Last Updated:
Toxic Songs: ಟಾಕ್ಸಿಕ್ ಸಿನಿಮಾದಿಂದ ಈಗಾಗಲೇ 2 ಹಾಡುಗಳು ರಿಲೀಸ್ ಆಗಿವೆ. ಅದರಲ್ಲಿ ತಬಾಹಿ ಹಾಡನ್ನು ಬರೆದಿದ್ದು ಯೋಗರಾಜ್ ಭಟ್. ಟಾಕ್ಸಿಕ್ಗಾಗಿ ಭಟ್ರು ಬರೆದಿದ್ದು ಒಂದೇ ಹಾಡಾ? ಅಥವಾ ಇನ್ನೂ ಇದ್ಯಾ?
ಆಗಸ್ಟ್ 26ರಂದು ರಿಲೀಸ್ ಆಗಲಿರುವ ಟಾಕ್ಸಿಕ್ (Toxic Movie) ಸಿನಿಮಾದ ತಬಾಹಿ ಹಾಡು (Tabahi Song) ಈಗಾಗಲೇ ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ. ಸಿನಿಮಾದ ಎರಡು ಹಾಡುಗಳು ಕೂಡಾ ರಿಲೀಸ್ ಆಗಿವೆ. ಮೊದಲು ರಿಲೀಸ್ ಆಗಿದ್ದ ತಬಾಹಿ ಹಾಡಿನಲ್ಲಿ ಯಶ್ (Yash) ಹಾಗೂ ಕಿಯಾರಾ ಅಡ್ವಾನಿ ಕೆಮಿಸ್ಟ್ರಿ ಸಖತ್ ಸೌಂಡ್ ಮಾಡಿತು. ನಂತರ ರಿಲೀಸ್ ಆಗಿರುವ ಮನಮೋಹಕ ಹಾಡಿನಲ್ಲಿ ತಾರಾ ಸುತಾರಿಯಾ ಹಾಗೂ ಯಶ್ ಬಾತ್ಟಬ್ ರೊಮ್ಯಾನ್ಸ್ ಮತ್ತಷ್ಟು ಸುದ್ದಿ ಮಾಡಿತು.
ಹಾಗಾದರೆ ಟಾಕ್ಸಿಕ್ ಸಿನಿಮಾದಲ್ಲಿ ಒಟ್ಟು ಎಷ್ಟು ಹಾಡುಗಳಿವೆ? ಟಾಕ್ಸಿಕ್ ಸಿನಿಮಾದ 2 ಹಾಡುಗಳು ರಿಲೀಸ್ ಆಗಿವೆ. ಟಾಕ್ಸಿಕ್ ಮೂವಿಯಲ್ಲಿ ಭಟ್ರು ಬರೆದ ಒಂದೇ ಹಾಡು ಇರೋದಾ? ಹೆಚ್ಚು ಹಾಡುಗಳಿವೆಯಾ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರಗಳು.
ಯೋಗರಾಜ್ ಭಟ್ ಅವರು ಟಾಕ್ಸಿಕ್ ಸಿನಿಮಾದ ತಬಾಹಿ ಹಾಡಿನ ಮೂಲಕ ಸಿನಿ ಪ್ರೇಮಿಗಳ ಮನಸು ಗೆದ್ದಿದ್ದಾರೆ. ಆದರೆ ಆ ನಂತರ ಬಂದಿರುವ ಮನಮೋಹಕ ಹಾಡನ್ನು ಯೋಗರಾಜ್ ಭಟ್ ಬರೆದಿಲ್ಲ. ಆದರೆ ಎಕ್ಸೈಟಿಂಗ್ ಸುದ್ದಿ ಏನಪ್ಪಾ ಅಂದ್ರೆ ಈ ಸಿನಿಮಾಗಿ ಯೋಗರಾಜ್ ಭಟ್ ಅವರು ಒಟ್ಟು 3 ಹಾಡುಗಳನ್ನು ಬರೆದಿದ್ದಾರಂತೆ.
ಹೌದು, ಟಾಕ್ಸಿಕ್ಗಾಗಿ ಮುಂಗಾರು ಮಳೆ ಡೈರೆಕ್ಟರ್ ಮೂರು ಹಾಡುಗಳನ್ನು ಬರೆದಿದ್ದಾರೆ ಎನ್ನುವ ಸುದ್ದಿ ಗಾಂಧೀನಗರದಲ್ಲಿ ಸದ್ದು ಮಾಡುತ್ತಿದೆ. ಈ ಮೂಲಕ ಯಶ್ ಫ್ಯಾನ್ಸ್ ಎಕ್ಸೈಟ್ಮೆಂಟ್ ಡಬಲ್ ಆಗಿದೆ. ಈಗಾಗಲೇ ಬಂದಿರೋ ಎರಡೂ ಹಾಡುಗಳು ಕೂಡಾ ರೊಮ್ಯಾಂಟಿಕ್ ಆಗಿವೆ. ಇನ್ನು ಬರುವ ಸಾಂಗ್ ಹೇಗಿರಲಿದೆ ಎನ್ನುವ ಕುತೂಹಲ ಇದೆ.
ತಬಾಹಿ ನಂತರ ಡಿಫರೆಂಟ್ ಜಾನರ್ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರಾ? ಹೀಗೊಂದು ಕುತೂಹಲ ಎಲ್ಲರಲ್ಲೂ ಇದೆ. ಈಗ ಬಂದಿರುವ ಎರಡು ಹಾಡು ಕೂಡಾ ರೊಮ್ಯಾಂಟಿಕ್ ಸಾಂಗ್ಸ್ ಆಗಿರುವುದರಿಂದ ಇನ್ನು ಬರಲಿರುವ ಹಾಡುಗಳು ಮಾಸ್ ಜಾನರ್ನಲ್ಲಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಟಾಕ್ಸಿಕ್ನ ಮೊದಲ ಹಾಡು ತಬಾಹಿ ಮಾರ್ಚ್ನಲ್ಲಿ ರಿಲೀಸ್ ಆಗಿತ್ತು. ಕಡಲ ತೀರದ ಯಶ್ ಹಾಗೂ ಕಿಯಾರಾ ರೊಮ್ಯಾನ್ಸ್ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು.
ಯಶ್ ಹಾಗೂ ಕಿಯಾರ ಅವರನ್ನು ಒಳಗೊಂಡ ಹಾಡು ತಬಾಹಿ ರಿಲೀಸ್ ಆಗಿದ್ದು ರೊಮ್ಯಾಂಟಿಕ್ ಮೆಲೊಡಿಯಾಗಿ ಈ ಹಾಡು ಬಂದಿದೆ. ಹಾಡಿನ ಸಾಹಿತ್ಯ ಕೇಳಿದರೆ ಇದೊಂದು ಪಕ್ಕಾ ರಾ-ರೊಮ್ಯಾಂಟಿಕ್ ಹಾಡೆನ್ನುವುದು ಗೊತ್ತಾಗುತ್ತದೆ. ಈ ಹಾಡಿನಲ್ಲಿ ಪದೇ ಪದೇ ಕೇಳಿ ಬರೋ ಪದ ತಬಾಹಿ, ಅಂದರೆ ವಿನಾಶ ಅಂತ ಅರ್ಥ.
Bangalore,Karnataka














