸಲ್ಲಿಸಿತ್ತು. ಅರ್ಜಿಯಲ್ಲಿ ಏನು ಕೇಳಲಾಗಿತ್ತೋ ಅದನ್ನು ಮೀರಿ ಪ್ರಕರಣದ ವ್ಯಾಪ್ತಿಯನ್ನು ಹೈಕೋರ್ಟ್ ವಿಸ್ತರಿಸಿದೆ ಎಂದು ರಾಜ್ಯವು ತನ್ನ ಮೇಲ್ಮನವಿಯಲ್ಲಿ ವಾದಿಸಿತು.

ಸರ್ಕಾರದ ಪ್ರಕಾರ, ಕೊಯಮತ್ತೂರಿನಲ್ಲಿ ಬಕ್ರೀದ್ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗೋಹತ್ಯೆಯನ್ನು ತಡೆಗಟ್ಟುವುದಕ್ಕೆ ಮಾತ್ರ ರಿಟ್ ಅರ್ಜಿ ಸೀಮಿತವಾಗಿತ್ತು. ಆದಾಗ್ಯೂ, ಗೊತ್ತುಪಡಿಸಿದ ಕಸಾಯಿಖಾನೆಗಳಲ್ಲಿಯೂ ಸಹ ರಾಜ್ಯವು “ಸಂಪೂರ್ಣ ಗೋಹತ್ಯೆ ನಿಷೇಧ” ಎಂದು ಹೇಳಿತು.

ಅರ್ಜಿದಾರರು ಅಂತಹ ಪರಿಹಾರವನ್ನು ಬೇಕೆಂದು ಮನವಿ ಮಾಡಿಲ್ಲ ಅಥವಾ ವಿನಂತಿಸಿಲ್ಲ ಎಂದು ಸರ್ಕಾರ ವಾದಿಸಿತು. ಹೈಕೋರ್ಟ್‌ನ ತೀರ್ಪು ಆಂತರಿಕವಾಗಿ ವಿರೋಧಾತ್ಮಕವಾಗಿದೆ ಎಂದು ಸುಪ್ರೀಂನಲ್ಲಿ ರಾಜ್ಯ ಸರ್ಕಾಋ ವಾದಿಸಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed