Kishen Bilagali: ಕಿಶನ್ ಬಿಳಗಲಿ ಮತ್ತೊಂದು ರೋಮ್ಯಾಂಟಿಕ್ ಸಾಂಗ್! ಈ ಸಲ ಹುಡುಗಿ ಬೇರೆ, ಹಾಡು ಬೇರೆ! | | ACTPnews

ಕಿಶನ್ ಬಿಳಗಲಿ ಮತ್ತೊಂದು ರೋಮ್ಯಾಂಟಿಕ್ ಸಾಂಗ್!


Last Updated:

ದಿಲ್ ಸೇ ಚಿತ್ರದ ದಿಲ್ ಸೇ ರೇ ಸಾಂಗ್ ರೀಕ್ರಿಯೇಟ್ ಆಗಿದೆ. ಕಿಶನ್ ಬಿಳಗಲಿ ಇದನ್ನ ತುಂಬಾನೆ ಚೆನ್ನಾಗಿ ರೀಕ್ರಿಯೇಟ್ ಮಾಡಿದ್ದಾರೆ. ಇದು ಅಷ್ಟೆ ಆಕರ್ಷಕವಾಗಿಯೇ ಬಂದಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕಿಶನ್ ಬಿಳಗಲಿ ಮತ್ತೊಂದು ರೋಮ್ಯಾಂಟಿಕ್ ಸಾಂಗ್!
ಕಿಶನ್ ಬಿಳಗಲಿ ಮತ್ತೊಂದು ರೋಮ್ಯಾಂಟಿಕ್ ಸಾಂಗ್!

ಕಿಶನ್ ಬಿಳಗಲಿ (Kishen Bilagali) ಮತ್ತೊಂದು ಹಾಡನ್ನ ರೀಕ್ರಿಯೇಟ್ ಮಾಡಿದ್ದಾರೆ. ಆದರೆ, ಈ ಸಲ ತೆಗೆದುಕೊಂಡ ಹಾಡು ಕನ್ನಡ ಅಲ್ಲ ಬಿಡಿ. 28 ವರ್ಷದ ಹಿಂದೆ ಬಂದ ದಿಲ್ ಸೇ ಚಿತ್ರದ ಹಾಡು ಇದಾಗಿದೆ. ಶಾರುಖ್ ಖಾನ್ ಹಾಗೂ ಪ್ರೀತಿ ಜಿಂಟಾ ಅಭಿನಯದ ಈ ಚಿತ್ರದ ಜಿಯಾ ಜಲೆ ಹಾಡು ತುಂಬಾನೆ ಇಂಟ್ರಸ್ಟಿಂಗ್ ಆಗಿತ್ತು. ಕೇರಳದಲ್ಲಿಯೇ ಈ ಗೀತೆಯನ್ನ ಚಿತ್ರೀಕರಿಸಿದ್ದರು. ಆ ಒಂದು ಫೀಲ್ ಅನ್ನ ಕಿಶನ್ (Kishen) ತಮ್ಮ ಈ ಹಾಡಿನಲ್ಲೂ ತಂದಿದ್ದಾರೆ. ಸಾಥ್ ಕೊಟ್ಟ ಯುವ ನಟಿ ಇಲ್ಲಿ ಪ್ರೀತಿ ಜಿಂಟಾ (Preity Zinta) ತರವೇ ಧೋತಿ ಹಾಕಿಕೊಂಡಿದ್ದಾರೆ. ಶಾರುಖ್ ಖಾನ್ (Shah Rukh Khan) ರೀತಿನೇ ಕಿಶನ್ ಕೂಡ ಇಲ್ಲಿ ಧೋತಿ ಹಾಕಿದ್ದಾರೆ. ಇವರ ಈ ಹಾಡು ಚೆನ್ನಾಗಿ ಬಂದಿದೆ. ಈ ಹಾಡಿನ ವಿಡಿಯೋ ವಿವರ ಇಲ್ಲಿದೆ ಓದಿ.

ದಿಲ್ ಸೇ ರೇ..

ದಿಲ್ ಸೇ ಚಿತ್ರದಲ್ಲಿ ಒಳ್ಳೆ ಹಾಡುಗಳೇ ಇವೆ. ಎ.ಆರ್.ರೆಹಮಾನ್ ಇದಕ್ಕೆ ಸಂಗೀತ ಕೊಟ್ಟಿದ್ದಾರೆ. ಇದರಲ್ಲಿ ದಿಲ್ ಸೇ ರೇ ಅನ್ನುವ ಹಾಡು ತುಂಬಾನೆ ವಿಶೇಷವಾಗಿದೆ.

kishen bilagali recreate dil se film dil se re song video share on social media

ಈ ಸಲ ಹುಡುಗಿ ಬೇರೆ, ಹಾಡು ಬೇರೆ

(ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್‌ಸ್ಟಾಗ್ರಾಮ್)

ಈ ಹಾಡಿನಲ್ಲಿ ಮನೀಷಾ ಕೊಯಿರಾಲಾ ಹಾಗೂ ಶಾರುಖ್ ಖಾನ್ ಇದ್ದಾರೆ. ಆದರೆ, ಇದು ನಾಯಕಿ ಟೆನ್ಷನ್ ಅಲ್ಲಿಯೆ ಇರೋ ಹಾಡಾಗಿದೆ. ನಾಯಕ ಪ್ರೀತಿಯ ಅಲೆಯಲ್ಲಿಯೆ ಇರೋ ಗೀತೆನೂ ಇದಾಗಿದೆ. 28 ವರ್ಷದ ಹಿಂದೆ ಬಂದ ಈ ಚಿತ್ರದ ಈ ಹಾಡು ಇಂದಿಗೂ ತಾಜಾ ಅನುಭವ ಕೊಡುತ್ತದೆ. ಅಂತಹ ಈ ಹಾಡನ್ನ ಕಿಶನ್ ಬಿಳಗಲಿ ರೀಕ್ರಿಯೇಟ್ ಮಾಡಿದ್ದಾರೆ.
ಕೇರಳದಲ್ಲಿ ಶೂಟ್

ದಿಲ್ ಸೇ ಚಿತ್ರದ ಈ ದಿಲ್ ಸೇ ರೇ ಹಾಡನ್ನ ಕಿಶನ್ ಬಿಳಗಲಿ ಕೇರಳದಲ್ಲಿಯೇ ಚಿತ್ರೀಕರಿಸಿದ್ದಾರೆ. ಇಲ್ಲಿಯ ತೆಕ್ಕಡಿಯಲ್ಲಿರೊ ಆನೆ ಜಂಕ್ಷನ್ ಅಲ್ಲಿಯೇ ಶೂಟ್ ಮಾಡಿದ್ದಾರೆ.

ದಿಲ್ ಸೇ ರೇ ಹಾಡಿಗೆ ಆನೆ ತುಂಬಾನೆ ಸೂಟೇಬಲ್ ಅನಿಸುತ್ತದೆ. ಹಾಗೆ ಇದು ಅಷ್ಟೆ ಸಾಥ್ ಕೂಡ ಕೊಟ್ಟಿದೆ. ಈ ಒಂದು ಹಾಡನ್ನ ನೋಡಿವರು ಒಳ್ಳೆ ಮಾತುಗಳನ್ನು ಆಡಿದ್ದಾರೆ. ಆದರೆ, ಒಂದು ಕಾಮೆಂಟ್ ಹೆಚ್ಚು ಗಮನ ಸೆಳೆಯುತ್ತದೆ.

ಕಳೆದ ಸಲ ನವಿಲು ಗರಿ

ಕಳೆದ ಸಲ ನವಿಲು ಗರಿ ಬಳಕೆ ಮಾಡಿದ್ದೀರಿ. ಇದರಿಂದ ಏನೇನೋ ಆಯಿತು. ಆದರೆ, ಈ ಸಲ ಆನೆಯನ್ನ ಬಳಕೆ ಮಾಡಿದ್ದೀರಿ. ಆನೆಗೆ ದಂತ ಇಲ್ಲ ಅಂತ ಯಾರಾದಾದರೂ ಕೇಳಿಯಾರು ಅನ್ನುವ ಅರ್ಥದಲ್ಲಿ ಕಾಮೆಂಟ್ ಹಾಕಿದ್ದಾರೆ.

kishen bilagali recreate dil se film dil se re song video share on social media

ಕಾಸ್ಟೂಮ್ ಚೆಂದವೋ ಚೆಂದ

(ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್‌ಸ್ಟಾಗ್ರಾಮ್)

ದಿಲ್ ಸೇ ಹಾಡನ್ನ ಹೃದಯಿಂದಲೇ ಮಾಡಿದ್ದೇವೆ. ನಿಜಕ್ಕೂ ಇದು “Truly dil se !!!” ಅಂತಲೇ ಬರೆದುಕೊಂಡಿದ್ದಾರೆ. ಆದರೆ, ಈ ಒಂದು ವಿಡಿಯೋ ನೋಡಿದರೆ ಯಾವುದೆ ರೀತಿಯ ವಿವಾದ ಆಗುವ ರೀತಿ ಕಾಣಿಸೋದಿಲ್ಲ.

ಕಾಸ್ಟೂಮ್ ಚೆಂದವೋ ಚೆಂದ

ಈ ಒಂದು ಹಾಡಿನಲ್ಲಿ ಕಿಶನ್ ಬಿಳಗಲಿ ಧೋತಿ ಪ್ಯಾಂಟ್ ಧರಿಸಿದ್ದಾರೆ. ಜೊತೆಗೆ ಸಾಥ್ ಕೊಟ್ಟ ಯುವ ನಟಿ ಕೂಡ ಧೋತಿಯನ್ನ ಹಾಕಿಕೊಂಡಿದ್ದಾರೆ.

ಇದು ಇವರಿಗೆ ನೃತ್ಯ ಮಾಡಲು ಅಷ್ಟೆ ಅನುಕೂಲವೂ ಆಗಿದೆ. ಅಷ್ಟೆ ಸುಂದರವಾಗಿಯೂ ಕಾಣಿಸಿಕೊಂಡಿದೆ. ಇನ್ನುಳಿದಂತೆ ದಿಲ್ ಸೇ ಹಾಡು ಎಲ್ಲರ ಗಮನ ಸೆಳೆಯುವಂತೇನೆ ಇದೆ. ಆದರೆ, ಈ ಹಾಡಿಗೆ ಇದೇ ಚಿತ್ರದ ಜಿಯಾ ಜಲೆ ಹಾಡು ಸ್ಪೂರ್ತಿ ಇದೆ. ಅಂದ್ರೆ, ಕಿಶನ್ ಮತ್ತು ಯುವ ನಟಿ ಧರಿಸಿರೋ ಬಟ್ಟೆಗಳೆಲ್ಲ ಈ ಹಾಡನ್ನ ಹೋಲುತ್ತವೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports