Talents: ನೀರಿನಲ್ಲಿ ಚಿನ್ನದ ಬೇಟೆ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ 102 ಪದಕಗಳನ್ನು ಬಾಚಿಕೊಂಡ ದಕ್ಷಿಣ ಕನ್ನಡದ ಪ್ರತಿಭೆಗಳು! | ಮಂಗಳೂರು ನ್ಯೂಸ್ (Mangaluru News) | ACTPnews

ಈಜು ಸಾಧನೆ


Last Updated:

ಮಂಗಳೂರಿನ ‘ವೀ ವನ್ ಅಕ್ವಾ ಸೆಂಟರ್’ನ ಈಜುಪಟುಗಳು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಫಿನ್ಸ್ ಈಜು ಸ್ಪರ್ಧೆಗಳಲ್ಲಿ 102 ಪದಕಗಳನ್ನು (50 ಚಿನ್ನ, 27 ಬೆಳ್ಳಿ, 25 ಕಂಚು) ಗೆದ್ದು ಸಾಧನೆ ಮಾಡಿದ್ದಾರೆ.

ಈಜು ಸಾಧನೆ
ಈಜು ಸಾಧನೆ

ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದೆ. ರಾಷ್ಟ್ರೀಯ ಕ್ರೀಡಾ ದಿನಾಚರಣೆ-2026ರ ಅಂಗವಾಗಿ ಆಯೋಜಿಸಲಾದ ಈಜು ಸ್ಪರ್ಧೆ (Swimming Competition) ಹಾಗೂ ರಾಜ್ಯ ಮಟ್ಟದ ಫಿನ್ಸ್ ಈಜು ಸ್ಪರ್ಧೆ-2026ರಲ್ಲಿ ಮಂಗಳೂರಿನ ‘ವೀ ವನ್ ಅಕ್ವಾ ಸೆಂಟರ್’ನ ಕ್ರೀಡಾಪಟುಗಳು ಅಸಾಧಾರಣ ಹಾಗೂ ಅಭೂತಪೂರ್ವ ಸಾಧನೆ (Achievement) ಮಾಡಿದ್ದಾರೆ. ಈ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. ವಿವಿಧ ವಯೋಮಾನದ ವಿಭಾಗಗಳಲ್ಲಿ ಕಣಕ್ಕಿಳಿದ ಪುಟಾಣಿ ಹಾಗೂ ಯುವ ಈಜುಪಟುಗಳು ತಮ್ಮ ಅದ್ಭುತ ಕೌಶಲ್ಯದಿಂದ ಒಟ್ಟು 102 ಪದಕಗಳನ್ನು ಬಾಚಿಕೊಳ್ಳುವ ಮೂಲಕ ಇತಿಹಾಸ (History) ನಿರ್ಮಿಸಿದ್ದಾರೆ. ಈ ಮಹತ್ವದ ಸಾಧನೆಯಲ್ಲಿ ಕ್ರೀಡಾಪಟುಗಳು ಒಟ್ಟು 50 ಚಿನ್ನ, 27 ಬೆಳ್ಳಿ ಹಾಗೂ 25 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed