Toxic-Ravi Basrur: ‘ಟಾಕ್ಸಿಕ್’ ಚಿತ್ರಕ್ಕೆ ಅತಿದೊಡ್ಡ ಆರ್ಕೆಸ್ಟ್ರಾ ಅಬ್ಬರ! ರವಿ ಬಸ್ರೂರು ಸಖತ್ ಪ್ಲಾನ್; ಏನದು? | | ACTPnews

ಟಾಕ್ಸಿಕ್ ಚಿತ್ರಕ್ಕೆ ಅತಿದೊಡ್ಡ ಆರ್ಕೆಸ್ಟ್ರಾ ಅಬ್ಬರ!


Last Updated:

ಟಾಕ್ಸಿಕ್ ಚಿತ್ರ ಸಂಗೀತದ ವಿಚಾರದಲ್ಲಿ ರವಿ ಬಸ್ರೂರು ದೊಡ್ಡ ಪ್ಲಾನ್ ಮಾಡಿದ್ದಾರೆ. 100 ಜನ ಸಂಗೀತಗಾರರು ಇರೋ ಆರ್ಕೆಸ್ಟ್ರಾವನ್ನೆ ಬಳಕೆ ಮಾಡುತ್ತಿದ್ದಾರೆ. ಇದರ ಬಗ್ಗೆ ಸ್ವತಃ ರವಿ ಬಸ್ರೂರು ಹೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಟಾಕ್ಸಿಕ್ ಚಿತ್ರಕ್ಕೆ ಅತಿದೊಡ್ಡ ಆರ್ಕೆಸ್ಟ್ರಾ ಅಬ್ಬರ!
ಟಾಕ್ಸಿಕ್ ಚಿತ್ರಕ್ಕೆ ಅತಿದೊಡ್ಡ ಆರ್ಕೆಸ್ಟ್ರಾ ಅಬ್ಬರ!

ರವಿ ಬಸ್ರೂರು (Ravi Basrur) ಮ್ಯೂಸಿಕ್ ಅಂದ್ರೆ ಅಲ್ಲಿ ವಿಶೇಷ ಇದ್ದೇ ಇರುತ್ತದೆ. ಕೆಜಿಎಫ್ ಸಿನಿಮಾ (KGF Movie) ಇವರಿಗೆ ಅತಿ ದೊಡ್ಡ ಹೆಸರು ತಂದುಕೊಟ್ಟಿದೆ. ಅದಕ್ಕೂ ಮೊದಲು ಮಾಡಿರೋ ಸಿನಿಮಾಗಳು ಚೆನ್ನಾಗಿಯೇ ಇದ್ದವು. ಆದರೆ, ಕೆಜಿಎಫ್ ಚಿತ್ರ ಇವರನ್ನ ಬೇರೆ ಲೆವೆಲ್‌ಗೆ ತೆಗೆದುಕೊಂಡು ಹೋಗಿದೆ. ಟಾಕ್ಸಿಕ್ ಚಿತ್ರಕ್ಕೂ (Toxic Movie) ಅಂತಹದ್ದೆ ಬೇರೆ ಮಟ್ಟದ ಸಂಗೀತ ಮಾಡಿದ್ದಾರೆ. ನೂರು ಜನ ಇರೋ ಆರ್ಕೆಸ್ಟ್ರಾವನ್ನ ಈ ಚಿತ್ರದ ಸಂಗೀತಕ್ಕೆ ಬಳಕೆ ಮಾಡಿದ್ದಾರೆ. ಈ ವಿಚಾರವನ್ನ ಸ್ವತಃ ರವಿ ಬಸ್ರೂರು (Ravi Basrur) ಹಂಚಿಕೊಂಡಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ ಓದಿ.

ಟಾಕ್ಸಿಕ್ ಚಿತ್ರಕ್ಕೆ ಬೃಹತ್‌ ಆರ್ಕೆಸ್ಟ್ರಾ

ಟಾಕ್ಸಿಕ್ ಚಿತ್ರಕ್ಕೆ ರವಿ ಬಸ್ರೂರು ಬೇರೆ ರೀತಿಯ ಸಂಗೀತದ ಪ್ಲಾನ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ 100 ಜನರ ಆರ್ಕೆಸ್ಟ್ರಾ ಬಳಕೆ ಮಾಡುತ್ತಿದ್ದಾರೆ.
Toxic Movie Background score interesting facts revealed by music director ravi basrur

ರವಿ ಬಸ್ರೂರು ಸಖತ್ ಪ್ಲಾನ್

(ಚಿತ್ರ ಕೃಪೆ: ರವಿ ಬಸ್ರೂರು ಇನ್‌ಸ್ಟಾಗ್ರಾಮ್)

ಇದರಿಂದ ಚಿತ್ರದ ಸಂಗೀತಕ್ಕೆ ಬೇರೆಯ ಮಟ್ಟವೇ ಬರುತ್ತದೆ. 100 ಜನ ಸಂಗೀತಗಾರರು ಇರೋ ಬೃಹತ್ ಆರ್ಕೆಸ್ಟ್ರಾ ತಂಡವನ್ನೆ ರವಿ ಬಸ್ರೂರು ಇದೀಗ ಟಾಕ್ಸಿಕ್ ಚಿತ್ರದ ಸಂಗೀತಕ್ಕೆ ಬಳಕೆ ಮಾಡಿದ್ದಾರೆ. ಆದರೆ, ಇದು ಯಾವೆಲ್ಲ ದೃಶ್ಯಗಳಿಗೆ ಬಳಕೆ ಆಗುತ್ತಿದೆ ಅಂತ ಏನು ಹೇಳಿಕೊಂಡಿಲ್ಲ. ಆದರೆ…

ಬೆಳ್ಳಿ ಪರದೆ ಮೇಲೆ ಭಾರೀ ಧಮಾಕಾ

ಈ ಒಂದು 100 ಜನರ ಸಂಗೀತಗಾರರು ನುಡಿಸಿದ ಸಂಗೀತದ ಮೂಲಕ ಬೆಳ್ಳಿ ತೆರೆ ಮೇಲೆ ಮ್ಯೂಸಿಕಲಿ ಭಾರೀ ಧಮಾಕಾ ಮಾಡುವ ಪ್ಲಾನ್ ಮಾಡಿದ್ದಾರೆ.

ಹಾಗಾಗಿಯೇ ಈ ಸಂಗೀತಗಾರರ ತಂಡವನ್ನೆ ರವಿ ಬಸ್ರೂರು ಚಿತ್ರದ ಸಂಗೀತಕ್ಕೆ ಬಳಕೆ ಮಾಡಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಹಾಡುಗಳಲ್ಲಿ ಒಂದು ಹಾಡನ್ನ ಇವರು ಕಂಪೋಸ್ ಮಾಡಿದ್ದಾರೆ. ಆದರೆ, ಇಡೀ ಚಿತ್ರದ ಹಿನ್ನೆಲೆ ಸಂಗೀತವನ್ನ ಇವರೇ ಮಾಡುತ್ತಿದ್ದಾರೆ.

ಟಾಕ್ಸಿಕ್ ಚಿತ್ರದ ಟ್ರೈಲರ್ ರಿಲೀಸ್

ಟಾಕ್ಸಿಕ್ ಚಿತ್ರದ ಟ್ರೈಲರ್ ರಿಲೀಸ್ ಡೇಟ್ ಅಧಿಕೃತವಾಗಿಯೇ ರಿವೀಲ್ ಆಗಿದೆ. ಆಗಸ್ಟ್-8 ರಂದು ಈ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ.

ಈ ದಿನವೇ ರಿಲೀಸ್ ಆಗುವುದಕ್ಕೂ ಕಾರಣ ಇದೆ. ಎರಡು ವರ್ಷದ ಹಿಂದೆ ಆಗಸ್ಟ್-8 ರಂದು ಟಾಕ್ಸಿಕ್ ಚಿತ್ರಕ್ಕೆ ಮುಹೂರ್ತ ಆಗಿತ್ತು. ಈ ವರ್ಷದ ಆಗಸ್ಟ್-8 ಕ್ಕೆ ಈ ಚಿತ್ರದ ಕೆಲಸ ಶುರು ಆಗಿ 2 ವರ್ಷ ಆಗುತ್ತದೆ. ಹಾಗಾಗಿಯೇ ಈ ದಿನವೇ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ.

Toxic Movie Background score interesting facts revealed by music director ravi basrur

ಟಾಕ್ಸಿಕ್ ಚಿತ್ರಕ್ಕೆ ಅತಿದೊಡ್ಡ ಆರ್ಕೆಸ್ಟ್ರಾ ಅಬ್ಬರ

(ಚಿತ್ರ ಕೃಪೆ: ರವಿ ಬಸ್ರೂರು ಇನ್‌ಸ್ಟಾಗ್ರಾಮ್)

ಆಗಸ್ಟ್-26 ಕ್ಕೆ ಟಾಕ್ಸಿಕ್ ರಿಲೀಸ್

ಟಾಕ್ಸಿಕ್ ಚಿತ್ರ ಆಗಸ್ಟ್-26 ರಂದು ರಿಲೀಸ್ ಆಗುತ್ತಿದೆ. ದೊಡ್ಡ ಮಟ್ಟದಲ್ಲಿಯೇ ಇದು ತೆರೆ ಕಾಣುತ್ತಿದೆ. ವಿಶ್ವದಾದ್ಯಂತ ಈ ಚಿತ್ರವನ್ನ ರಿಲೀಸ್ ಮಾಡಲಾಗುತ್ತಿದೆ.

ಗೀತು ಮೋಹನ್‌ದಾಸ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಚಿತ್ರದ ನಾಯಕ ಮತ್ತು ನಿರ್ಮಾಪಕ ಯಶ್ ಜೊತೆಗೂಡಿ ಈ ಕತೆಯನ್ನು ಬರೆದಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports