Cricket: ಕ್ರಿಸ್ ಗೇಲ್ ದಾಖಲೆ ಕೊನೆಗೂ ಉಡೀಸ್! 188 ರನ್ ಸಿಡಿಸಿ ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದ 20 ವರ್ಷದ ಬ್ಯಾಟ್ಸ್​​ಮನ್​! | | ACTPnews

ಪ್ರಿಟೋರಿಯಸ್ - ಕ್ರಿಸ್​ ಗೇಲ್​


Last Updated:

ಕ್ರಿಸ್ ಗೇಲ್, ಪುಣೆ ವಾರಿಯರ್ಸ್ ವಿರುದ್ಧ ಅಜೇಯ 175 ರನ್ ಗಳಿಸಿದ್ದು ಇದುವರೆಗಿನ ಅಧಿಕೃತ ಟಿ20 ಕ್ರಿಕೆಟ್‌ನ ಅತ್ಯುನ್ನತ ವೈಯಕ್ತಿಕ ಸ್ಕೋರ್ ಆಗಿತ್ತು.

ಪ್ರಿಟೋರಿಯಸ್ - ಕ್ರಿಸ್​ ಗೇಲ್​
ಪ್ರಿಟೋರಿಯಸ್ – ಕ್ರಿಸ್​ ಗೇಲ್​

ಟಿ20 ಕ್ರಿಕೆಟ್ ಇತಿಹಾಸದ ಅತ್ಯಂತ ರೋಮಾಂಚಕ ಮತ್ತು ಸ್ಫೋಟಕ ಬ್ಯಾಟಿಂಗ್‌ಗೆ ಇಡೀ ಜಗತ್ತು ಸಾಕ್ಷಿಯಾಗಿದೆ. ದಕ್ಷಿಣ ಆಫ್ರಿಕಾದ (South Africa) 20 ವರ್ಷದ ಯುವ ಬ್ಯಾಟ್ಸ್‌ಮನ್ ಲುವಾನ್-ಡ್ರೆ ಪ್ರಿಟೋರಿಯಸ್ (Lhuan-dre Pretorius) CSA T20 ಚಾಲೆಂಜ್ ಟೂರ್ನಿಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಕ್ರೀಡಾ ಲೋಕದ ಹಳೆಯ ಎಲ್ಲಾ ಮೈಲಿಗಲ್ಲನ್ನು ಅಳಿಸಿಹಾಕಿದ್ದಾರೆ. ಮಂಗಾಂಗ್ ಓವಲ್ ಮೈದಾನದಲ್ಲಿ ನೈಟ್ಸ್ ತಂಡದ ವಿರುದ್ಧ ಟೈಟನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಪ್ರಿಟೋರಿಯಸ್, ಕೇವಲ 79 ಎಸೆತಗಳಲ್ಲಿ ಅಜೇಯ 188 ರನ್ ಬಾರಿಸುವ ಮೂಲಕ ಟಿ20 ಇತಿಹಾಸದಲ್ಲೇ ವೈಯಕ್ತಿಕ ಗರಿಷ್ಠ ರನ್ ದಾಖಲಿಸಿದ್ದಾರೆ.

ಕ್ರಿಸ್ ಗೇಲ್ ಹೆಸರಲ್ಲಿದ್ದ 13 ವರ್ಷಗಳ ಹಳೆಯ ದಾಖಲೆ ಬ್ರೇಕ್

2013ರ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ವೆಸ್ಟ್ ಇಂಡೀಸ್‌ನ ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್, ಪುಣೆ ವಾರಿಯರ್ಸ್ ವಿರುದ್ಧ ಅಜೇಯ 175 ರನ್ ಗಳಿಸಿದ್ದು ಇದುವರೆಗಿನ ಅಧಿಕೃತ ಟಿ20 ಕ್ರಿಕೆಟ್‌ನ ಅತ್ಯುನ್ನತ ವೈಯಕ್ತಿಕ ಸ್ಕೋರ್ ಆಗಿತ್ತು. ಆದರೆ ಪ್ರಿಟೋರಿಯಸ್ 188 ರನ್‌ಗಳನ್ನು ಗಳಿಸಿ ಗೇಲ್ ಅವರ ದಶಕದ ಹಳೆಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆ

ಎದುರಾಳಿ ಬೌಲರ್‌ಗಳನ್ನು ಅಕ್ಷರಶಃ ಮನಬಂದಂತೆ ಬಾರಿಸಿದ ಈ ಎಡಗೈ ವಿಕೆಟ್‌ಕೀಪರ್-ಬ್ಯಾಟರ್, ತಮ್ಮ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ 13 ಭೀಕರ ಸಿಕ್ಸರ್‌ಗಳನ್ನು ಸಿಡಿಸಿದರು. ಅಂದರೆ ಬರೋಬ್ಬರಿ 138 ರನ್‌ಗಳು ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕವೇ ಹರಿದುಬಂದಿವೆ. ಅವರ ಸ್ಟ್ರೈಕ್ ರೇಟ್ 237.97 ಆಗಿದ್ದು, ಟಿ20 ಕ್ರಿಕೆಟ್‌ಗೆ ಬೇಕಾದ ಸಂಪೂರ್ಣ ರೌದ್ರಾವತಾರವನ್ನು ಅವರು ಪ್ರದರ್ಶಿಸಿದರು.

ಪ್ರಮುಖ ದಾಖಲೆಗಳು

  • ಅತಿ ಹೆಚ್ಚು ವೈಯಕ್ತಿಕ ಟಿ20 ಸ್ಕೋರ್: ಅಧಿಕೃತ ಟಿ20 ಕ್ರಿಕೆಟ್ (Domestic + International) ಇತಿಹಾಸದಲ್ಲೇ ಅತ್ಯಧಿಕ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ (188* ರನ್).
  • ಒಂದು ಇನ್ನಿಂಗ್ಸ್‌ನಲ್ಲಿ ಗರಿಷ್ಠ ಎಸೆತಗಳನ್ನು ಎದುರಿಸಿದ ದಾಖಲೆ: ಇನಿಂಗ್ಸ್‌ನ ಮೊದಲ ಎಸೆತದಿಂದ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು 79 ಎಸೆತಗಳನ್ನು ಎದುರಿಸಿದ ಅಪರೂಪದ ಸಾಧನೆ.
  • ಟೈಟನ್ಸ್ ತಂಡದ ಬೃಹತ್ ಮೊತ್ತ: ಪ್ರಿಟೋರಿಯಸ್ ಅವರ ಈ ಅಬ್ಬರದ ನೆರವಿನಿಂದ ಟೈಟನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 263 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಎಂದೇ ಗುರುತಿಸಲ್ಪಡುತ್ತಿರುವ ಲುವಾನ್-ಡ್ರೆ ಪ್ರಿಟೋರಿಯಸ್ ಅವರ ಈ ಸ್ಫೋಟಕ ಇನ್ನಿಂಗ್ಸ್ ಇಡೀ ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed