Last Updated:
ದೊಡ್ಡ ಸಿನಿಮಾಗಳಲ್ಲಿ ಅವಕಾಶ ಹೆಚ್ಚಾದಂತೆ ರುಕ್ಮಿಣಿ ವಸಂತ್ ಸಂಭಾವನೆಯ ಕುರಿತೂ ಚರ್ಚೆ ನಡೆಯುತ್ತಿದೆ. ಟಾಕ್ಸಿಕ್ ಸಿನಿಮಾದ ಮೆಲಿಸ್ಸಾ ಪಾತ್ರಕ್ಕಾಗಿ ಅವರು ಸುಮಾರು 3 ಕೋಟಿ ರೂ.ಗಳಿಂದ 5 ಕೋಟಿ ರೂ.ವರೆಗೆ ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ಹೇಳುತ್ತವೆ.
ರುಕ್ಮಿಣಿ ವಸಂತ್ಗಿಂತ (Rukmini Vasanth) ಕನಕವತಿ ಎಂದೇ ಪರಿಚಯವಾಗಿರುವ ಈ ಚೆಲುವೆ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಕಾಂತಾರ: ಚಾಪ್ಟರ್ 1 ಸಿನಿಮಾದ ಕನಕವತಿ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ರುಕ್ಮಿಣಿ ವಸಂತ್, ಸದ್ಯ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿನ ಮೆಲಿಸ್ಸಾ ಪಾತ್ರದ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಸಹಜ ಸೌಂದರ್ಯ, ವಿಭಿನ್ನ ಪಾತ್ರಗಳ ಆಯ್ಕೆ ಮತ್ತು ಸಾಲು ಸಾಲು ದೊಡ್ಡ ಸಿನಿಮಾಗಳ ಅವಕಾಶದಿಂದಾಗಿ ರುಕ್ಮಿಣಿ ವಸಂತ್ ವೃತ್ತಿಜೀವನ ಹೊಸ ಹಂತಕ್ಕೆ ಕಾಲಿಟ್ಟಿದೆ.














