Last Updated:
Narendra Modi: ಮೋದಿ ಜನ್ಮದಿನದಂದು ಭಾರತೀಯ ಜನತಾ ಪಕ್ಷವು ಒಂದು ತಿಂಗಳ ಅವಧಿಯ ಸೇವಾ ಸಂಕಲ್ಪ ಅಭಿಯಾನವನ್ನು ಪ್ರಾರಂಭಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಪ್ರಕಟಿಸಿದ್ದಾರೆ. ಈ ವೇಳೆ ಬೈಕ್ ರ್ಯಾಲಿ, ರಕ್ತ ದಾನ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) 25 ವರ್ಷಗಳ ಸಾರ್ವಜನಿಕ ಜೀವನವನ್ನು ಸ್ಮರಿಸಲು ಬಿಜೆಪಿ (BJP) ಸಜ್ಜಾಗಿದೆ. ಇದೇ ಸೆಪ್ಟೆಂಬರ್ 17ರಂದು, ಅವರ ಜನ್ಮದಿನದಂದು ಭಾರತೀಯ ಜನತಾ ಪಕ್ಷವು ಒಂದು ತಿಂಗಳ ಅವಧಿಯ ಸೇವಾ ಸಂಕಲ್ಪ ಅಭಿಯಾನವನ್ನು (Seva Sankalp Abhiyan) ಪ್ರಾರಂಭಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ (BJP President Nitin Nabin) ಪ್ರಕಟಿಸಿದ್ದಾರೆ. ಈ ವೇಳೆ ಬೈಕ್ ರ್ಯಾಲಿ, ರಕ್ತ ದಾನ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.














