Last Updated:
ಬೆಂಗಳೂರು ಆಟೋ ಚಾಲಕರು ಎಲ್‌ಪಿಜಿ ದರ 95 ರೂಪಾಯಿಗೆ ಏರಿಕೆಯಿಂದ ಕನಿಷ್ಠ ಮೀಟರ್ ದರವನ್ನು 36ರಿಂದ 50ಕ್ಕೆ, ಪ್ರತಿ ಕಿಲೋಮೀಟರ್ ದರವನ್ನು 18ರಿಂದ 25ಕ್ಕೆ ಹೆಚ್ಚಿಸಲು ಮನವಿ, ಸಾರ್ವಜನಿಕ ಪ್ರತಿಕ್ರಿಯೆ ಮಿಶ್ರವಾಗಿದೆ
ಬೆಂಗಳೂರು: ರಾಜಧಾನಿ ಬೆಂಗಳೂರು ಅನ್ನೋದು ದುಬಾರಿ (Expensive) ಆಗಿ ತುಂಬಾ ಕಾಲ ಆಯ್ತು, ಆದ್ರೆ ಈಗಲೂ ಕೂಡ ತಾಪತ್ರಯದ ವಿಷಯ ಏನೆಂದರೆ ಆಟೋ ಓಡಾಟ; ಅದ್ಯಾವ ಪಾಟಿ ಚೌಕಾಶಿ (Bargain) ಮಾಡಿ ನಾವು ಆಟೋ ಚಾಲಕರ ಜೊತೆ ರಚ್ಚೆ ಹಿಡಿದು ಕಮ್ಮಿ ಮಾಡಸ್ತೀವಿ ಅನ್ನೋದು ನಿತ್ಯದ ವಿಚಾರ, ಆದರೆ ಇದು ಸ್ವಲ್ಪ ಸುಸ್ತಾಗೋ ವಿಷಯ! ಹೌದು, ಬೆಂಗಳೂರು ಸುತ್ತೋಕೆ ಆಟೋ ಹತ್ತಿದ್ರೆ ಜೇಬು ಖಾಲಿ ಖಾಲಿ ಆಗೋದು ಖಂಡಿತ ಅನ್ನೋ ದಿನಮಾನ ಹತ್ತಿರವಾಗಿದೆ.
ಯುದ್ಧದ ಕಾರಣದಿಂದ ಸಿಲಿಂಡರ್ ಬೆಲೆ ತುಂಬಾ ಹೆಚ್ಚಳವಾಗಿದ್ದು ಈ ಗ್ಯಾಸ್ ಬಿಸಿ ಚುರುಕಾಗಿಯೇ ಆಟೋ ಡ್ರೈವರ್‌ಗಳ ಕೈ ಸುಟ್ಟಿದ್ದು 95 ರೂಪಾಯಿಗೆ ಏರಿದೆ, ಅದಕ್ಕೆ ಆಟೋ ಚಾಲಕರ ಸಂಘ ಜಿಲ್ಲಾಧಿಕಾರಿಗಳಿಗೆ ಏನೆಂದು ಮನವಿ ಮಾಡಿದೆ ಗೊತ್ತಾ? ಆಟೋ ಚಾಲಕರು ಪ್ರತೀ ಕಿಲೋಮೀಟರ್ ಮೇಲೆ 25 ರೂಪಾಯಿ ಹೆಚ್ಚಳ ಹಾಗೂ ಕನಿಷ್ಠ ಪ್ರಯಾಣದರವನ್ನು 36 ರಿಂದ 50 ಕ್ಕೆ ಹೆಚ್ಚಿಸಲು ಬೇಡಿಕೆ ಸಲ್ಲಿಸಿದೆ.
ಈಗಾಗಲೇ ಕನಿಷ್ಠ ಮೀಟರ್ ದರ 36 ರೂ. ನಿಗದಿಯಾಗಿದ್ದು, ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ 18 ರೂ. ನಿಗದಿಪಡಿಸಲಾಗಿದೆ. ಎಲ್‌ಪಿಜಿ ದರ ಏರಿಕೆ ಹೊರೆ ತಪ್ಪಿಸಲು ಕನಿಷ್ಠ ದರವನ್ನು 50 ರೂ., ಪ್ರತಿ ಕಿಲೋಮೀಟರ್‌ಗೆ ಹೆಚ್ಚುವರಿ ದರವನ್ನು 25 ರೂ. ಹೆಚ್ಚಿಸುವಂತೆ ಆಟೋ ಚಾಲಕರ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ.
ಸಾರ್ವಜನಿಕರ ಪ್ರತಿಕ್ರಿಯೆ ಏನು?
ಸಾರ್ವಜನಿಕರ ಪ್ರತಿಕ್ರಿಯೆ ಮಾತ್ರ ಮಿಶ್ರವಾಗಿದೆ. ಒಂದು ಕಡೆ ದರ ಏರಿಕೆಯ ಹೊರೆ ಸ್ವಲ್ಪ ಇಳಿಸಿಕೊಳ್ಳಲು ಸ್ವಲ್ಪಮಟ್ಟಿಗೆ ದರ ಹೆಚ್ಚಳ ಸರಿ ಎಂದು ಕೆಲವರು ಒಪ್ಪಿಕೊಳ್ಳುತ್ತಾರೆ. ಮತ್ತೊಂದು ಕಡೆ, ಆ್ಯಪ್ ಆಧಾರಿತ ಸೇವೆಗಳಲ್ಲಿ ಈಗಾಗಲೇ ಹೆಚ್ಚಿನ ದರ ಇರುವುದು, ಜೊತೆಗೆ ಬಹುತೇಕ ಆಟೋ ಚಾಲಕರು ಮೀಟರ್ ದರಕ್ಕಿಂತ ಹೆಚ್ಚಿನ ಹಣ ಈಗಾಗಲೇ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ದರ ಏರಿಕೆ ಸರಿಯಲ್ಲ ಎಂದು ಕೆಲವರು ತೀಕ್ಷ್ಣವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Bangalore [Bangalore],Bangalore,Karnataka
May 13, 2026 11:02 AM IST













