Nitesh Tiwari: “ರಾವಣ-ಜಟಾಯು ಯುದ್ಧ” ಹೇಗಿರುತ್ತೆ? ನಿತೇಶ್ ಬಿಚ್ಚಿಟ್ರು ಒಂದಷ್ಟು ಸೀಕ್ರೆಟ್! | | ACTPnews

ಈ ರಾಮಾಯಣದಲ್ಲಿ ರಾವಣ ಮತ್ತು ಜಟಾಯು ಯುದ್ಧ ಹೇಗಿರುತ್ತೆ: ನಿತೇಶ್ ಬಿಚ್ಚಿಟ್ರು ಸೀಕ್ರೆಟ್!


Last Updated:

ರಾಮಾಯಣ ಚಿತ್ರದ ಡೈರೆಕ್ಟರ್ ನಿತೇಶ್ ತಿವಾರಿ ಒಂದಷ್ಟು ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಇಡೀ ರಾಮಾಯಣ ಚಿತ್ರದಲ್ಲಿ ಅದೆಷ್ಟು ವಿಶೇಷತೆಗಳು ಇವೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ಈ ರಾಮಾಯಣದಲ್ಲಿ ರಾವಣ ಮತ್ತು ಜಟಾಯು ಯುದ್ಧ ಹೇಗಿರುತ್ತೆ: ನಿತೇಶ್ ಬಿಚ್ಚಿಟ್ರು ಸೀಕ್ರೆಟ್!
ಈ ರಾಮಾಯಣದಲ್ಲಿ ರಾವಣ ಮತ್ತು ಜಟಾಯು ಯುದ್ಧ ಹೇಗಿರುತ್ತೆ: ನಿತೇಶ್ ಬಿಚ್ಚಿಟ್ರು ಸೀಕ್ರೆಟ್!

ಡೈರೆಕ್ಟರ್ ನಿತೇಶ್ ತಿವಾರಿ (Nitesh Tiwari) ಒಂದು ಒಳ್ಳೆ ಮಾತು ಹೇಳಿದ್ದಾರೆ. ರಾಮಾಯಣವನ್ನ (Ramayana) ನಾವು ಆಯ್ಕೆ ಮಾಡೋದಲ್ಲ. ರಾಮಾಯಣವೇ ನಮ್ಮನ್ನ ಆಯ್ಕೆ ಮಾಡಿಕೊಳ್ಳುತ್ತದೆ. ಹಾಗೆ ಈ ರಾಮಾಯಣದ ಕತೆ ನನ್ನ ಆಯ್ಕೆ ಮಾಡಿಕೊಂಡಿದೆ. ಇದು ನಿಜಕ್ಕೂ ನನ್ನ ಅದೃಷ್ಟವೇ ಆಗಿದೆ. ಈ ಚಿತ್ರದ ಪಯಣ ಚಿಕ್ಕದೇನೂ ಇಲ್ಲ. ಸುದೀರ್ಘವಾಗಿಯೇ ಇದೆ. ಈ ಒಂದು ಪಯಣದಲ್ಲಿ ರಾಮನ (Rama) ಕುರಿತು ಸಾಕಷ್ಟು ತಿಳಿದುಕೊಂಡಿದ್ದೇನೆ. ರಾಮಾಯಣ ಕಾಲ್ಪನಿಕ ಕತೆ ಅಲ್ಲ. ಇದು ಈ ಹಿಂದೆ ಘಟಿಸಿತ್ತು. ಅದನ್ನೆ ನಾನು ನನ್ನ ರೀತಿಯಲ್ಲಿ ಬರೆಯುತ್ತಿದ್ದೇನೆ ಅಂತ ವಾಲ್ಮಿಕಿ (Valmiki) ಹೇಳಿದ್ದಾರೆ. ಇದೇ ರಾಮಾಯಣವನ್ನ ನಾವು ಇನ್ನಷ್ಟು ಪರಿಣಾಮಕಾರಿ ಆಗಿಯೇ ತೋರಿಸುತ್ತಿದ್ದೇವೆ ಅಂತಲೇ ಈ ರಾಮಾಯಣ ಚಿತ್ರದ ಡೈರೆಕ್ಟರ್ ನಿತೇಶ್ ತಿವಾರಿ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ರಾವಣ-ಜಟಾಯು ಯುದ್ಧ ಹೇಗೆ ಇರ್ತದೆ

ರಾಮಾಯಣದಲ್ಲಿ ರಾವಣ ಹಾಗೂ ಜಟಾಯು ಯುದ್ಧವು ಬರುತ್ತದೆ. ಆದರೆ, ಈ ಯುದ್ಧ ತೆರೆ ಮೇಲೆ ಇನ್ನು ಅದೆಷ್ಟೋ ಪರಿಣಾಮಕಾರಿ ಆಗಿಯೇ ಬರುತ್ತದೆ.
nitesh tiwari reveals ramayana movie secrets

10 ವರ್ಷದಿಂದಲೂ ಕೆಲಸ

ಅದರ ಕಲ್ಪನೆಯ ಒಂದು ಸಣ್ಣ ತುಣಕು ನಿಮಗೆ ಈಗಾಗಲೇ ಚಿತ್ರದ ಟ್ರೈಲರ್ ಅಲ್ಲಿಯೇ ಸಿಕ್ಕಿದೆ. ಹಾಗೆ ಈ ಒಂದು ರಾಮಾಯಣದಲ್ಲಿ ಈ ರೀತಿಯ ಸುಮಾರು ವಿಚಾರಗಳು ಇವೆ.

ವಾಲೀ-ಸುಗ್ರೀವ ಹೇಗೆ ಕಾಣಿಸ್ತಾರೆ

ರಾಮಾಯಣ ವಾಲೀ ಹಾಗೂ ಸುಗ್ರೀವ ಹೇಗೆ ಕಾಣಿಸುತ್ತಾರೆ. ಇದರ ಕಲ್ಪನೆ ಕೂಡ ಒಂದಷ್ಟು ಇದೆ. ಆದರೆ, ಈ ರಾಮಾಯಣದಲ್ಲಿ ಅವರನ್ನ ತುಂಬಾನೆ ವಿಭಿನ್ನವಾಗಿಯೇ ತೋರಿಸಿದ್ದೇವೆ.

ರಾಮಾಯಣ ಚಿತ್ರದ ಸುದೀರ್ಘ ಪಯಣ

ರಾಮಾಯಣ ಚಿತ್ರದ ಪಯಣ ಸುಮ್ನೆ ಏನೂ ಅಲ್ಲ. ಇದರ ಪಯಣ ಸುದೀರ್ಘವಾಗಿಯೇ ಇದೆ. ರಾಮಾಯಣವನ್ನ ನಾವು ಆಯ್ಕೆ ಮಾಡೋದಲ್ಲ. ರಾಮಾಯಣವೇ ನಮ್ಮನ್ನ ಆಯ್ಕೆ ಮಾಡಿಕೊಳ್ಳುತ್ತದೆ.

ಹಾಗೆ ಈ ವಿಚಾರದಲ್ಲಿ ನಾನು ಅದೃಷ್ಟವಂತನೇ ಆಗಿದ್ದೇನೆ. ರಾಮಾಯಣ ಕಾಲ್ಪನಿಕ ಕತೆ ಅಲ್ವೇ ಅಲ್ಲ. ಇದು ಘಟಿಸಿತ್ತು ಅಂತ ವಾಲ್ಮೀಕಿ ಬರೆದಿದ್ದಾರೆ. ಈ ರಾಮಾಯಾಣವನ್ನ ನಾನು ಬರೆದಿದ್ದೇನೆ. ಆದರೆ, ಇದು ಈ ಹಿಂದೆ ನಡೆದಿತ್ತು ಅನ್ನೋದನ್ನು ಹೇಳಿದ್ದಾರೆ ಅನ್ನೋದುನ್ನ ನಿತೇಶ್ ತಿವಾರಿ ಇಲ್ಲಿ ಹೇಳಿಕೊಂಡಿದ್ದಾರೆ.

nitesh tiwari reveals ramayana movie secrets

ರಾಮ-ಸೀತೆಯನ್ನ ಕಂಡೆ
ರಾಮ-ಸೀತೆಯನ್ನ ಕಂಡೆ

ನಮ್ಮ ಚಿತ್ರದ ರಣಬೀರ್ ಕಪೂರ್ ಅವರ ಕಣ್ಣಲ್ಲಿ ಆ ಪ್ರಾಮಾಣಿಕತೆ ಕಂಡಿದ್ದೇನೆ. ಸಾಯಿ ಪಲ್ಲವಿಯಲ್ಲೂ ಅದನ್ನೆ ಕಂಡಿದ್ದೇನೆ. ಇವರನ್ನ ನಾನು ರಾಮ ಮತ್ತು ಸೀತೆಯಾಗಿಯೇ ನೋಡುತ್ತೇನೆ.

10 ವರ್ಷದಿಂದಲೂ ಕೆಲಸ

ರಾಮಾಯಣ ಚಿತ್ರಕ್ಕಾಗಿಯೇ ನಿರ್ಮಾಪಕ ನಿಮಿತ್ ಮಲ್ಹೋತ್ರಾ ಹಾಗೂ ನಿತೇಶ್ ತಿವಾರಿ ಅವರು ಕಳೆದ 10 ವರ್ಷದಿಂದಲೂ ಕೆಲಸ ಮಾಡುತ್ತಿದ್ದಾರೆ.

ಆದರೆ, ನನಗೆ ಇದು ಕೇವಲ 3 ವರ್ಷದ ಪಯಣ ಅಂತ ಸಾಯಿ ಪಲ್ಲವಿ ಹೇಳಿದ್ದಾರೆ. ಹಿಂದಿ ಭಾಷೆಯಲ್ಲಿಯೇ ಮಾತನಾಡೋಕೆ ಪ್ರಯತ್ನ ಮಾಡಿದ ಸಾಯಿ ಪಲ್ಲವಿ, ಪ್ರತಿ ದಿನವೂ ತಾಯಿ ಸೀತೆಯನ್ನ ಸ್ಮರಿಸುತ್ತಲೇ ಇದ್ದೆ. ಹಾಗೆ ಪರಿಶುದ್ಧ ಮನಸ್ಸಿನಿಂದಲೇ ಈ ಪಾತ್ರ ಮಾಡಿದ್ದೇನೆ ಅಂತಲೂ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed