Bail Movie: ಶಿವಣ್ಣನ ‘ಬೇಲ್’ ಚಿತ್ರದ ಖಡಕ್ ಡೈಲಾಗ್ ಔಟ್! ಕೇಳಿದ್ರೆ ಮೈ ರೋಮಾಂಚನ! | | ACTPnews

ಶಿವಣ್ಣನ 'ಬೇಲ್' ಚಿತ್ರದ ಖಡಕ್ ಡೈಲಾಗ್ ಔಟ್; ಕೇಳಿದ್ರೆ ಮೈರೋಮಾಂಚನ.!


Last Updated:

ಬೇಲ್ ಚಿತ್ರದ ಶಿವಣ್ಣನ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ಶಿವಣ್ಣ ಏಜ್‌ಗೆ ತಕ್ಕನಾದ ಪಾತ್ರ ಮಾಡಿದ್ದಾರೆ. ಡೈಲಾಗ್ ಅಂತು ಸಖತ್ ಖಡಕ್ ಆಗಿಯೇ ಇವೆ. ಈ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಈ ಎಲ್ಲದರ ಇತರ ವಿವರ ಇಲ್ಲಿದೆ ಓದಿ.

ಶಿವಣ್ಣನ 'ಬೇಲ್' ಚಿತ್ರದ ಖಡಕ್ ಡೈಲಾಗ್ ಔಟ್; ಕೇಳಿದ್ರೆ ಮೈರೋಮಾಂಚನ.!
ಶಿವಣ್ಣನ ‘ಬೇಲ್’ ಚಿತ್ರದ ಖಡಕ್ ಡೈಲಾಗ್ ಔಟ್; ಕೇಳಿದ್ರೆ ಮೈರೋಮಾಂಚನ.!

ಡೈರೆಕ್ಟರ್ ಪವನ್ ಒಡೆಯರ್ (Pavan Wadeyar) ಕನಸಿನ ಸಿನಿಮಾದ ಫಸ್ಟ್ ಟೀಸರ್ (First Teaser) ರಿಲೀಸ್ ಆಗಿದೆ. ಶಿವಣ್ಣನ ಪಾತ್ರ ಪರಿಚಯ ಕೂಡ ಆಗಿದೆ. ಈ ಪಾತ್ರ ಅದೆಷ್ಟು ಸ್ಟ್ರಾಂಗ್ ಅನ್ನೋದರ ಸಣ್ಣ ಝಲಕ್ ಕೂಡ ರಿವೀಲ್ ಆಗಿದೆ. ಈ ಟೀಸರ್ ಅಲ್ಲಿ ಶಿವಣ್ಣನನ್ನ ಇಂಟ್ರಡ್ಯೂಸ್ ಮಾಡಿರೋ ರೀತಿ ಇಷ್ಟ ಆಗುತ್ತದೆ. ಬೆಂಗಳೂರಿನ ಮಳೆ ಮತ್ತು ಅದರಿಂದ ರಕ್ಷಿಸಿಕೊಳ್ಳಲು ಹಿಡಿದುಕೊಳ್ಳುವ ಛತ್ರಿ ಇಲ್ಲಿ ಶಿವಣ್ಣನಿಗೆ (Shivanna) ಹೊಸ ಸ್ಟೈಲ್ ತಂದುಕೊಟ್ಟಿವೆ. ಈ ಟೀಸರ್ ನೋಡಿದ್ಮೇಲೆ ಸಿನಿಮಾ ಯಾವಾಗ ಅನ್ನುವ ಪ್ರಶ್ನೆಗೆ ಟೀಸರ್ (Teaser) ಕೊನೆಯಲ್ಲಿ ಉತ್ತರ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಬೇಲ್ ಕಾಲ್ಪನಿಕ ಕಥೆ ಅಲ್ಲ..

ಶಿವರಾಜ್ ಕುಮಾರ್ ಅವರ ಬೇಲ್ ಚಿತ್ರ ಕಾಲ್ಪಿನಿಕ ಕಥೆಯ ಚಿತ್ರ ಅಲ್ಲ. ನಿಜವಾದ ಘಟನೆಗಳನ್ನೆ ಆಧರಿಸಿ ಈ ಸಿನಿಮಾ ರೆಡಿ ಆಗಿದೆ. ಈ ಸಿನಿಮಾದಲ್ಲಿ ಶಿವಣ್ಣನ ಪಾತ್ರ ಏನು ಅನ್ನೋ ಪ್ರಶ್ನೆ ಇತ್ತು.
Shiva Rajkumar Bail Movie First Teaser Release

ಚಿತ್ರ ಯಾವಾಗ ರಿಲೀಸ್

ಅದಕ್ಕೆ ಉತ್ತರ ಕೊಡುವ ಕೆಲಸವನ್ನ ಚಿತ್ರದ ಫಸ್ಟ್ ಟೀಸರ್ ಮಾಡಿದೆ. ಬೇಲ್ ಅಲ್ಲಿ ಶಿವಣ್ಣನ ಪಾತ್ರದ ಹೆಸರು ವಿಜಿ ಅನ್ನೋದೇ ಆಗಿದೆ. ರಾಬರ್ಟ್ ಅನ್ನೋ ವ್ಯಕ್ತಿ ಮಾಡುವ ಕಾಲ್‌ನಿಂದಲೇ ಇದು ಗೊತ್ತಾಗುತ್ತದೆ.

ನೀ ಹೆಚ್ಚಿದ ಬೆಂಕಿ

ವಿಜಿ..ವಿಜಿ ..ವಿಜಿ…ಅದೇನ್ ಬೆಂಕಿ ಹಚ್ಚಿದಿಯೋ ? ನೀನು ಹಚ್ಚಿದ ಬೆಂಕಿ ಇಡೀ ಊರಲ್ಲ. ಇಡೀ ದೇಶವನ್ನ ಸುಡುತ್ತಿದೆ. ಇದಕ್ಕೆ ಶಿವಣ್ಣ ಹೇಳ್ತಾರೆ. ವ್ಹಾವ್ ಸೋ ನೈಸ್ ಅಂತಲೇ ರಿಯಾಕ್ಟ್ ಮಾಡ್ತಾರೆ.

ಕೆಲವು ಸ್ವಭಾವಕ್ಕೆ…

ಇಷ್ಟೆಲ್ಲ ಮಾಡೋಕೆ ನಿನಗೆ ಎಲ್ಲಿಂದ ಧೈರ್ಯ ಬರ್ತದೋ ಅಂತ ರಾಬರ್ಟ್ ಕೇಳ್ತಾರೆ. ಆಗ ಶಿವಣ್ಣ ಹೇಳ್ತಾರೆ. ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವತ್ತೂ ಆಗೋದಿಲ್ಲ ಅಂತಲೇ ಹೇಳ್ತಾರೆ.

ಇದನ್ನ ಬಿಡಿಸಿ ಹೇಳೋದಾದ್ರೆ, ನನ್ನ ಸ್ವಭಾವವೇ ಆಗಿದೆ. ಇದಕ್ಕೆ ಧೈರ್ಯ ಜಾಸ್ತಿ ಅಂತಲೇ ಹೇಳ್ತಾರೆ ನೋಡಿ. ಈ ಒಂದು ಖಡಕ್ ಡೈಲಾಗ್ ಆದ್ಮೇಲೆ ಶಿವಣ್ಣನ ಪಾತ್ರದ ಲುಕ್ ರಿವೀಲ್ ಆಗುತ್ತದೆ.

Shiva Rajkumar Bail Movie First Teaser Release

ಶಿವಣ್ಣನ ಜತೆ ಡಾಗ್
ಶಿವಣ್ಣನ ಜತೆ ಡಾಗ್

ಈ ಬೇಲ್ ಚಿತ್ರದಲ್ಲಿ ಶಿವಣ್ಣನ ಜೊತೆಗೆ ಡಾಗ್ ಕೂಡ ಇದೆ. ಈ ಡಾಗ್ ಇಲ್ಲಿ ವಿಶೇಷ ಪಾತ್ರವನ್ನ ನಿರ್ವಹಿಸಿದಂತೆ ಇದೆ. ಆದರೆ, ಅದು ಏನು ಅನ್ನೋದು ಹೋಗ್ತಾ ಹೋಗ್ತಾ ಗೊತ್ತಾಗುತ್ತದೆ ಅನಿಸುತ್ತದೆ.

ಇದನ್ನೂ ಓದಿ: Radhika Pandit: ರಾಧಿಕಾ ಫೋನಲ್ಲಿ ಯಶ್ ವಿಡಿಯೋ ಕಾಲ್! ಫ್ಯಾನ್ಸ್ ಖುಷ್

ಆ ರೀತಿಯ ಈ ಚಿತ್ರವನ್ನ ಡೈರೆಕ್ಟರ್ ಪವನ್ ಒಡೆಯರ್ ಡೈರೆಕ್ಷನ್ ಮಾಡಿದ್ದಾರೆ. ಈ ಮೂಲಕ ಪವನ್ ಒಡೆಯರ್ ಅವರ ಬಹು ದಿನಗಳ ಕನಸು ಈಡೇರಿದೆ. ಶಿವಣ್ಣನ ಜೊತೆಗೆ ಕೆಲಸ ಮಾಡ್ಬೇಕು ಅನ್ನುವ ಇವರ ಆಸೆ ಈಗ ಚಿತ್ರ ರೂಪ ಪಡೆದಿದೆ. ಹಾಗೆ ಕೆವಿಎನ್ ಸಂಸ್ಥೆ ಈ ಚಿತ್ರವನ್ನ ನಿರ್ಮಿಸಿದೆ.

ಚಿತ್ರ ಯಾವಾಗ ರಿಲೀಸ್

ಈ ಚಿತ್ರದಲ್ಲಿ ಸಾಯಿ ಕುಮಾರ್ ಇದ್ದಾರೆ. ಮಲೆಯಾಳಂ ನಟ ಜಯರಾಮ್ ನಟಿಸಿದ್ದಾರೆ. ಶಿವಣ್ಣ ಇಲ್ಲಿ ಲೀಡ್ ರೋಲ್ ಅಲ್ಲಿದ್ದಾರೆ. ಏಜ್‌ಗೆ ತಕ್ಕನಾದ ಪಾತ್ರವನ್ನೆ ಇಲ್ಲಿ ಮಾಡಿದ್ದಾರೆ.

ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ವೈದ್ಯ ಎಸ್. ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಚಿತ್ರದ ಫಸ್ಟ್ ಟೀಸರ್ ಕೊನೆಯಲ್ಲಿ ಈ ವಿಷಯ ರಿವೀಲ್ ಆಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports