Sapthami Gowda: ‘ರಾಜಕೀಯ ಡಿಫರೆಂಟ್, ಧರ್ಮ ಪರ್ಸನಲ್’ ವಿದ್ಯಾರ್ಥಿ ಪ್ರತಿಭಟನೆ ಬಗ್ಗೆ ಕಾಂತಾರ ನಟಿಯ ಖಡಕ್ ಮಾತು | Kantara sapthami gowda reacts to neet protest | | ACTPnews

ಸಪ್ತಮಿ ಗೌಡ


Last Updated:

NEET Protest: ನೀಟ್ ಪ್ರತಿಭಟನೆ ಬಗ್ಗೆ ಖ್ಯಾತ ನಟಿ ಸಪ್ತಮಿ ಗೌಡ ಏನಂದ್ರು? ಕಾಂತಾರ ಚೆಲುವೆ ವಿದ್ಯಾರ್ಥಿ ಪ್ರತಿಭಟನೆ ಬಗ್ಗೆ ಹೇಳಿದ ಮಾತು ಏನು?

ಸಪ್ತಮಿ ಗೌಡ
ಸಪ್ತಮಿ ಗೌಡ

ಹಲವಾರು ಸೆಲೆಬ್ರಿಟಿಗಳು ವಿದ್ಯಾರ್ಥಿ ಪ್ರತಿಭಟನೆಗೆ (Students Protest) ಸಂಬಂಧಿಸಿ ಪೋಸ್ಟ್​ಗಳನ್ನು ಹಾಕುತ್ತಿರುವ ಬೆನ್ನಲ್ಲೇ ಇದೀಗ ಖ್ಯಾತ ನಟಿ ಸಪ್ತಮಿ ಗೌಡ (Sapthami Gowda) ಅವರು ಈ ಪ್ರತಿಭಟನೆ ಬಗ್ಗೆ ಮಾತನಾಡಿದ್ದು ವೈರಲ್ (Viral) ಆಗುತ್ತಿದೆ. ನಟಿ ಸಪ್ತಮಿ ಗೌಡ ಅವರು ವಿದ್ಯಾರ್ಥಿ ಪ್ರತಿಭಟನೆ ಬಗ್ಗೆ ಸಪೋರ್ಟ್ (Support) ಮಾಡಿ ಮಾತನಾಡಿದ್ದಾರೆ.

ನಮ್ಗೆ ಗಟ್ಸ್ ಇರಲಿಲ್ಲ, ಅವರು ಧೈರ್ಯ ಮಾಡಿ ಕೇಳ್ತಿದ್ದಾರೆ

ದೆಹಲಿ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಇವತ್ತು ಸ್ಟೂಡೆಂಟ್ಸ್ ಪ್ರೊಟೆಸ್ಟ್ ಮಾಡ್ತಾ ಇದ್ದಾರೆ. ನೀವು ಮುಂಚೆ ಯಾಕೆ ಮಾಡಿಲ್ಲ ಅಂದ್ರೆ ನಮಗೆ ಗಟ್ಸ್ ಇರಲಿಲ್ಲ, ಧೈರ್ಯ ಇರಲಿಲ್ಲ. ಅವರು ಧೈರ್ಯ ಮಾಡಿ ಕೇಳ್ತಿದ್ದಾರೆ. ಕನಿಷ್ಠ ಅವರಿಗೆ ಉತ್ತರ ಕೊಡಿ. ಅವರು ರಾಜೀನಾಮೆ ಕೊಟ್ಟರೆ ಸಿಸ್ಟಮ್ ಬದಲಾಗುತ್ತೆ, ಅದೆಲ್ಲ ಅಲ್ಲ, ಭಯ ಆಗ್ಬಹುದು, ನೆಕ್ಸ್ಟ್ ಬರೋರು ಸರಿ ಮಾಡಬಹುದು ಅಷ್ಟೆ ಎಂದು ಹೇಳಿದ್ದಾರೆ.

ನಾನು ಹಿಂದೂ ವಿರೋಧಿನಾ?

ನಾನು ದೇವಿ ದರ್ಶನ ಪಡೆದೆ, ನಾನು ಹಿಂದೂ ವಿರೋಧಿನಾ? ಇದರ ಬಗ್ಗೆ ಪ್ರಶ್ನೆ ಕೇಳಿದರೆ ನಾನು ಹಿಂದೂ ವಿರೋಧಿ ಆಗಲ್ಲ. ಪಾಲಿಟಿಕ್ಸ್ ಡಿಫರೆಂಟ್, ರಿಲಿಜಿಯನ್ ಪರ್ಸನಲ್ ಎಂದಿದ್ದಾರೆ.

ವಿದ್ಯಾರ್ಥಿಗಳ ಸಮಸ್ಯೆ ಸಾಲ್ವ್ ಆಗಬೇಕು

ಇದು ಸ್ಟೂಡೆಂಟ್ ಇಶ್ಯೂ. ಸ್ಟೂಡೆಂಟ್ಸ್ ಸಮಸ್ಯೆ ಸಾಲ್ವ್ ಆಗಬೇಕು. ಅದರಲ್ಲಿ ಈ ಪಾರ್ಟಿ ಆ ಪಾರ್ಟಿ ಅದು ಇದೂ ಎಲ್ಲ ಬಂದು ಕಲಬೆರಕೆ ಆಗಿದೆ. ನೀಟ್ ರೀ ಎಕ್ಸಾಂ ಆಗಿದೆ. ನಮ್ಮ ತೆರಿಗೆ ಹಣದಿಂದಲೇ ಅಲ್ವಾ ಆಗೋದು? ಯಾವುದಕ್ಕೆ ಫೈಟ್ ಆಗ್ತಿರೋದು ಅಂತ ಮರೆತಿದ್ದಾರೆ. ಆ ಕಡೆಯಿಂದ ಗೂಂಡಾಗಿರಿ, ಈ ಕಡೆಯಿಂದ ಗೂಂಡಾಗಿರಿ, ಪಾಪ ವಿದ್ಯಾರ್ಥಿಗಳು ಸಫರ್ ಆಗೋದು ಜನರಲ್ ಮೆರಿಟ್​ನಲ್ಲಿರುವ ವಿದ್ಯಾರ್ಥಿಗಳು ಎಂದಿದ್ದಾರೆ.

ತಂಗಿಯೂ ನೀಟ್ ಓದ್ತಾಳೆ

ನನ್ನ ತಂಗಿಯೂ ನೀಟ್ ಓದುತ್ತಿದ್ದಾಳೆ. ಬಹಳಷ್ಟು ಜನ ಮನೆಯಲ್ಲಿ ಪ್ರೆಷರ್ ಹಾಕುತ್ತಾರೆ. ಮೊದಲ ಸಲ ಬರೆದ ಮಾರ್ಕ್ಸ್ ಮತ್ತೊಮ್ಮೆ ಬರಬೇಕಂತ ಇಲ್ಲ ಅಲ್ವಾ? ಕೋಚಿಂಗ್ ಹೋಗೋಕೆ ಲಕ್ಷಾಂತರ ರೂಪಾಯಿ ದುಡ್ಡು ಬೇಕು. ಜನ ಪ್ರಶ್ನೆ ಮಾಡ್ತಿದ್ದಾರಲ್ಲಾ? ಅವರಿಗೆ ಹಕ್ಕಿದೆ ಕೇಳೋಕೆ ಎಂದಿದ್ದಾರೆ.

ಪ್ರಶ್ನೆ ಕೇಳೋದು ಇಂಪಾರ್ಟೆಂಟ್

ವಿದ್ಯಾರ್ಥಿಗಳ ಸಮಸ್ಯೆ ಕೇಳೋದು ತುಂಬಾ ಇಂಪಾರ್ಟೆಂಟ್. ಆ ನೋವು ನನಗೂ ಆಗುತ್ತಿದೆ ಎಂದಿದ್ದಾರೆ. ಕೆಲಸ ಸರಿ ಮಾಡದಿದ್ದಾಗ ತೆಗೆದು ಹಾಕದಿದ್ದರೆ ಭಯ ಆಗುತ್ತೆ, ಆದರೆ ಸಿಸ್ಟಮ್ ಬದಲಾಗುತ್ತದೆ ಎನ್ನೋಕಾಗಲ್ಲ ಎಂದಿದ್ದಾರೆ.

ಊಟ ಚೆನ್ನಾಗಿಲ್ಲಾಂದರೆ ಮ್ಯಾನೇಜರ್​​ನ ತೆಗೆದು ಹಾಕ್ತಾರೆ

ಹೋಟೆಲ್​​ನಲ್ಲಿ ಊಟ ಚೆನ್ನಾಗಿಲ್ಲ ಅಂದ್ರೆ ಮ್ಯಾನೇಜರ್​ಗೆ ಕೇಳ್ತಾರೆ, ಕೊನೆಗೆ ಮ್ಯಾನೇಜರ್​​ನ ತೆಗೆದು ಹಾಕ್ತಾರೆ. ಅದಿಕ್ಕೆ ವಿದ್ಯಾರ್ಥಿಗಳು ಹೇಳೋದು ಸಚಿವರು ರಾಜೀನಾಮೆ ಕೊಡಲಿ ಎನ್ನೋದು. ಡೆಮಾಕ್ರಸಿಯನ್ನು ಪ್ರಶ್ನೆ ಮಾಡೋದು. ಪ್ರಶ್ನೆ ಮಾಡದಿದ್ದರೂ ಸಮಸ್ಯೆಯಾಗುತ್ತದೆ. ಟ್ಯಾಕ್ಸ್ ಪೇಯರ್ ಹಣವೇ ಬಳಕೆ ಆಗೋದು. ಪ್ರಶ್ನೆ ಕೇಳೋದು ತಪ್ಪಲ್ಲ ಎಂದಿದ್ದಾರೆ ಎಂದಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports