Last Updated:
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾದ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ನಟಿ , ತೆಲುಗು ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.
ಕೆಜಿಎಫ್ ಚಿತ್ರದ ಮೂಲಕ ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಗಮನ ಸೆಳೆದ ನಟಿ ಶ್ರೀನಿಧಿ ಶೆಟ್ಟಿ (Srinidhi Shetty), ಇದೀಗ ದಕ್ಷಿಣ ಭಾರತದ ಹಲವು ಭಾಷೆಗಳ ಸಿನಿಮಾಗಳಲ್ಲಿ ತಮ್ಮದೇ ಆದ ಗುರುತು ಮೂಡಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಕೆಜಿಎಫ್ (KGF) ಸಿನಿಮಾದ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ನಟಿ , ತೆಲುಗು ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಇದೀಗ ನಟಿ ಶ್ರೀನಿಧಿ ಶೆಟ್ಟಿ ಸಂದರ್ಶನವೊಂದರಲ್ಲಿನ ಮಾತುಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನಟಿ ಶ್ರೀನಿಧಿ ಶೆಟ್ಟಿಗೆ ಕುತೂಹಲಕಾರಿ ಪ್ರಶ್ನೆಯೊಂದು ಎದುರಾಗಿದೆ. ಯಶ್ ಹಾಗೂ ನಾನಿ ಇಬ್ಬರ ಜೊತೆಗೂ ಕೆಲಸ ಮಾಡಿರುವ ನಟಿಗೆ, ಇವರಿಬ್ಬರಲ್ಲಿ ಯಾರು ತಮ್ಮನ್ನು ಹೆಚ್ಚು ನಗಿಸುತ್ತಾರೆ ಎಂದು ಕೇಳಲಾಯಿತು. ಈ ಪ್ರಶ್ನೆಗೆ ಶ್ರೀನಿಧಿ ನೀಡಿದ ಉತ್ತರವೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಯಶ್ ಹಾಗೂ ನಾನಿ ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ವಿಶೇಷ ಸ್ಥಾನ ಹೊಂದಿರುವ ನಟರು ಎಂದು ಶ್ರೀನಿಧಿ ಶೆಟ್ಟಿ ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಯಶ್ ತಮ್ಮ ಮೊದಲ ಪ್ರಮುಖ ಸಹನಟರಾಗಿದ್ದರೆ, ತೆಲುಗು ಚಿತ್ರರಂಗದಲ್ಲಿ ನಾನಿ ಅವರ ಮೊದಲ ಸಹನಟರಾಗಿದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ.
ತಮ್ಮ ಸಿನಿಮಾ ಪಯಣದ ಆರಂಭಿಕ ಹಂತದಲ್ಲಿ ಇಬ್ಬರು ನಟರ ಜೊತೆ ಕೆಲಸ ಮಾಡಿರುವುದು ವಿಶೇಷ ಅನುಭವ ಎಂದು ಶ್ರೀನಿಧಿ ಹೇಳಿದ್ದಾರೆ. ಇಬ್ಬರೂ ಅದ್ಭುತ ನಟರು. ಹೀಗಾಗಿ ಯಶ್ ಮತ್ತು ನಾನಿ ಇಬ್ಬರೂ ತಮ್ಮ ಪಾಲಿಗೆ ವಿಶೇಷ ವ್ಯಕ್ತಿಗಳು ಎಂಬ ಅಭಿಪ್ರಾಯವನ್ನು ನಟಿ ಹಂಚಿಕೊಂಡಿದ್ದಾರೆ.
ಇನ್ನು ನಾನಿ ಬಗ್ಗೆ ಮಾತನಾಡುವಾಗ ಶ್ರೀನಿಧಿ ಶೆಟ್ಟಿ ಸೆಟ್‌ನಲ್ಲಿ ನಾನಿ ಸದಾ ಜೋಕ್ಸ್ ಮಾಡುತ್ತಾ, ಇತರರ ಕಾಲೆಳೆಯುತ್ತಾ ಮತ್ತು ತಮಾಷೆ ಮಾಡುತ್ತಾ ಇರುತ್ತಾರೆ ಎಂದು ಶ್ರೀನಿಧಿ ಹೇಳಿದ್ದಾರೆ.
ಯಶ್ ಮತ್ತು ನಾನಿ ಇಬ್ಬರಲ್ಲೂ ವಿಭಿನ್ನ ರೀತಿಯ ವ್ಯಕ್ತಿತ್ವವಿದೆ.
ಹೀಗಾಗಿ ನಗಿಸುವ ವಿಚಾರಕ್ಕೆ ಬಂದರೆ ಯಶ್‌ಗಿಂತ ನಾನಿ ಅವರೇ ಬೆಸ್ಟ್ ಎಂದು ಶ್ರೀನಿಧಿ ಶೆಟ್ಟಿ ಹೇಳಿದ್ದಾರೆ.
ಕೆಜಿಎಫ್ ಸಿನಿಮಾದ ಯಶಸ್ಸಿನ ಬಳಿಕ ಶ್ರೀನಿಧಿ ಶೆಟ್ಟಿ ಸಿನಿಮಾ ಪಯಣ ಮತ್ತಷ್ಟು ವಿಸ್ತಾರಗೊಂಡಿದೆ. ಯಶ್ ಜೊತೆಗಿನ ಜೋಡಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿತ್ತು. ಇದಾದ ಬಳಿಕ ಅವರು ದಕ್ಷಿಣ ಭಾರತದ ಬೇರೆ ಬೇರೆ ಚಿತ್ರರಂಗಗಳಲ್ಲೂ ಅವಕಾಶಗಳನ್ನು ಪಡೆದುಕೊಂಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ನಾನಿ ಜೊತೆಗಿನ ಹಿಟ್: ದಿ ಥರ್ಡ್ ಕೇಸ್ ಸಿನಿಮಾದ ಮೂಲಕವೂ ಶ್ರೀನಿಧಿ ಗಮನ ಸೆಳೆದಿದ್ದಾರೆ. ಕನ್ನಡ ಮತ್ತು ತೆಲುಗು ಚಿತ್ರರಂಗದ ಎರಡು ಪ್ರಮುಖ ನಟರ ಜೊತೆ ಕೆಲಸ ಮಾಡಿದ ಅನುಭವವನ್ನು ಹೊಂದಿರುವ ನಟಿ, ಇದೀಗ ತಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.














