Premada Ooralli: 60 ಶೋಗಳಿಂದ 700ಕ್ಕೂ ಅಧಿಕ ಶೋಗಳವರೆಗೆ; ‘ಪ್ರೇಮದ ಊರಲಿ’ ಸಿನಿಮಾ ಬರೆಯುತ್ತಿದೆ ಹೊಸ ದಾಖಲೆ! | | ACTPnews

News18


Last Updated:

ಸಿನಿಮಾ ಚೆನ್ನಾಗಿದೆ ಎಂಬ ಮಾತು ಪ್ರೇಕ್ಷಕರಿಂದ ಪ್ರೇಕ್ಷಕರಿಗೆ ತಲುಪಿದಂತೆ ಪ್ರೇಮದ ಊರಲಿಗೆ ಬೇಡಿಕೆ ಹೆಚ್ಚಾಗತೊಡಗಿತು. ಪರಿಣಾಮ ಮೊದಲ ವಾರ ಮುಗಿಯುವಷ್ಟರಲ್ಲಿ ಚಿತ್ರದ ಶೋಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಯಿತು. ಎರಡನೇ ವಾರಕ್ಕೆ ಕಾಲಿಡುವ ವೇಳೆಗೆ 700ಕ್ಕೂ ಅಧಿಕ ಪ್ರದರ್ಶನಗಳು ಸಿನಿಮಾಗೆ ದೊರೆತಿವೆ ಎನ್ನಲಾಗಿದೆ.

News18
News18

ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್‌ಗಳ (Big Stars) ಸಿನಿಮಾಗಳಿಗೆ ಅದ್ಧೂರಿ ಪ್ರಚಾರ, ಭರ್ಜರಿ ಪ್ರಮೋಷನ್ ಮತ್ತು ನೂರಾರು ಶೋಗಳು ಸಿಗುವುದು ಸಾಮಾನ್ಯ. ಆದರೆ ಯಾವುದೇ ದೊಡ್ಡ ಮಟ್ಟದ ಪ್ರಚಾರವಿಲ್ಲದೆ, ಪ್ರೇಕ್ಷಕರ ಮಾತಿನಿಂದಲೇ ತನ್ನ ಶೋಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಮುನ್ನುಗ್ಗುತ್ತಿರುವ ಸಿನಿಮಾ ಇದೀಗ ಗಮನ ಸೆಳೆಯುತ್ತಿದೆ. ಸೆಪ್ಟೆಂಬರ್ 25ರಂದು ಬಿಡುಗಡೆಯಾದ ಪ್ರೇಮದ ಊರಲಿ (Premada Ooralli) ಸಿನಿಮಾ ಮೊದಲಿಗೆ ಕೇವಲ 45ರಿಂದ 60 ಶೋಗಳೊಂದಿಗೆ ತನ್ನ ಪ್ರಯಾಣ ಆರಂಭಿಸಿತ್ತು. ಆದರೆ ಪ್ರೇಕ್ಷಕರಿಂದ ಸಿಕ್ಕ ಉತ್ತಮ ಪ್ರತಿಕ್ರಿಯೆ ಚಿತ್ರದ ಪ್ರದರ್ಶನಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ.

ಪ್ರೇಮದ ಊರಲಿ ಸಿನಿಮಾ ಬಿಡುಗಡೆಯಾದಾಗ ಚಿತ್ರತಂಡದ ಮುಂದೆ ದೊಡ್ಡ ಸವಾಲೇ ಇತ್ತು. ಸೀಮಿತ ಚಿತ್ರಮಂದಿರಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ಆರಂಭದಲ್ಲಿ ದಿನಕ್ಕೆ ಸುಮಾರು 45ರಿಂದ 60 ಶೋಗಳು ಸಿಕ್ಕಿದ್ದವು. ದೊಡ್ಡ ಸ್ಟಾರ್‌ಗಳ ಸಿನಿಮಾಗಳಿಗೆ ಸಿಗುವ ರೀತಿಯ ಭರ್ಜರಿ ಪ್ರಚಾರವೂ ಚಿತ್ರಕ್ಕಿರಲಿಲ್ಲ. ಹೀಗಿದ್ದರೂ ಸಿನಿಮಾವನ್ನು ನೋಡಿದ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿದ್ದರು.

ಪ್ರೇಕ್ಷಕರ ಮಾತೇ ಸಿನಿಮಾಗೆ ಪ್ರಚಾರ

ಸಿನಿಮಾ ಚೆನ್ನಾಗಿದೆ ಎಂಬ ಮಾತು ಪ್ರೇಕ್ಷಕರಿಂದ ಪ್ರೇಕ್ಷಕರಿಗೆ ತಲುಪಿದಂತೆ ಪ್ರೇಮದ ಊರಲಿಗೆ ಬೇಡಿಕೆ ಹೆಚ್ಚಾಗತೊಡಗಿತು. ಪರಿಣಾಮ ಮೊದಲ ವಾರ ಮುಗಿಯುವಷ್ಟರಲ್ಲಿ ಚಿತ್ರದ ಶೋಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಯಿತು. ಎರಡನೇ ವಾರಕ್ಕೆ ಕಾಲಿಡುವ ವೇಳೆಗೆ 700ಕ್ಕೂ ಅಧಿಕ ಪ್ರದರ್ಶನಗಳು ಸಿನಿಮಾಗೆ ದೊರೆತಿವೆ ಎನ್ನಲಾಗಿದೆ.

ಪ್ರದರ್ಶನಗಳ ಸಂಖ್ಯೆಯಲ್ಲಷ್ಟೇ ಅಲ್ಲ, ಗಳಿಕೆಯಲ್ಲೂ ಪ್ರೇಮದ ಊರಲಿ ಉತ್ತಮ ವೇಗ ಪಡೆದುಕೊಂಡಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಬಿಡುಗಡೆಯಾದ ಕೇವಲ 9 ದಿನಗಳಲ್ಲೇ ಸಿನಿಮಾ 10 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಗಳಿಸಿದೆ. ಅಕ್ಟೋಬರ್ 4ರಂದು 10ನೇ ದಿನದ ಗಳಿಕೆಯನ್ನೂ ಸೇರಿಸಿದರೆ ಚಿತ್ರದ ಒಟ್ಟಾರೆ ಕಲೆಕ್ಷನ್ 13 ಕೋಟಿ ರೂಪಾಯಿಗಳ ಗಡಿ ದಾಟುವ ನಿರೀಕ್ಷೆಯಿದೆ.

ಬಹುತೇಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವು ಕಡೆಗಳಲ್ಲಿ ಪ್ರದರ್ಶನಗಳು ಹೌಸ್‌ಫುಲ್ ಆಗುತ್ತಿವೆ. ಇದೇ ವೇಗ ಮುಂದುವರಿದರೆ ಮುಂದಿನ ಎರಡು ವಾರಗಳಲ್ಲಿ ಚಿತ್ರದ ಒಟ್ಟಾರೆ ಕಲೆಕ್ಷನ್ 30 ಕೋಟಿ ರೂಪಾಯಿ ತಲುಪಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ರಂಗಾಯಣ ರಘು ಅವರ ಮನಮುಟ್ಟುವ ಅಭಿನಯದ ಜೊತೆಗೆ ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ ಸೇರಿದಂತೆ ಇಡೀ ತಾರಾಗಣದ ಉತ್ತಮ ನಟನೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಥೆ ಮತ್ತು ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಿನಿಮಾ ಯಶಸ್ವಿಯಾಗಿದೆ.

ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಪ್ರೇಮದ ಊರಲಿ ಇದೀಗ ಬೇರೆ ಭಾಷೆಗಳ ಪ್ರೇಕ್ಷಕರನ್ನೂ ತಲುಪಲು ಸಿದ್ಧವಾಗಿದೆ. ಈಗಾಗಲೇ ಸಿನಿಮಾ ತೆಲುಗು ಭಾಷೆಗೆ ಡಬ್ ಆಗಿ ಬಿಡುಗಡೆಯಾಗಿದ್ದು, ಅಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ ಎನ್ನಲಾಗಿದೆ.

ತೆಲುಗಿನ ಬಳಿಕ ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಕರ್ನಾಟಕದಲ್ಲಿ ಕಂಟೆಂಟ್ ಆಧಾರಿತ ಸಿನಿಮಾವಾಗಿ ಪ್ರೇಕ್ಷಕರ ಗಮನ ಸೆಳೆದಿರುವ ಚಿತ್ರವು ಹೊರ ರಾಜ್ಯಗಳಲ್ಲೂ ಇದೇ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತದೆಯೇ ಎಂಬ ಕುತೂಹಲ ಮೂಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed