Last Updated:
ಇಂದು ಧರ್ಮಶಾಲಾದಲ್ಲಿ ನಡೆಯುತ್ತಿದೆ. ಇದರ ನಡುವೆ ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಬಗ್ಗೆ ಚರ್ಚೆ ನಡೆಯುತ್ತಿವೆ.
ಐಪಿಎಲ್ (IPL) 2026 ಈಗ ಅಂತಿಮ ಹಂತದಲ್ಲಿದೆ. ಇಂದು, 19ನೇ ಸೀಸನ್‌ನ ಮೊದಲ ಕ್ವಾಲಿಫೈಯರ್ (Qualifier) ಪಂದ್ಯ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ಧರ್ಮಶಾಲಾ (Dharamshala) ದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯ ಕ್ರಿಕೆಟ್ (Cricket) ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಲೀಗ್ ಹಂತದಲ್ಲಿ ತಲಾ 18 ಅಂಕಗಳನ್ನು ಹೊಂದಿರುವ ಎರಡೂ ತಂಡಗಳು (Teams) ಅತ್ಯುತ್ತಮ ಫಾರ್ಮ್‌ನಲ್ಲಿವೆ. ಇಂದಿನ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಅದು ನೇರವಾಗಿ ಫೈನಲ್ (Final) ಗೆ ಮುನ್ನಡೆಯುತ್ತದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗುತ್ತದೆ.
ಕ್ವಾಲಿಫೈಯರ್- 1 ರಲ್ಲಿ ಸೋತ ತಂಡವು ಕ್ವಾಲಿಫೈಯರ್- 2 ರಲ್ಲಿ ಎಲಿಮಿನೇಟರ್‌ನ ವಿಜೇತರನ್ನು ಎದುರಿಸಲಿದೆ. ಇದಕ್ಕೂ ಮುನ್ನ ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಬಗ್ಗೆ ಚರ್ಚೆ ನಡೆಯುತ್ತಿವೆ.
ಐಪಿಎಲ್ 2026 ಕ್ವಾಲಿಫೈಯರ್ 1 ಪಂದ್ಯಕ್ಕೆ ಧರ್ಮಶಾಲಾ ಪಿಚ್ ಸಂಪೂರ್ಣವಾಗಿ ಸಿದ್ಧವಾಗಿದೆ. ಪಂದ್ಯಕ್ಕೂ ಮುನ್ನ ಪಿಚ್ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಧರ್ಮಶಾಲಾ ಪಿಚ್ ಯಾವಾಗಲೂ ಬೌಲರ್‌ಗಳಿಗೆ ಅನುಕೂಲಕರವಾಗಿದ್ದರೂ, ಕೆಲವು ಬ್ಯಾಟರ್ಗಳು ಕೂಡ ಇಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಇಂದಿನ ಪಂದ್ಯವು ಬ್ಯಾಟರ್ಗಳು ಮತ್ತು ಬೌಲರ್‌ಗಳ ನಡುವೆ ರೋಚಕ ಹಣಾಹಣಿ ಕಾಣಲಿದೆ.
ಐಪಿಎಲ್ 2026 ರಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಪಿಸಿಎ) ಕ್ರೀಡಾಂಗಣದಲ್ಲಿ ನಡೆದ ಎಲ್ಲಾ ಮೂರು ಪಂದ್ಯಗಳಲ್ಲಿ, ಮೊದಲ ಇನ್ನಿಂಗ್ಸ್ ಸ್ಕೋರ್ 200 ರನ್‌ಗಳ ಗಡಿಯನ್ನು ತಲುಪಿದೆ. ಧರ್ಮಶಾಲಾದಲ್ಲಿ ವೇಗದ ಬೌಲರ್‌ಗಳು ಸೀಮ್ ಚಲನೆ ಮತ್ತು ಹೆಚ್ಚುವರಿ ಬೌನ್ಸ್ ಮೂಲಕ ಪ್ರಾಬಲ್ಯ ಸಾಧಿಸಿದ್ದಾರೆ. ಆದರೆ ಈ ಆವೃತ್ತಿಯ ಅಂಕಿಅಂಶಗಳು ಧರ್ಮಶಾಲಾ ಕೇವಲ ಬೌಲರ್ ಸ್ನೇಹಿ ವಿಕೆಟ್ ಅಲ್ಲ ಎಂದು ಹೇಳಲಾಗುತ್ತದೆ.
ಟಾಪ್-ಐದು ಗರಿಷ್ಠ ಮೊತ್ತಗಳು
- 241/7 – ರಾಯಲ್ ಚಾಲೆಂಜರ್ಸ್ ಬೆಂಗಳೂರು (ವಿರುದ್ಧ ಪಂಜಾಬ್ ಕಿಂಗ್ಸ್, 2024)
- 236/5 – ಪಂಜಾಬ್ ಕಿಂಗ್ಸ್ (ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್, 2025)
- 232/2 – ಕಿಂಗ್ಸ್ ಇಲೆವೆನ್ ಪಂಜಾಬ್ (ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2011)
- 222/4 – ರಾಯಲ್ ಚಾಲೆಂಜರ್ಸ್ ಬೆಂಗಳೂರು (ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್, 2016)
- 216/7 – ಡೆಲ್ಲಿ ಕ್ಯಾಪಿಟಲ್ಸ್ (ವಿರುದ್ಧ ಪಂಜಾಬ್ ಕಿಂಗ್ಸ್, 2023)
ಕನಿಷ್ಠ ರನ್ ಡಿಫೆಂಡ್
- ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 167/9 ರನ್ ಗಳಿಸಿ, ಸಿಎಸ್‌ಕೆ ತಂಡವನ್ನು 139/9 ಗೆ ಕಟ್ಟಿಹಾಕಿ 28 ರನ್‌ಗಳಿಂದ ಜಯಗಳಿಸಿತು.
- ಐಪಿಎಲ್ 2011 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 170/6 ರನ್ ಗಳಿಸಿ ಗೆಲುವು ಸಾಧಿಸಿತ್ತು.
- ಐಪಿಎಲ್ 2013 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 171/4 ರನ್ ಗಳಿಸಿ ಗೆದ್ದಿತ್ತು.
- ಐಪಿಎಲ್ 2013 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು 183/8 ರನ್‌ಗಳನ್ನು ಡಿಫೆಂಡ್ ಮಾಡಿತ್ತು.
- ಐಪಿಎಲ್ 2011 ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಪಂಜಾಬ್ ತಂಡವು 199 ರನ್ ಚೇಸ್ ಮಾಡಲು ವಿಫಲವಾಗಿ 116 ರನ್‌ಗಳಿಗೆ ಆಲೌಟ್ ಆಯಿತು.
ಗರಿಷ್ಠ ಚೇಸಿಂಗ್ ಎಷ್ಟು?
- 213/2 – ಪಂಜಾಬ್ ಕಿಂಗ್ಸ್ (ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್, 2026)
- 205/4 – ಮುಂಬೈ ಇಂಡಿಯನ್ಸ್ (ವಿರುದ್ಧ ಪಂಜಾಬ್ ಕಿಂಗ್ಸ್, 2026)
- 195/4 – ಚೆನ್ನೈ ಸೂಪರ್ ಕಿಂಗ್ಸ್ (ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್, 2010)
- 189/6 – ರಾಜಸ್ಥಾನ್ ರಾಯಲ್ಸ್ (ವಿರುದ್ಧ ಪಂಜಾಬ್ ಕಿಂಗ್ಸ್, 2023)
- 178/5 – ಡೆಕ್ಕನ್ ಚಾರ್ಜರ್ಸ್ (ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್, 2010)
ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಇಲ್ಲಿವರಗೆ 17 ಐಪಿಎಲ್ ಪಂದ್ಯಗಳು ನಡೆದಿವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ 10 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ಮಾಡುವ ತಂಡ 7 ಬಾರಿ ಗೆಲುವು ಸಾಧಿಸಿದೆ. ಇದನ್ನು ಚೇಸಿಂಗ್ ಮೈದಾನವೆಂದು ಪರಿಗಣಿಸಲಾಗಿದೆ. ಟಾಸ್ ಬಗ್ಗೆ ನೋಡುವಾದರೆ, ಗೆದ್ದ ತಂಡ ಇಲ್ಲಿ 8 ಪಂದ್ಯಗಳನ್ನು ಗೆದ್ದು ಬೀಗಿದೆ. ಟಾಸ್ ಸೋತ ತಂಡ 9 ಪಂದ್ಯಗಳನ್ನು ಗೆದ್ದಿದೆ. ಟಾಸ್ ದಾಖಲೆಗಳು ಇಲ್ಲಿ ಮಹತ್ವದ ಪಾತ್ರವಹಿಸುವುದಿಲ್ಲ.
ಸಂಜೆಯ ಪಂದ್ಯದಲ್ಲಿ 200 ರನ್‌ಗಳ ಗುರಿಯನ್ನು ಇಲ್ಲಿ ಸುಲಭವಾಗಿ ಬೆನ್ನಟ್ಟಬಹುದು. ಇದಕ್ಕಾಗಿಯೇ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಆದರೆ, ಒಟ್ಟಾರೆ ಮೊದಲು ಬ್ಯಾಟಿಂಗ್ ಮಾಡಿದ ತಂಡ 10 ಪಂದ್ಯಗಳನ್ನು ಗೆದ್ದಿದೆ. ಇಂತಹ ಸಂದರ್ಭದಲ್ಲಿ ಆರ್ಸಿಬಿ ಗೆಲ್ಲಲು 230 ಕ್ಕೂ ಹೆಚ್ಚು ರನ್ ಗಳಿಸಬೇಕಾಗಿದೆ. ಜೊತೆಗೆ ಆರ್ಸಿಬಿ ವೇಗಿಗಳು ಚೇಸಿಂಗ್ ಸಮಯದಲ್ಲಿ ಜವಾಬ್ದಾರಿಯುತ ಬೌಲಿಂಗ್ ಪ್ರದರ್ಶನ ನೀಡಬೇಕಾಗಿದೆ.













