Ukrain War Effect: ಹಕ್ಕಿಗಳ ಬದುಕನ್ನೇ ಕಿತ್ತುಕೊಂಡ ಉಕ್ರೇನ್ ಯುದ್ಧ! ಮರಗಳಿಲ್ಲದೆ ತಂತಿಗಳಿಂದ ಗೂಡು ಕಟ್ಟಿಕೊಳ್ಳುತ್ತಿವೆ ಪಕ್ಷಿಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಜಗತ್ತಿನ ಯಾವುದೇ ಮೂಲೆಯಲ್ಲಿ ಪಕ್ಷಿಗಳು ತಮ್ಮ ಸಂತಾನಾಭಿವೃದ್ಧಿಯನ್ನು ಮುಂದುವರಿಸಲು, ತಮಗೊಂದು ಸೂರು ಕಂಡುಕೊಳ್ಳಲು ಗೂಡು ಕಟ್ಟಲು ಬಳಸುವುದು ಹುಲ್ಲು ಕಡ್ಡಿಗಳನ್ನು, ಮರದ ರೆಂಬೆಕೊಂಬೆಗಳನ್ನು.. ಆದರೆ ಉಕ್ರೇನ್‌ನ ಯುದ್ಧ ಪೀಡಿತ ಪ್ರದೇಶಗಳಲ್ಲಿ ಪಕ್ಷಿಗಳು ಗೂಡು ಕಟ್ಟಲು ಬಳಸುತ್ತಿರುವುದು ಇವುಗಳನ್ನಲ್ಲ.

News18
News18

ನವದೆಹಲಿ: ಉಕ್ರೇನ್‌ನಲ್ಲಿ (Ukrain War Effect) ಕಳೆದ ನಾಲ್ಕು ವರ್ಷಗಳಿಂದಲೂ ನಡೆಯುತ್ತಿರುವ ಯುದ್ಧವು ಮನುಷ್ಯರ ಜೀವನವನ್ನು ಮಾತ್ರವಲ್ಲ, ಪ್ರಕೃತಿಯ ನಡೆಯನ್ನೂ ಬದಲಾಯಿಸಿದೆ.

ರಷ್ಯಾದ ಆಕ್ರಮಣದಿಂದಾಗಿ ಡೊನೆಟ್ಸ್ಕ್, ಖಾರ್ಕಿವ್, ಜಪೊರಿಝ್ಝಿಯಾ ಮತ್ತು ಡಾನ್‌ಬಾಸ್‌ನಂತಹ ಪ್ರಮುಖ ಪ್ರದೇಶಗಳಲ್ಲಿ ಮರಗಳು, ಕಾಡುಗಳು ಮತ್ತು ಹಸಿರು ಪ್ರದೇಶಗಳು ನಾಶವಾಗುತ್ತಿದ್ದು, ಫಿರಂಗಿ ದಾಳಿ, ಡ್ರೋನ್ ದಾಳಿ ಮತ್ತು ಬಾಂಬ್‌ಗಳಿಂದ ಮರಗಳು ನಾಶವಾಗಿ ಹಸಿರು ಪ್ರದೇಶ ಬರಡು ಭೂಮಿಯಾಗುತ್ತಿದೆ. ಜನರು ತಮ್ಮ ಮನೆಗಳನ್ನು ಕಳೆದುಕೊಂಡು, ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಭಯಾನಕ ಯುದ್ಧದ ನಡುವೆ ಪ್ರಾಣಿ ಪಕ್ಷಿಗಳು ಸಹ ಬದುಕಿಗಾಗಿ ಹೋರಾಟ ಮಾಡುತ್ತಿವೆ. ಆದರೆ ಮನುಷ್ಯರಿಗೆ ಹೋಲಿಸಿದರೆ ಪಕ್ಷಿಗಳ ಜೀವನ ಹೋರಾಟ ವಿಭಿನ್ನವಾಗಿ, ಮನಕಲಕುವಂತೆ ಇದೆ.

ಉಕ್ರೇನ್ ಮತ್ತು ರಷ್ಯಾ ಎರಡೂ ಸೈನ್ಯಗಳು ಡ್ರೋನ್‌ಗಳನ್ನು ನಿಯಂತ್ರಿಸಲು ಈ ಅತ್ಯಂತ ತೆಳುವಾದ ಫೈಬರ್-ಆಪ್ಟಿಕ್ ಕೇಬಲ್‌ಗಳನ್ನು ಬಳಸುತ್ತಿವೆ. ಎಲೆಕ್ಟ್ರಾನಿಕ್ ಜ್ಯಾಮಿಂಗ್‌ಗೆ ಬಲಿಯಾಗದ ಈ ಕೇಬಲ್‌ಗಳು 20ರಿಂದ 65 ಕಿಲೋಮೀಟರ್‌ಗಳಷ್ಟು ಉದ್ದವಿರುತ್ತವೆ. ಡ್ರೋನ್ ಹಾರಿದ ನಂತರ ಈ ಕೇಬಲ್‌ಗಳು ಮರಗಳಲ್ಲಿ, ಹೊಲಗಳಲ್ಲಿ, ರಸ್ತೆಗಳಲ್ಲಿ ಮತ್ತು ಮನೆಗಳ ಮೇಲೆ ಬಿದ್ದು ಸುರುಳಿ ಕಟ್ಟಿದ ದೈತ್ಯಾಕಾರದ ಜೇಡರ ಬಲೆಯಂತೆ ಕಾಣುತ್ತವೆ. ಈ ಕೇಬಲ್‌ಗಳನ್ನು ಮತ್ತೆ ಬಳಸಲಾಗುವುದಿಲ್ಲ.

ಆದರೆ ಪಕ್ಷಿಗಳು ಈ ಕೇಬಲ್‌ಗಳನ್ನು ಸಂಗ್ರಹಿಸಿ ತಮ್ಮ ಗೂಡುಗಳನ್ನು ನಿರ್ಮಿಸುತ್ತಿವೆ. ಉಕ್ರೇನ್‌ನಲ್ಲಿ ಒಂದು ಗ್ಲೈಡ್ ಬಾಂಬ್ ಮರವನ್ನು ಕೆಡವಿದಾಗ ಆ ಮುರಿದ ಕೊಂಬೆಗಳಲ್ಲಿ ಅಂತಹ ಒಂದು ಗೂಡು ಕಂಡುಬಂದಿದೆ. ಈ ಗೂಡುಗಳು ಒಣ ಹುಲ್ಲು ಮತ್ತು ಫೈಬರ್-ಆಪ್ಟಿಕ್ ಕೇಬಲ್‌ಗಳ ಮಿಶ್ರಣದಿಂದ ತಯಾರಾಗಿವೆ. ಕೈವ್‌ನ ಯುದ್ಧ ಮ್ಯೂಸಿಯಂನ ಸಂಶೋಧಕರಾದ ಯಾನಾ ಹ್ರಿಂಕೊ ಅವರು ಈ ಗೂಡುಗಳನ್ನು ಸೈನಿಕರಿಂದ ಪಡೆದಿದ್ದು, ಪಕ್ಷಿಗಳ ಗೂಡುಗಳು ಸಹ ಯುದ್ಧದ ಸ್ವರೂಪಕ್ಕೆ ಒಗ್ಗಿಕೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಯುದ್ಧದಲ್ಲಿ ಮನುಷ್ಯರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿದ್ದಾರೆ, ಮನೆಗಳು ನಾಶವಾಗುತ್ತಿವೆ. ಆದರೆ ಪಕ್ಷಿಗಳು ಈ ವಿನಾಶದ ನಡುವೆಯೂ ತಮ್ಮ ಮುಂದಿನ ಪೀಳಿಗೆಗೆ ಆಶ್ರಯ ಕೊಡಲು ಹೋರಾಡುತ್ತಿವೆ. ಈ ಫೈಬರ್ ಕೇಬಲ್‌ಗಳು ಒಂದು ಕಡೆ ಯುದ್ಧದ ಕ್ರೂರತೆಯನ್ನು ಬಿಂಬಿಸಿದರೆ, ಮತ್ತೊಂದು ಕಡೆ ಪ್ರಕೃತಿಯ ಅದಮ್ಯ ಜೀವನ ಶಕ್ತಿಯನ್ನು ತೋರಿಸುತ್ತವೆ. ಈ ಗೂಡುಗಳು ಯುದ್ಧದ ನಡುವೆಯೂ ಜೀವನ ನಿರಂತರವಾಗಿ ಮುಂದುವರಿಯುತ್ತದೆ ಎಂಬ ಭರವಸೆಯ ಸಂಕೇತವನ್ನು ನಮಗೆ ನೀಡುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports