Last Updated:
ವಿಮಾನ ಟಿಕೆಟ್ ದರ ದಿಢೀರ್ ಹೆಚ್ಚಳವಾಗಿದೆ. ಪ್ರಯಾಣ ವೇದಿಕೆಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳು ಸೀಟುಗಳು ಭರ್ತಿಯಾದಂತೆ ದರಗಳನ್ನು ವೇಗವಾಗಿ ಹೆಚ್ಚಿಸುತ್ತಿವೆ. ಹಬ್ಬದ ಋತುವಿನಲ್ಲಿ ಕೆಲವು ಮಾರ್ಗಗಳಲ್ಲಿನ ದರಗಳು ನಾಲ್ಕು ಪಟ್ಟು ಹೆಚ್ಚಾಗಲು ಇದೇ ಕಾರಣವಾಗಿದೆ.
ಈ ದೀಪಾವಳಿ ಮತ್ತು ಛತ್ ಹಬ್ಬಕ್ಕೆ (Deepavali And Chhath Festival) ಮನೆಗೆ ಹಾರಲು ಯೋಜಿಸುತ್ತಿರುವವರಿಗೆ ದೊಡ್ಡ ಶಾಕ್ ಎದುರಾಗಿದೆ. ಅವರು ಮೊದಲು ಬ್ಯಾಂಕ್ ಬ್ಯಾಲೆನ್ಸ್ (Bank Balance) ಪರಿಶೀಲಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಹಬ್ಬದ ಋತು ಪ್ರಾರಂಭವಾಗುತ್ತಿದ್ದಂತೆ ವಿಮಾನಯಾನ ದರಗಳು (Air Fair Hike) ಗಗನಕ್ಕೇರಿವೆ. ಸಾಮಾನ್ಯವಾಗಿ 3,500 ರೂಪಾಯಿ ಇದ್ದ ಟಿಕೆಟ್ ಈಗ 12,500ರಿಂದ 15,000 ರೂಪಾಯಿಗೆ ಲಭ್ಯವಿದೆ. ಹಬ್ಬದ ಋತುವಿನಲ್ಲಿ ಕೆಲವು ಮಾರ್ಗಗಳಲ್ಲಿನ ದರಗಳು ನಾಲ್ಕು ಪಟ್ಟು ಹೆಚ್ಚಾಗಿದೆ.














