Mrunal Thakur: ಅಮ್ಮನ ವಾರ್ಡ್‌ರೋಬ್‌ನಿಂದ ಈ ವಸ್ತು ಕದಿಯುತ್ತಿದ್ದೆ; ನಟಿ ಮೃಣಾಲ್ ಠಾಕೂರ್ ಬಿಗ್ ಸೀಕ್ರೆಟ್ ರಿವೀಲ್ | | ACTPnews

News18


Last Updated:

ತಮ್ಮ ತಾಯಿಯೊಂದಿಗಿನ ಈ ಫ್ಯಾಷನ್ ನೆನಪನ್ನು ಹಂಚಿಕೊಂಡಿರುವ ಮೃಣಾಲ್, ಪ್ರಮುಖ ಕಾರ್ಯಕ್ರಮಗಳಿಗೆ ಹೋಗುವಾಗ ಅಮ್ಮನ ವಾರ್ಡ್‌ರೋಬ್‌ನಿಂದ ವಾಚ್ ತೆಗೆದುಕೊಂಡು ಹಾಕಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.

News18
News18

ಸಿಂಪಲ್ ಹಾಗೂ ಕ್ಲಾಸಿಕ್ ಫ್ಯಾಷನ್ ಮೂಲಕವೇ ಅಭಿಮಾನಿಗಳ ಗಮನ ಸೆಳೆಯುವ ನಟಿ ಮೃಣಾಲ್ ಠಾಕೂರ್ (Mrunal Thakur), ತಮ್ಮ ಸ್ಟೈಲ್ ಆಯ್ಕೆಗಳ ಹಿಂದಿರುವ ಕಾರಣವನ್ನು ಬಹಿರಂಗಪಡಿಸಿದ್ದಾರೆ. ವಿಶೇಷವಾಗಿ ಕ್ಲಾಸಿಕ್ ವಾಚ್ ಗಳ ಮೇಲಿನ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿರುವ ನಟಿ, ಈ ಕ್ರೇಜ್ ತಮ್ಮ ತಾಯಿಯಿಂದಲೇ ಬಂದಿದೆ ಎಂದು ಹೇಳಿದ್ದಾರೆ. ಅಮ್ಮನನ್ನು ‘ಕ್ಲಾಸಿಕ್ ಲೇಡಿ’ ಎಂದು ಕರೆಯುವ ಮೃಣಾಲ್, ಪ್ರಮುಖ ಕಾರ್ಯಕ್ರಮಗಳಿಗೆ ಹೋಗುವಾಗ ತಾಯಿಯ ವಾರ್ಡ್‌ರೋಬ್‌ನಿಂದ ವಾಚ್ ತೆಗೆದುಕೊಂಡು ಹೋಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ತಮ್ಮ ತಾಯಿಯೇ ತಮ್ಮ ಫ್ಯಾಷನ್ ಮೇಲೆ ದೊಡ್ಡ ಪ್ರಭಾವ ಬೀರಿದ್ದಾರೆ ಎಂದು ಮೃಣಾಲ್ ಹೇಳಿದ್ದಾರೆ. ತಾಯಿ ಯಾವತ್ತೂ ಕ್ಲಾಸಿಕ್ ಶೈಲಿಯನ್ನು ಇಷ್ಟಪಡುವ ಮಹಿಳೆಯಾಗಿದ್ದರು. ಅವರಿಂದಲೇ ತಮಗೂ ಇಂತಹ ಫ್ಯಾಷನ್ ಮತ್ತು ವಾಚ್‌ಗಳ ಮೇಲಿನ ಪ್ರೀತಿ ಬೆಳೆದಿದೆ ಎಂದು ನಟಿ ತಿಳಿಸಿದ್ದಾರೆ.

ತಮ್ಮ ತಾಯಿಯೊಂದಿಗಿನ ಈ ಫ್ಯಾಷನ್ ನೆನಪನ್ನು ಹಂಚಿಕೊಂಡಿರುವ ಮೃಣಾಲ್, ಪ್ರಮುಖ ಕಾರ್ಯಕ್ರಮಗಳಿಗೆ ಹೋಗುವಾಗ ಅಮ್ಮನ ವಾರ್ಡ್‌ರೋಬ್‌ನಿಂದ ವಾಚ್ ತೆಗೆದುಕೊಂಡು ಹಾಕಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.

ಮೃಣಾಲ್ ಪಾಲಿಗೆ ವಾಚ್ ಗಳು ಕೇವಲ ಸಮಯ ನೋಡುವ ಸಾಧನವಲ್ಲ. ಒಂದು ಸಿಂಪಲ್ ವಾಚ್ ಕೂಡ ತಮ್ಮ ಕಂಪ್ಲೀಟ್ ಲುಕ್ ಅನ್ನು ಬದಲಿಸಬಲ್ಲದು. ಸಿಂಪಲ್ ಡ್ರೆಸ್‌ಗೆ ಕ್ಲಾಸಿಕ್ ವಾಚ್ ಧರಿಸಿದರೆ ಅದಕ್ಕೆ ಹೆಚ್ಚುವರಿ ಸೊಗಸು ಬರುತ್ತದೆ ಎಂಬುದು ನಟಿಯ ಅಭಿಪ್ರಾಯ.

ಕಿರುತೆರೆಯಿಂದ ಬೆಳ್ಳಿತೆರೆಗೆ

ಮೃಣಾಲ್ ಠಾಕೂರ್ ಸಿನಿಮಾ ಪಯಣಕ್ಕೂ ಮುನ್ನವೇ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಹಲವು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು, ನಂತರ ಬಾಲಿವುಡ್‌ನತ್ತ ಹೆಜ್ಜೆ ಇಟ್ಟರು.

2018ರಲ್ಲಿ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮೃಣಾಲ್, ಸೂಪರ್ 30, ಜರ್ಸಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸಿದರು. ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ.

ದುಲ್ಕರ್ ಸಲ್ಮಾನ್ ಜೊತೆ ಮೃಣಾಲ್ ಠಾಕೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ರಶ್ಮಿಕಾ ಮಂದಣ್ಣ, ತರುಣ್ ಭಾಸ್ಕರ್ ಮತ್ತು ಸುಮಂತ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.

ಸೀತಾ ರಾಮಂ ಯಶಸ್ಸಿನ ಬಳಿಕ ಮೃಣಾಲ್ ಠಾಕೂರ್ ಅವರಿಗೆ ದಕ್ಷಿಣ ಭಾರತದ ಚಿತ್ರರಂಗದಿಂದ ಸಾಕಷ್ಟು ಅವಕಾಶಗಳು ಹರಿದುಬಂದಿವೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed