Survey – ಭಾರತದ ಗಡಿಭಾಗದಲ್ಲಿ ಚೀನಾ ತಂಟೆ: ನಿಮಗೇನನಿಸುತ್ತೆ? ಒಂದು ಪುಟ್ಟ ಸಮೀಕ್ಷೆ | | ACTPnews

Survey - ಭಾರತದ ಗಡಿಭಾಗದಲ್ಲಿ ಚೀನಾ ತಂಟೆ: ನಿಮಗೇನನಿಸುತ್ತೆ? ಒಂದು ಪುಟ್ಟ ಸಮೀಕ್ಷೆ |


Last Updated:

ಲಡಾಖ್​ನ ಗಡಿಭಾಗದಲ್ಲಿ ಚೀನೀ ಸೈನಿಕರ ಆಕ್ರಮಣಕಾರಿ ವರ್ತನೆ ವಿಪರೀತವೆನ್ನುವಷ್ಟು ಮಟ್ಟಿಗೆ ಹೋಗಿದೆ. ಚೀನೀಯರ ಈ ವರ್ತನೆ ಬಗ್ಗೆ ನಿಮಗೇನನಿಸುತ್ತದೆ ಎಂದು ಇಲ್ಲಿ ತಿಳಿಸಿ.

ಕೊರೋನಾ ಸಂಕಟದ ಮಧ್ಯೆ ಚೀನಾ ದೇಶದವರು ಗಡಿಭಾಗದಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದಾರೆ. ಸಾವಿರಾರು ಕಿಮೀಯಷ್ಟು ಸುದೀರ್ಘ ಗಡಿಭಾಗ ಹಂಚಿಕೊಂಡಿರುವ ಚೀನಾದಿಂದ ಗಡಿತಂಟೆ ಹೊಸದೇನಲ್ಲ. ಸಿಕ್ಕಿಂ, ಅರುಣಾಚಲಪ್ರದೇಶ, ಲಡಾಖ್ ಮೊದಲಾದ ಕಡೆ ಚೀನಾದವರು ಪದೇ ಪದೇ ಗಡಿ ಅತಿಕ್ರಮಣಕ್ಕೆ ಪ್ರಯತ್ನಿಸುತ್ತಲೇ ಇರುತ್ತಾರೆ. ಇತ್ತೀಚೆಗೆ ಲಡಾಖ್​ನ ಪ್ಯಾಂಗೋಂಗ್ ಟ್ಸೋ ಸರೋವರದ ಬಳಿ ಭಾರತದ ಗಡಿಭಾಗ ಪ್ರವೇಶಿಸಿದ ಚೀನೀ ಸೈನಿಕರು ಭಾರತೀಯ ಸೈನಿಕರ ವಿರುದ್ಧವೇ ದರ್ಪ ತೋರುತ್ತಿದ್ದಾರೆ. ಇದು ದೊಡ್ಡ ಮಟ್ಟಕ್ಕೆ ಹೋಗಿ ನಿಲ್ಲುವ ಸಾಧ್ಯತೆ ಇಲ್ಲದಿಲ್ಲ ಎಂದು ಪರಿಣಿತರು ಎಚ್ಚರಿಸುತ್ತಿದ್ದಾರೆ.

ಭಾರತದ ಜೊತೆ ಬೃಹತ್ ಆರ್ಥಿಕ ವ್ಯವಹಾರವನ್ನೂ ಹೊಂದಿರುವ ಚೀನಾದವರು ತನ್ನ ಪ್ರಬಲ ಸೇನೆಯನ್ನು ಬಳಸಿಕೊಂಡು ಭಾರತದ ಮೇಲೆ ದರ್ಪ ತೋರುತ್ತಿದೆ ಎಂಬ ಆರೋಪ ಇದೆ. ಆದರೆ, ಚೀನಾದವರದ್ದು ಸ್ವಭಾತಃ ಆಕ್ರಮಣಕಾರಿ ಮನೋಭಾವ. ಎಲ್​ಎಸಿಯಲ್ಲಿ ಗಡಿಭಾಗ ಸ್ಪಷ್ಟವಿಲ್ಲದ್ದರಿಂದ ಅವರವರ ಮೂಗಿನ ನೇರಕ್ಕೆ ಗಡಿ ಕಾಯುತ್ತಿದ್ದಾರೆ. ಆದ್ದರಿಂದ ಚೀನಾದವರ ಈ ವರ್ತನೆಯಲ್ಲಿ ಅಚ್ಚರಿ ಏನಿಲ್ಲ. ಎರಡೂ ದೇಶಗಳವರು ಮಾತುಕತೆಗೆ ಕೂತು ಗಡಿಭಾಗವನ್ನು ನಿರ್ದಿಷ್ಟಪಡಿಸಿ ಹಂಚಿಕೊಂಡರೆ ಎಲ್ಲಾ ವಿವಾದ ಬಗೆಹರಿದಂತೆ ಎಂಬ ಸಲಹೆಗಳೂ ವ್ಯಕ್ತವಾಗುತ್ತಿವೆ.

ಒಟ್ಟಾರೆಯಾಗಿ, ಚೀನಾದ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? ಈ ಕೆಳಗೆ ಕಾಣುವ ಸಮೀಕ್ಷೆಯಲ್ಲಿ ನೀವು ಪಾಲ್ಗೊಂಡು ನಿಮ್ಮ ಅನಿಸಿಕೆ ತಿಳಿಸಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed