Last Updated:
ಸ್ವತಃ ರಮ್ಯಾ ಮದುವೆ ಕುರಿತ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸ್ಯಾಂಡಲ್ವುಡ್ನ (Sandalwood) ಮೋಹಕ ತಾರೆ ರಮ್ಯಾ( Ramya) ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳಲ್ಲಿ ಸದಾ ಕುತೂಹಲ ಇದ್ದೇ ಇದೆ. ಅದರಲ್ಲೂ ರಮ್ಯಾ ಮದುವೆ (Marriage) ವಿಚಾರ ಆಗಾಗ್ಗೆ ಚರ್ಚೆಗೆ ಬರುತ್ತಿರುತ್ತದೆ. ರಮ್ಯಾ ಯಾವಾಗ ಮದುವೆಯಾಗುತ್ತಾರೆ, ಅವರ ಜೀವನ ಸಂಗಾತಿ ಯಾರು ಎಂಬ ಪ್ರಶ್ನೆಗಳಿಗೆ ಅಭಿಮಾನಿಗಳು ಹಲವು ವರ್ಷಗಳಿಂದ ಉತ್ತರ ಹುಡುಕುತ್ತಿದ್ದಾರೆ. ಇದೀಗ ಸ್ವತಃ ರಮ್ಯಾ ಮದುವೆ ಕುರಿತ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.














