Last Updated:
ಸೋಷಿಯಲ್ ಮೀಡಿಯಾ ಪ್ರಭಾವಿ ಸಾವನಪ್ಪಿದ್ದಾರೆ. ಮಂಜೀತ್ ಕೌರ್ (28) ರನ್ನು ಚಂಡೀಗಢದಿಂದ ಅಪಹರಿಸಲಾಗಿದೆ ಎಂದು ಆರೋಪಿಸಲಾಗಿದ್ದು, ನಂತರ ಅವರನ್ನು ಸ್ವಲ್ಪ ದೂರಕ್ಕೆ ಕರೆದೊಯ್ದು ಮರಕ್ಕೆ ಕಟ್ಟಿ ಬೆಂಕಿ ಹಚ್ಚಲಾಗಿದೆ ಎಂದು ತಿಳಿದುಬಂದಿದೆ.
ಸಾಮಾಜಿಕ ಮಾಧ್ಯಮ ಪ್ರಭಾವಿ (Social Media Influencer) 28 ವರ್ಷದ ಮಂಜೀತ್ ಕೌರ್ ಚಿಕಿತ್ಸೆಯ ಸಮಯದಲ್ಲಿ ನಿಧನರಾಗಿದ್ದಾರೆ. ಸುಮಾರು ಎಂಟು ವಾರಗಳ ಹಿಂದೆ ಇಬ್ಬರು ಪರಿಚಯಸ್ಥರು ಆಕೆಯನ್ನು ಅಪಹರಿಸಿ, ಮೊರಿಂಡಾಗೆ ಕರೆದೊಯ್ದು, ಕ್ರೂರವಾಗಿ ಥಳಿಸಿ, ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ತೀವ್ರವಾಗಿ ಸುಟ್ಟುಹೋದ ಮಂಜೀತ್ ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (PGIMER) ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದಾರೆ.














