School Holiday: ಇನ್ನೂ 3 ದಿನ ಶಾಲೆಗಳಿಗೆ ರಜೆ ಮುಂದುವರಿಕೆ! ಈ ರಾಜ್ಯದ ಜನರಿಗೆ ಮಳೆ ಬಗ್ಗೆ ಬಿಗ್ ಅಲರ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ


Last Updated:

School Holiday: ಮಳೆ ಅಬ್ಬರ ಮುಂದುವರೆದಿದೆ. ಭಾರೀ ಮಳೆಯ ಮುನ್ಸೂಚನೆಯೊಂದಿಗೆ ಪ್ರತಿಕೂಲ ಹವಾಮಾನ ಸ್ಥಿತಿ ಉಂಟಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಜುಲೈ 20ರಿಂದ 23ರವರೆಗೆ ಭಾರೀ ಮಳೆಯಾಗಲಿದೆ. ಹೀಗಾಗಿ ಮತ್ತೆ 3 ದಿನ ಈ ರಾಜ್ಯಾದಲ್ಲಿ ಶಾಲೆ, ಕಾಲೇಜ್‌ಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಶ್ರೀನಗರ, ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ಅಬ್ಬರ (Heavy rains) ಮುಂದುವರೆದಿದೆ. ಭಾರೀ ಮಳೆಯ ಮುನ್ಸೂಚನೆಯೊಂದಿಗೆ ಪ್ರತಿಕೂಲ ಹವಾಮಾನ ಸ್ಥಿತಿ ಉಂಟಾಗಿದೆ. ಹವಾಮಾನ ಇಲಾಖೆಯ (Meteorological Department) ಪ್ರಕಾರ, ಜುಲೈ 20ರಿಂದ 23ರವರೆಗೆ ಅರಬ್ಬಿ ಸಮುದ್ರ (Arabian Sea) ಮತ್ತು ಬಂಗಾಳ ಕೊಲ್ಲಿಯಿಂದ (Bay of Bengal) ತೇವಾಂಶದ ಪ್ರವೇಶ ಹಾಗೂ ಮಾನ್ಸೂನ್ ಟ್ರೋಫ್‌ನ ಪಶ್ಚಿಮ ಭಾಗ ಜಮ್ಮುವಿನತ್ತ ಸ್ಥಳಾಂತರಗೊಂಡಿರುವುದರಿಂದ ಭಾರೀ ಮಳೆ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಮತ್ತೆ 3 ದಿನ ರಾಜ್ಯಾದ್ಯಂತ ಶಾಲೆ, ಕಾಲೇಜ್‌ಗಳಿಗೆ ರಜೆ (School Collage Holiday) ವಿಸ್ತರಣೆ ಮಾಡಲಾಗಿದೆ.

ಮಳೆಯಿಂದಾಗಿ ಭಾರೀ ಅನಾಹುತ

ಭಾರೀ ಮಳೆಯಿಂದಾಗಿ ಪಿರ್ ಪಂಜಾಲ್ ಶ್ರೇಣಿ, ಅನಂತನಾಗ್, ಪಹಲ್ಗಾಮ್, ಕುಲ್ಗಾಮ್, ಶೋಪಿಯನ್, ಗುಲ್ಮಾರ್ಗ್, ಸೋನಮಾರ್ಗ್-ಜೋಜಿಲಾ ಅಕ್ಷ, ಬಂದಿಪೋರಾ-ರಝದಾನ್ ಪಾಸ್ ಮತ್ತು ಕುಪ್ವಾರಾ-ಸಧನಾ ಪಾಸ್ ಸೇರಿದಂತೆ ಕಾಶ್ಮೀರದ ಎತ್ತರ ಪ್ರದೇಶಗಳಲ್ಲಿ ಭೂಕುಸಿತ, ಮಣ್ಣಿನ ಕುಸಿತ, ಕಲ್ಲು ಬೀಳುವಿಕೆ ಮತ್ತು ಫ್ಲ್ಯಾಶ್ ಫ್ಲಡ್‌ಗಳು ಸಂಭವಿಸುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ.

ಸುರಕ್ಷಿತ ಕ್ರಮ ಕೈಗೊಳ್ಳಲು ಸರ್ಕಾರ ಸೂಚನೆ

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾರಿಗೆ ವ್ಯವಸ್ಥೆಗೆ ತೀವ್ರ ಅಡಚಣೆ ಉಂಟಾಗಬಹುದು ಎಂದು ಮೆಟ್ ಅಡ್ವೈಸರಿ ಎಚ್ಚರಿಕೆ ನೀಡಿದೆ. ವಿದ್ಯಾರ್ಥಿಗಳು, ಪ್ರಯಾಣಿಕರು ಮತ್ತು ಸ್ಥಳೀಯರ ಸುರಕ್ಷತೆಗಾಗಿ ಸರ್ಕಾರ ತಕ್ಷಣದ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ 3 ದಿನಗಳ ರಜೆ ವಿಸ್ತರಣೆಯಾಗಿದೆ.

3 ದಿನ ಶಾಲೆಗಳಿಗೆ ರಜೆ ವಿಸ್ತರಣೆ

ಕಾಶ್ಮೀರ ವಿಭಾಗ ಮತ್ತು ಜಮ್ಮು ವಿಭಾಗದ ಚಳಿಗಾಲದ ವಲಯಗಳಲ್ಲಿನ ಎಲ್ಲಾ ಸರ್ಕಾರಿ ಹಾಗೂ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಬೇಸಿಗೆ ರಜೆಯನ್ನು ಮೂಲತಃ ಜುಲೈ 19ರಂದು ಕೊನೆಗೊಳ್ಳುವುದು ಎಂದಿತ್ತು. ಆದರೆ ಪ್ರಚಲಿತ ಹವಾಮಾನ ಪರಿಸ್ಥಿತಿಗಳನ್ನು ಗಮನಿಸಿ, ಶಾಲಾ ಶಿಕ್ಷಣ ಸಚಿವೆ ಸಕೀನಾ ಇಟೂ ಅವರು ಜುಲೈ 22, 2026ರವರೆಗೆ ಅಂದರೆ ಬುಧವಾರದವರೆಗೆ ರಜೆ ವಿಸ್ತರಿಸುವ ನಿರ್ಧಾರ ಘೋಷಿಸಿದ್ದಾರೆ.

ಜುಲೈ 3ರಿಂದ ಶಾಲೆಗಳು ಓಪನ್

ಶಾಲೆಗಳು ಜುಲೈ 23ರಂದು ಮರುಪ್ರಾರಂಭವಾಗುತ್ತವೆ. ಈ ಮೂರು ದಿನಗಳು ಅಂದರೆ ಜುಲೈ 20, 21, 22 ರಜೆ ವಿಸ್ತರಣೆಯು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗಿದೆ ಅಂತ ಕಾಶ್ಮೀರ ಶಿಕ್ಷಣ ಸಚಿವರು ಟ್ವೀಟ್ ಮಾಡಿದ್ದಾರೆ. ಪ್ರಚಲಿತ ಹವಾಮಾನ ಪರಿಸ್ಥಿತಿಗಳನ್ನು ಗಮನಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಮರನಾಥ ಯಾತ್ರೆಗೆ ತಾತ್ಕಾಲಿಕ ನಿಷೇಧ

ಇನ್ನು ಇದರೊಂದಿಗೆ ಅಮರನಾಥ ಯಾತ್ರೆಯನ್ನು ಜುಲೈ 19ರಿಂದ ಪಹಲ್ಗಾಮ್ ಮತ್ತು ಬಲ್ತಾಲ್ ಮಾರ್ಗಗಳಿಂದ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಯಾತ್ರಿಗಳ ಸುರಕ್ಷತೆಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರಿ ವಕ್ತಾರರು ತಿಳಿಸಿದ್ದಾರೆ. ಮಳೆ ನಿಂತ ನಂತರ ಮತ್ತು ಮಾರ್ಗಗಳ ಸುರಕ್ಷತೆ ಖಚಿತಪಡಿಸಿದ ನಂತರ ಯಾತ್ರೆ ಪುನರಾರಂಭವಾಗುವ ಸಾಧ್ಯತೆ ಇದೆ.

ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು

ಒಟ್ಟಾರೆಯಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಭಾರೀ ಮಳೆಯ ಮುನ್ಸೂಚನೆಯು ಪ್ರಕೃತಿ ವಿಕೋಪಗಳ ಅಪಾಯವನ್ನು ಹೆಚ್ಚಿಸಿದೆ. ಸರ್ಕಾರ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ ತಕ್ಷಣದ ಕ್ರಮಗಳನ್ನು ಜಾರಿಗೆ ತಂದಿದೆ. ನಿವಾಸಿಗಳು ಮತ್ತು ಪ್ರಯಾಣಿಕರು ಹವಾಮಾನ ಎಚ್ಚರಿಕೆಗಳನ್ನು ಪಾಲಿಸಿ, ಅಗತ್ಯವಿದ್ದಲ್ಲಿ ಮನೆಯಲ್ಲೇ ಇರುವುದು ಸೂಕ್ತ ಅಂತ ತಜ್ಞರು ಎಚ್ಚರಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed