Disha Madan: Cannesನಲ್ಲಿ ಮತ್ತೆ ಮಿಂಚಿದ ದಿಶಾ ಮದನ್! 80 ವರ್ಷದ ಹಳೆ ಸೀರೆಯ ಗೌನ್ ತೊಟ್ಟ ನಟಿ | | ACTPnews

disha madan looked stunning at Cannes Film Festival wearing a gown made from two 80 year old sarees


ಕಾನ್ಸ್ ಅಲ್ಲಿ ದಿಶಾ ಮಿಂಚಿಂಗ್

ಕಾನ್ಸ್ ಅಲ್ಲಿ ದಿಶಾ ಮದನ್ ಈ ಸಲವೂ ಮಿಂಚಿದ್ದಾರೆ. 80 ವರ್ಷದ ಹಳೆಯ ಎರಡು ಸೀರೆ ಒಂದು ವಿಶೇಷ ಗೌನ್ ಈ ಸಲ ತೊಟ್ಟಿದ್ದಾರೆ.
ರೆಡ್ ಕಾರ್ಪೆಟ್ ಮೇಲೆ ಶೈನ್

(ಚಿತ್ರ ಕೃಪೆ: ದಿಶಾ ಮದನ್ ಇನ್‌ಸ್ಟಾಗ್ರಾಮ್)

ಇದು ಅಷ್ಟೆ ಆಕರ್ಷಕವಾಗಿಯೇ ಇದೆ. ಎರಡು ವಿಂಟೇಜ್ ರೇಷ್ಮೆ ಸೀರೆಗಳಿಂದ ತಯಾರಿಸಿದ ಗೌನ್ ಅನ್ನೆ ಇಲ್ಲಿ ಧರಿಸಿದ್ದಾರೆ. ನಿಹಾರಿಕಾ ವಿವೇಕ್ ಡಿಸೈನ್ ಮಾಡಿರೋ ಈ ಗೌನ್ ಎಲ್ಲರ ಗಮನ ಸೆಳೆಯುತ್ತಿದೆ.

ರೆಡ್ ಕಾರ್ಪೆಟ್ ಮೇಲೆ ಶೈನ್

ದಿಶಾ ಮದನ್ ಇಲ್ಲಿಯ ರೆಡ್ ಕಾರ್ಪೆಟ್ ಮೇಲೆ ಸಖತ್ ಆಗಿಯೇ ಮಿಂಚಿದ್ದಾರೆ. ಅಷ್ಟೆ ಚೆಂದನೆ ಪೋಸ್‌ಗಳನ್ನು ಕೊಟ್ಟಿದ್ದಾರೆ. ಈ ಕ್ಷಣದ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ.

ಕನ್ನಡ ಹಾಡು…

ರೆಡ್ ಕಾರ್ಪೆಟ್‌ ಅಲ್ಲಿ ವಾಕ್ ಮಾಡಲೆಂದೇ ತೊಟ್ಟ ಈ ಗೌನ್‌ ಹಾಕಿಕೊಂಡು ಒಂದು ವಿಡಿಯೋ ಕೂಡ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅಷ್ಟೆ ಗ್ರೇಸ್‌ಫುಲ್ ಆಗಿಯೇ ಪೋಸ್‌ ಕೊಟ್ಟಿದ್ದಾರೆ. ಅಷ್ಟೆ ಕಾನ್ಫಿಡೆಂಟ್ ಆಗಿ ವಾಕ್ ಮಾಡಿದ್ದಾರೆ.

ಈ ಒಂದು ವಿಡಿಯೋದ ಹಿನ್ನೆಲೆಯಲ್ಲಿ ಕನ್ನಡ ಹಾಡನ್ನೆ ಬಳಸಿದ್ದಾರೆ. ಹಾಗಾಗಿಯೇ ಈ ವಿಡಿಯೋ ಇನ್ನಷ್ಟು ಸ್ಪೆಷಲ್ ಅನಿಸುತ್ತದೆ. ಇದರೊಟ್ಟಿಗೆ ಕಾನ್ಸ್ ಅಲ್ಲಿ ದಿಶಾ ಮದನ್ ಈಗ ಮತ್ತೆ ಮಿಂಚಿದ್ದಾರೆ.

ಕಾನ್ಸ್ ಅಲ್ಲಿ ಕಳೆದ ಸಲ

ಕಾನ್ಸ್ ಫಿಲ್ಮ್ ಫೆಸ್ಟಿವಲ್ ಅಲ್ಲಿ ಕಳೆದ ಸಲವೂ ದಿಶಾ ಮದನ್ ಮಿಂಚಿದ್ದರು. 70 ವರ್ಷದ ಹಳೆ ಸೀರೆಯಿಂದ ತಯಾರಿಸಿದ ಗೌನ್ ತೊಟ್ಟು ಎಲ್ಲರ ಗಮನ ಸೆಳೆದಿದ್ದರು.

ಈ ಗೌನ್‌ನ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ದಿಶಾ ಮದನ್ ಸ್ವತಃ ಈ ಕ್ಷಣದ ಫೋಟೋ ಮತ್ತು ವಿಡಿಯೋಗಳನ್ನ ಶೇರ್ ಮಾಡಿದ್ದರು.

disha madan looked stunning at Cannes Film Festival wearing a gown made from two 80 year old sarees

ಕಾನ್ಸ್ ಅಲ್ಲಿ ದಿಶಾ ಮಿಂಚಿಂಗ್

(ಚಿತ್ರ ಕೃಪೆ: ದಿಶಾ ಮದನ್ ಇನ್‌ಸ್ಟಾಗ್ರಾಮ್)

ಲಕ್ಷ್ಮಿ ನಿವಾಸದಲ್ಲಿ ನಟನೆ

ದಿಶಾ ಮದನ್ ಸದ್ಯ ಲಕ್ಷ್ಮಿ ನಿವಾಸ ಸೀರಿಯಲ್ ಮಾಡುತ್ತಿದ್ದಾರೆ. ಭಾವನಾ ಅನ್ನುವ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಈ ಸೀರಿಯಲ್ ಅಲ್ಲದೆ ಇವರು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೂಡ ಆಗಿದ್ದಾರೆ.

ಸೆಪ್ಟೆಂಬರ್-21 ಸಿನಿಮಾ

ಪ್ರಿಯಾಂಕಾ ಉಪೇಂದ್ರ ಅವರು ಕಾನ್ಸ್‌ ಚಿತ್ರೋತ್ಸವಕ್ಕೆ ಬಂದಿದ್ದಾರೆ. ತಮ್ಮ ಅಭಿನಯದ ಸೆಪ್ಟೆಂಬರ್-21 ಸಿನಿಮಾ ಇಲ್ಲಿ ಸೆಲೆಕ್ಟ್ ಆಗಿದೆ. ಮೇ-15 ರಂದು ಈ ಚಿತ್ರದ ಪ್ರದರ್ಶನ ಕೂಡ ಆಗಿದೆ.

ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಉಪೇಂದ್ರ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಿದ್ದಾರೆ. ಹಾಗೆ ತಮ್ಮ ಚಿತ್ರವೂ ಚಿತ್ರೋತ್ಸವದಲ್ಲಿ ಪ್ರದರ್ಶನ ಆಗಿದೆ ಅಂತಲೂ ಖುಷಿಪಟ್ಟಿದ್ದಾರೆ. ಈ ಚಿತ್ರ ಮೇ-22 ರಂದು ಬೆಳ್ಳಿ ತೆರೆ ಮೇಲೂ ಬರ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports