SRH vs RR: 3 ರನ್​​ಗಳಿಂದ ಐಪಿಎಲ್ ವೇಗದ ಶತಕ ಜಸ್ಟ್ ಮಿಸ್! ಆದ್ರೂ ಹೈದರಾಬಾದ್​ಗೆ ನಡುಕ ಹುಟ್ಟಿಸಿ ವಿಶ್ವದಾಖಲೆ ಬರೆದ ವೈಭವ್​​ | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ

Last Updated:

ಐಪಿಎಲ್ 2026 ರ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡದ ಸ್ಪೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಇತಿಹಾಸ ನಿರ್ಮಿಸಿದರು. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನು ಮುರಿದು ಹಾಕಿದರು.

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

ಚಂಡೀಗಢದ ಮುಲ್ಲನ್ಪುರದ ಮಹಾರಾಜ ಯಾದವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್ 2026 ಎಲಿಮಿನೇಟರ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಿವೆ. ರಾಜಸ್ಥಾನ ತಂಡದ 15 ವರ್ಷದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ ಮೂರು ರನ್​​ಗಳಿಂದ ದಾಖಲೆಯ ಶತಕವನ್ನು ಗಳಿಸುವ ಅವಕಾಶವನ್ನು ಕಳೆದುಕೊಂಡರು. ಆದರೆ, ಸೂರ್ಯವಂಶಿ ಇತಿಹಾಸ ನಿರ್ಮಿಸಿದರು.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಯುವ ಬ್ಯಾಟರ್ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ವೈಭವ್ ಸೂರ್ಯವಂಶಿ ಎಲ್ಲರ ಗಮನ ಸೆಳೆದರು. ಸನ್‌ರೈಸರ್ಸ್ ಹೈದರಾಬಾದ್ ವೇಗಿ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಒಂದೇ ಓವರ್‌ನಲ್ಲಿ ರನ್‌ಗಳ ಮಳೆ ಸುರಿಸಿದರು. ಸೂರ್ಯವಂಶಿ ಅವರ ಅಬ್ಬರದ ಇನ್ನಿಂಗ್ಸ್ ಪಂದ್ಯದ ಆರಂಭಿಕ ಪವರ್‌ಪ್ಲೇನಲ್ಲಿ ರಾಜಸ್ಥಾನ ಹೈದರಾಬಾದ್ ಮೇಲೆ ಒತ್ತಡ ಹೇರಲು ನೆರವಾಯಿತು.

ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿರುವ ರಾಜಸ್ಥಾನ ತಂಡಕ್ಕೆ ವೈಭವ್ ಸೂರ್ಯವಂಶಿ ಬಿರುಸಿನ ಆರಂಭ ನೀಡಿದರು. ಐಪಿಎಲ್ 2026 ರಲ್ಲಿ ರಾಜಸ್ಥಾನ ತಂಡದ ಬ್ಯಾಟಿಂಗ್ ಬೆನ್ನಲುಬಾಗಿರುವ ಸೂರ್ಯವಂಶಿ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆಗಳನ್ನು ಮಾಡಲು ಶುರು ಮಾಡಿದರು. ಇದರೊಂದಿಗೆ ಸೂರ್ಯವಂಶಿ ಹೈದರಾಬಾದ್ ಬೌಲರ್​​​​ಗಳನ್ನ ಧೂಳೀಪಟ ಮಾಡಿದರು.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ವೈಭವ್ ಸೂರ್ಯವಂಶಿ ರನ್​ಗಳ ಮಳೆಯಲ್ಲ ಸಿಕ್ಸರ್​ಗಳ ಮಳೆ ಸುರಿಸಿದರು. ಇದರೊಂದಿಗೆ ಸೂರ್ಯವಂಶಿ ಪ್ಲೇಆಫ್​ ಪಂದ್ಯಗಳಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿ ದಾಖಲೆಯನ್ನು ಸೃಷ್ಟಿಸಿದರು. ಐಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಪರ ಶುಭ್​ಮನ್ ಗಿಲ್ ಗಳಿಸಿದ 10 ಸಿಕ್ಸರ್ ದಾಖಲೆಯನ್ನು ಸೂರ್ಯವಂಶಿ ಮುರಿದರು. ಪ್ಲೇಆಫ್​ ಪಂದ್ಯಗಳಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿ ದಾಖಲೆ ಸೂರ್ಯವಂಶಿ (12) ಹೆಸರಿನಲ್ಲಿದೆ.

ಯಶಸ್ವಿ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ವೈಭವ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದರು. ದಾಖಲೆಯ ಶತಕದತ್ತ ಮುನ್ನಗುತ್ತಿದ್ದ ಸೂರ್ಯವಂಶಿ ಕೇವಲ 3 ರನ್ ಅವಶ್ಯಕತೆಯಿದ್ದಾಗ ಔಟಾದರು. ವೈಭವ್ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಮತ್ತು ಬರೋಬ್ಬರಿ 12 ಸಿಕ್ಸರ್ ನೆರವಿನಿಂದ 97 ರನ್ ಗಳಿಸಿದರು. ಶತಕದ ಅಂಚಿನಲ್ಲಿದ್ದಾಗ ವೈಭವ್ ಔಟಾದಾಗ ನಿರಾಶೆಗೊಂಡರು.

ಈ ಅಬ್ಬರದ ಇನ್ನಿಂಗ್ಸ್‌ನಲ್ಲಿ ವೈಭವ್ ಸೂರ್ಯವಂಶಿ ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ದಾಖಲೆಯನ್ನು ಮುರಿದರು. ವೈಭವ್ ಈಗ ಒಂದೇ ಐಪಿಎಲ್ ಆವೃತ್ತಿಯಲ್ಲಿ 600 ರನ್ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು. ಐಪಿಎಲ್ 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವಾಗ ರಿಷಭ್ ಪಂತ್ ತಮ್ಮ 20ನೇ ವಯಸ್ಸಿನಲ್ಲಿ 600 ರನ್ ಗಳಿಸಿದ್ದರು.

ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಬ್ಯಾಟಿಂಗ್ ರಾಕ್ಷಸ ಕ್ರಿಸ್ ಗೇಲ್ ದಾಖಲೆಯನ್ನು ಧೂಳೀಪಟ ಆಯಿತು. ಐಪಿಎಲ್ 2012 ರಲ್ಲಿ ಆರ್​ಸಿಬಿ ಪರ ಕ್ರಿಸ್​ ಗೇಲ್​ 59 ಸಿಕ್ಸರ್​​ ಸಿಡಿಸಿದ್ದದ್ದು ಇಲ್ಲಿಯವರೆಗಿನಿ ವಿಶ್ವದಾಖಲೆಯಾಗಿತ್ತು. ಈಗ 2026 ರ ಆವೃತ್ತಿಯಲ್ಲಿ ಸೂರ್ಯವಂಶಿ 60 ಸಿಕ್ಸರ್​​​ಗಳ ಗಡಿ ದಾಟಿದರು. ಇದರೊಂದಿಗೆ 19 ವರ್ಷಗಳ ಐಪಿಎಲ್ ಇತಿಹಾಸದಲ್ಲಿಯೇ 60 ಸಿಕ್ಸರ್ ಸಿಡಿಸಿದ ಏಕೈಕ ಬ್ಯಾಟರ್ ಎಂಬ ವಿಶ್ವದಾಖಲೆಗೆ ವೈಭವ್ ಪಾತ್ರರಾದರು. ಇವರಿಬ್ಬರನ್ನ ಹೊರೆತುಪಡಿಸಿದರೆ, ಒಂದೇ ಐಪಿಎಲ್ ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಆ್ಯಂಡ್ರೆ ರಸೆಲ್ (2019ರಲ್ಲಿ 52), ಕ್ರಿಸ್ ಗೇಲ್ (2013ರಲ್ಲಿ 51 ಸಿಕ್ಸರ್), ಜಾಸ್ ಬಟ್ಲರ್​ (2022ರಲ್ಲಿ 45 ಸಿಕ್ಸರ್) ಟಾಪ್​ 5 ರಲ್ಲಿದ್ದಾರೆ.

ರಾಜಸ್ಥಾನ ತಂಡಕ್ಕೆ ಸ್ಫೋಟಕ ಆರಂಭ ನೀಡಿದ ವೈಭವ್ ಸೂರ್ಯವಂಶಿ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದರೊಂದಿಗೆ, ಐಪಿಎಲ್ ನಾಕೌಟ್/ಪ್ಲೇಆಫ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ಜಂಟಿ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2014 ರಲ್ಲಿ ಪಂಜಾಬ್ ವಿರುದ್ಧ ಸುರೇಶ್ ರೈನಾ ಅವರ 16 ಎಸೆತಗಳಲ್ಲಿ ಅರ್ಧಶತಕದ ದಾಖಲೆಯನ್ನು ಅವರು ಸರಿಗಟ್ಟಿದರು. ಇದಲ್ಲದೆ, ಆಡಮ್ ಗಿಲ್‌ಕ್ರಿಸ್ಟ್ (17 ಎಸೆತಗಳು) ಮತ್ತು ಎಂಎಸ್ ಧೋನಿ (20 ಎಸೆತಗಳು) ಅವರಂತಹ ದಿಗ್ಗಜರನ್ನು ಹಿಂದಿಕ್ಕಿದರು.

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed