Last Updated:
ಈ ಸ್ಥಳೀಯ ರಜಾ ದಿನವು ಚಲಾವಣಾ ಸಾಧನ ಕಾಯ್ದೆ 1881ರ ಅಡಿಯಲ್ಲಿ ಬರುವುದಿಲ್ಲವಾದ್ದರಿಂದ, ಈ ಸ್ಥಳೀಯ ರಜೆಯು ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ.
ಈ ನೆಲದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ (British) ವಿರುದ್ಧ ಹೋರಾಡಿದ ಮಹಾವೀರರ ತ್ಯಾಗವನ್ನು ಸ್ಮರಿಸುವುದು ಮತ್ತು ಅವರ ಬಲಿದಾನಗಳನ್ನು ಗೌರವಿಸುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ, ಸ್ವಾತಂತ್ರ್ಯ ಹೋರಾಟಗಾರರೊಬ್ಬರ (Freedom fighter) ನೆನಪಿನ ದಿನದ ಅಂಗವಾಗಿ ತಮಿಳುನಾಡಿನ (Tamil Nadu) ಈ ಜಿಲ್ಲೆಯಲ್ಲಿ ಸೋಮವಾರ (Monday) ಅಂದರೆ, ಆಗಸ್ಟ್ 3 ರಂದು ರಜೆ ಘೋಷಣೆ ಮಾಡಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ಧೀರನ್ ಚಿನ್ನಮಲೈ
ಶಾಲೆ-ಕಾಲೇಜುಗಳಲ್ಲಿ ಈಗಾಗಲೇ ಪರೀಕ್ಷೆಗಳು ಘೋಷಿಸಲ್ಪಟ್ಟಿದ್ದರೆ ಈ ರಜಾ ಪ್ರಕಟಣೆಯು ಅನ್ವಯಿಸುವುದಿಲ್ಲ, ಹಾಗೂ ಪರೀಕ್ಷೆಗಳು ಮುಂಚಿತವಾಗಿ ಘೋಷಿಸಿದಂತೆ ನಡೆಯಲಿವೆ ಎಂದು ತಿಳಿದು ಬಂದಿದೆ. ಈ ಸ್ಥಳೀಯ ರಜಾ ದಿನವು ಚಲಾವಣಾ ಸಾಧನ ಕಾಯ್ದೆ 1881 ರ (Under Negotiable Instruments Act 1881) ಅಡಿಯಲ್ಲಿ ಬರುವುದಿಲ್ಲವಾದ್ದರಿಂದ, ಈ ಸ್ಥಳೀಯ ರಜೆಯು ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ.
ಸ್ಥಳೀಯ ರಜಾ ದಿನವಾದ 03.08.2026 ಸೋಮವಾರದಂದು ತುರ್ತು ಕೆಲಸ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ತಿರುಪೂರ್ ಜಿಲ್ಲೆಯಲ್ಲಿರುವ ಖಜಾನೆ ಮತ್ತು ಉಪ ಖಜಾನೆಗಳು ನಿರ್ದಿಷ್ಟ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬೇಕೆಂದು ಆದೇಶಿಸಲಾಗಿದೆ ಎಂದು ತಿರುಪೂರ್ ಜಿಲ್ಲಾಧಿಕಾರಿ ಮನೀಶ್ ನಾರಣವರೇ ಅವರು ಮಾಹಿತಿ ನೀಡಿದ್ದಾರೆ.
Aug 01, 2026 11:24 PM IST














