Rohit-Kohli: ನನ್ನ ಪರಿಸ್ಥಿತಿ ಅವರಿಗೆ ಬೇಡ, ರೋಹಿತ್​-ಕೊಹ್ಲಿ ನಡೆಸಿಕೊಳ್ಳುತ್ತಿರುವ ರೀತಿಗೆ ಯುವಿ ಆಕ್ರೋಶ! ಬಿಸಿಸಿಐ-ಗಂಭೀರ್​ಗೆ ಮಹತ್ವದ ಸಲಹೆ | ಕ್ರೀಡಾ ಸುದ್ದಿ | ACTPnews

ಯುವರಾಜ್ ಸಿಂಗ್- ರೋಹಿತ್ ಮತ್ತು ಕೊಹ್ಲಿ


Last Updated:


ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ನಿವೃತ್ತಿಯ ಬಗ್ಗೆ ಕಳೆದ ಮೂರು ದಿನಗಳಿಂದ ವ್ಯಾಪಕವಾದ ಊಹಾಪೋಹಗಳು ಹರಡಿವೆ. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವೇ ಅವರ ಅಂತಿಮ ಪಂದ್ಯ ಎಂಬ ವರದಿಗಳು ಹರಡಿದ್ದವು.

ಯುವರಾಜ್ ಸಿಂಗ್- ರೋಹಿತ್ ಮತ್ತು ಕೊಹ್ಲಿ
ಯುವರಾಜ್ ಸಿಂಗ್- ರೋಹಿತ್ ಮತ್ತು ಕೊಹ್ಲಿ

ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Rohit Sharma and Virat Kohli) ಅವರ ಭವಿಷ್ಯದ ಬಗ್ಗೆ ತೀವ್ರ ಊಹಾಪೋಹಗಳು ಹರಡುತ್ತಿವೆ. ಇದರ ಮಧ್ಯೆ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ (Yuvraj Singh) ಕೆಲವು ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ. ಯುವ ಆಟಗಾರರಿರುವ ತಂಡದಿಂದ ವಿಶ್ವಕಪ್ (World Cup) ಗೆಲ್ಲಲು ಸಾಧ್ಯವಿಲ್ಲ ಎಂದು ಅವರು ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಅದೇ ರೀತಿ ಸಂಪೂರ್ಣವಾಗಿ ಹಿರಿಯರನ್ನು ಒಳಗೊಂಡ ತಂಡದಿಂದ ಗೆಲುವು ಸಾಧಿಸಲು ಸಾಧ್ಯವಿಲ್ಲ. ಒಂದು ತಂಡ ಯುವಕರು ಮತ್ತು ಅನುಭವದಿಂದ ಪೂರಕವಾದಾಗ ಮಾತ್ರ ಅಪೇಕ್ಷಿತ ಫಲಿತಾಂಶಗಳು ಬರುತ್ತವೆ ಎಂದು ಯುವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೋಹಿತ್​ ನಿವೃತ್ತಿ ಬಗ್ಗೆ ಹರಡಿದ್ದ ಊಹಾಪೋಹ

ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ನಿವೃತ್ತಿಯ ಬಗ್ಗೆ ಕಳೆದ ಮೂರು ದಿನಗಳಿಂದ ವ್ಯಾಪಕವಾದ ಊಹಾಪೋಹಗಳು ಹರಡಿವೆ. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವೇ ಅವರ ಅಂತಿಮ ಪಂದ್ಯ ಎಂಬ ವರದಿಗಳು ಹರಡಿದ್ದವು. ಆಯ್ಕೆದಾರರು 2027ರ ಏಕದಿನ ವಿಶ್ವಕಪ್‌ಗಾಗಿ ಯೋಜನೆಗಳಿಂದ ರೋಹಿತ್ ಅವರನ್ನು ಹೊರಗಿಟ್ಟಿದ್ದಾರೆ ಮತ್ತು ಈ ನಿರ್ಧಾರವನ್ನು ಅವರಿಗೆ ಈಗಾಗಲೇ ತಿಳಿಸಿದ್ದಾರೆ ಎಂದು ವದಂತಿಗಳಿದ್ದವು. ಆದರೆ ರೋಹಿತ್ ಶರ್ಮಾ ಶತಕ ಗಳಿಸುವ ಮೂಲಕ ಈ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಅವರು ಇನ್ನೂ ಹೆಚ್ಚಿನ ಸಮಯ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ನನಗೂ ಇದೇ ಪರಿಸ್ಥಿತಿ ಎದುರಾಗಿತ್ತು

‘ಜಿಯೋಸ್ಟಾರ್’ ಕಾರ್ಯಕ್ರಮದಲ್ಲಿ ಮಾತನಾಡಿದ ಯುವರಾಜ್ ಸಿಂಗ್, ಮುಖ್ಯ ಕೋಚ್ ಗೌತಮ್ ಗಂಭೀರ್​ಗೆ ಹಲವಾರು ಸಲಹೆಗಳನ್ನು ನೀಡಿದ್ದಾರೆ. ನಾನು ಒಮ್ಮೆ ರೋಹಿತ್ ಮತ್ತು ವಿರಾಟ್ ಕೊಹ್ಲಿ ಈಗ ಇದ್ದ ಪರಿಸ್ಥಿತಿಯಲ್ಲೇ ಇದ್ದೆ.  ನನಗೆ ಅವಕಾಶ ಸಿಗುತ್ತದೋ, ಇಲ್ಲವೋ ಎನ್ನುವ ಗೊಂದಲದಲ್ಲೇ ಹಲವು ದಿನಗಳನ್ನ ಕಳೆದಿದ್ದೆ.  ಆದ್ದರಿಂದ ಅವರು ಆಡಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ನಾವು ತೀರ್ಪು ನೀಡುವುದು ಸರಿಯಲ್ಲ. ಆ ವಿಷಯವನ್ನು ತಂಡದ ಮ್ಯಾನೇಜ್​ಮೆಂಟ್, ಕೋಚ್​ಗಳು ಮತ್ತು ಆಯ್ಕೆದಾರರಿಗೆ ಬಿಡಬೇಕು.

ತಂಡದಲ್ಲಿ ಯಾರು ಆಡುತ್ತಾರೆ ಎಂಬುದನ್ನು ನಿರ್ಧರಿಸುವುದು ತಂಡದ ನಿರ್ವಹಣೆಯ ಜವಾಬ್ದಾರಿ. ಆದರೆ ನಾವು ಯುವ ಆಟಗಾರರೊಂದಿಗೆ ಹೋಗಿ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ, ನಾವು ಸಂಪೂರ್ಣವಾಗಿ ಹಿರಿಯ ಆಟಗಾರರನ್ನು ಅವಲಂಬಿಸಲು ಸಾಧ್ಯವಿಲ್ಲ. ತಂಡಕ್ಕೆ ಅನುಭವ ಮತ್ತು ಯುವಕರ ಮಿಶ್ರಣದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಇಬ್ಬರಿಗೂ ಅವರ ಭವಿಷ್ಯದ ಬಗ್ಗೆ ಸ್ಪಷ್ಟನೆ ನೀಡಿ

2027ರ ಏಕದಿನ ವಿಶ್ವಕಪ್‌ಗೆ ಕೊಹ್ಲಿ ಮತ್ತು ರೋಹಿತ್ ಅವರನ್ನು ಅತ್ಯಗತ್ಯವೆಂದು ಪರಿಗಣಿಸಿದರೆ, ಅವರಲ್ಲಿ ಯಾವುದೇ ಅನುಮಾನಗಳು ಹುಟ್ಟಿಕೊಳ್ಳದಂತೆ ಈಗಲೇ ಅವರಿಗೆ ತಿಳಿಸಬೇಕು.’ನೀವು ವಿಶ್ವಕಪ್ ಯೋಜನೆಗಳ ಭಾಗವಾಗಿದ್ದೀರಿ, ಚಿಂತಿಸದೆ ಆಟವಾಡಿ. ನಿಮಗೆ ಆಡಳಿತ ಮಂಡಳಿಯ ಸಂಪೂರ್ಣ ಬೆಂಬಲವಿದೆ. ಈ ಸರಣಿಯಲ್ಲಿ ನೀವು ವಿಫಲವಾದರೂ, ನೀವು ತಂಡದಲ್ಲಿ ಉಳಿಯುತ್ತೀರಿ. ನಿಮ್ಮ ಮೇಲೆ ಯಾವುದೇ ಒತ್ತಡವಿಲ್ಲ ಎಂದು ತಿಳಿಸಬೇಕು.

ಇದಕ್ಕೆ ವಿರುದ್ಧವಾಗಿ, ಅವರಿಬ್ಬರು ನಿಮ್ಮ ಯೋಜನೆಗಳಲ್ಲಿ ಸೇರದಿದ್ದರೆ, ಕಷ್ಟವಾದರೂ ಸಹ ನೀವು ಅವರಿಗೆ ಈಗಲೇ ನೇರವಾಗಿ ಹೇಳಬೇಕು. ನೀವು ಆ ಮಾತನ್ನ ನೇರವಾಗಿ ಹೇಳಿದರೆ ಅವರಿಗೆ ಅರ್ಥವಾಗುತ್ತದೆ” ಎಂದು ಯುವರಾಜ್ ಸಿಂಗ್ ಮ್ಯಾನೇಜ್​ಮೆಂಟ್​​ಗೆ ತಿಳಿಸಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Rohit-Kohli: ನನ್ನ ಪರಿಸ್ಥಿತಿ ಅವರಿಗೆ ಬೇಡ, ರೋಹಿತ್​-ಕೊಹ್ಲಿ ನಡೆಸಿಕೊಳ್ಳುತ್ತಿರುವ ರೀತಿಗೆ ಯುವಿ ಆಕ್ರೋಶ! ಬಿಸಿಸಿಐ-ಗಂಭೀರ್​ಗೆ ಮಹತ್ವದ ಸಲಹೆ



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports